More

    ಕಾಡಾನೆಗಳ ದಾಳಿಗೆ ಕಾಫಿ, ಅಡಕೆ ಬೆಳೆ ನಾಶ

    ಮೂಡಿಗೆರೆ: ಗೌಡಹಳ್ಳಿ ಸಮೀಪದ ಹೆಮ್ಮದಿ ಗ್ರಾಮದಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆಗಳು ಕಾಫಿ, ಬಾಳೆ, ಅಡಕೆ, ಕಾಳುಮೆಣಸು ಬೆಳೆ ನಾಶ ಮಾಡಿವೆ. ಭಾನುವಾರ ಬೆಳಗ್ಗೆ ಮೂರು ಕಾಡಾನೆಗಳು ಹೆಮ್ಮದಿ ಗ್ರಾಮದ ಎಂ.ಎಸ್.ಹರೀಶ್ ಅವರ ಕಾಫಿ ತೋಟಕ್ಕೆ ನುಗ್ಗಿ ಫಸಲು ಬಂದಿದ್ದ ಕಾಫಿ, ಬಾಳೆ, ಅಡಕೆ ಮರಗಳನ್ನು, ಕಾಳುಮೆಣಸಿನ ಬಳ್ಳಿಗಳನ್ನು ತಿಂದು, ತುಳಿದು ನಾಶ ಪಡಿಸಿವೆ. ಹೊಸದಾಗಿ ನೆಟ್ಟಿದ್ದ ಅಡಕೆ ಗಿಡಗಳನ್ನೂ ಧ್ವಂಸಮಾಡಿವೆ. ಬೈನೆ ಮರಗಳನ್ನು ಸೀಳಿ ತಿಂದಿವೆ.

    ಗೌಡಹಳ್ಳಿ, ಕುಂಬರಡಿ, ಬೈದುವಳ್ಳಿ, ಹೆಮ್ಮದಿ, ಸತ್ತಿಗನಹಳ್ಳಿ ಊರುಬಗೆ ಮೂಲರಹಳ್ಳಿ ಭಾಗದಲ್ಲಿ ಮೂರು ಕಾಡಾನೆಗಳು ಅನೇಕ ವರ್ಷದಿಂದ ಬೀಡು ಬಿಟ್ಟಿವೆ. ನಾಲ್ಕೈದು ದಿನದಿಂದ ನಿರಂತರವಾಗಿ ಕಾಫಿ ತೋಟಗಳಿಗೆ ಲಗ್ಗೆಯಿಟ್ಟು ಬೆಳೆ ನಾಶ ಮಾಡುತ್ತಿವೆ. ಇತ್ತೀಚೆಗೆ ಸತ್ತಿಗನಹಳ್ಳಿ ಪ್ರಭಾಕರ್ ಎಂಬುವರು ಬೈಕ್​ನಲ್ಲಿ ಹೋಗುವಾಗ ಕಾಡಾನೆ ದಾಳಿ ನಡೆಸಿ ಬೈಕನ್ನು ಜಖಂಗೊಳಿಸಿತ್ತು. ಸವಾರ ತಪ್ಪಿಸಿಕೊಂಡಿದ್ದರು. ಕಾಡಾನೆಗಳ ನಿರಂತರ ದಾಳಿಯಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts