More

    ಕಾಗವಾಡದಲ್ಲಿ ಹಾಲಿ & ಮಾಜಿಗಳ ಕಾಳಗ

    ಬೆಳಗಾವಿ: ಮುಂಬರುವ ವಿಧಾನಸಭೆ ಚುನಾವಣೆಗೆ ಕಾಗವಾಡ ವಿಧಾನಸಭೆ ಕ್ಷೇತ್ರದಲ್ಲಿ ಈಗಿನಿಂದಲೇ ತಯಾರಿ ಬಲು ಜೋರಾಗಿ ನಡೆಯುತ್ತಿದೆ. ಗಡಿಯಂಚಿನ ಪಟ್ಟಣವಾಗಿರುವ ಕಾಗವಾಡದಲ್ಲಿ ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು, ಬಿಜೆಪಿ ಅಭ್ಯರ್ಥಿಯಾಗಲಿರುವ ಶಾಸಕ ಶ್ರೀಮಂತ ಪಾಟೀಲ ಅವರು ಮತ್ತೊಮ್ಮೆ ಚುನಾವಣೆ ಅಖಾಡಕ್ಕೆ ಇಳಿದು, ಹ್ಯಾಟ್ರಿಕ್​ ಗೆಲುವು ಸಾಧಿಸಲು ಮುಂದಾಗಿದ್ದಾರೆ.

    ಕಳೆದ ಬಾರಿ ಸೋತ ಅಭ್ಯರ್ಥಿಯಾಗಿರುವ ಮಾಜಿ ಶಾಸಕ ರಾಜು ಕಾಗೆ ಅವರಿಗೆ ಕಾಂಗ್ರೆಸ್​ ಪಕ್ಷದಿಂದ ಟಿಕೆಟ್​ ಕೊಡಬೇಕೋ? ಅಥವಾ ಬೇಡವೋ? ಎಂಬುದರ ಕುರಿತು ಈಗಿನಿಂದಲೇ ಚರ್ಚೆ ಬಿರುಸಿನಿಂದ ನಡೆಯುತ್ತಿದೆ. ಅನಾರೋಗ್ಯದಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಕಾಗೆ ಅವರು ರಾಜಕೀಯದಲ್ಲಿ ಈಗ ಮೊದಲಿನಂತೆ ಅಷ್ಟೊಂದು ಸಕ್ರಿಯವಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೂ, ಬಿಜೆಪಿ&ಕಾಂಗ್ರೆಸ್​ ಮಧ್ಯೆ ನೇರ ಹಣಾಹಣಿ ನಡೆಯುವುದು ಖಚಿತವಾಗಿದೆ.

    ನೀರಾವರಿ ಸೌಲಭ್ಯ: ಕಾಗವಾಡ ಕ್ಷೇತ್ರದಲ್ಲಿ ನೀರಾವರಿ ಸೌಲಭ್ಯವಿಲ್ಲದೆ ಬಂಜರು ಆಗಿರುವ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಮಾಜಿ ಸಚಿವ ಶ್ರೀಮಂತ ಪಾಟೀಲ ಅವರು, ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಮೂಲಕ ತಮ್ಮ ಕ್ಷೇತ್ರದ ಸಾವಿರಾರು ಎಕರೆ ಜಮೀನಿಗೆ ನೀರಿನ ಸೌಲಭ್ಯ ಕಲ್ಪಿಸಲು ಮುಂದಾಗಿದ್ದಾರೆ. ಇದು ಈ ಭಾಗದ ರೈತರಿಗೆ ವರದಾನವಾಗಲಿದೆ. ಡಿಸೆಂಬರ್​ ಮಾಸಾಂತ್ಯದವರೆಗೆ ನೀರು ಪೂರೈಕೆ ಆಗಲಿದೆ ಎಂದು ಇತ್ತೀಚೆಗೆ ಶ್ರೀಮಂತ ಪಾಟೀಲ ಘೋಷಣೆ ಮಾಡಿದ್ದಾರೆ. ಮಾಜಿ ಡಿಸಿಎಂ ಲಕ್ಷ$್ಮಣ ಸವದಿ ಕೂಡ ಮುಂದಿನ ಚುನಾವಣೆಯಲ್ಲಿ ಶ್ರೀಮಂತ ಪಾಟೀಲ ಅವರನ್ನು ಗೆಲ್ಲಿಸುವುದಕ್ಕಾಗಿ ಹಗಲಿರಳು ಶ್ರಮಿಸುವುದಾಗಿ ಹೇಳಿದ್ದಾರೆ.

    ಹಣಬಲ&ಜನಬಲ ಪ್ರಭಾವ: ಸಕ್ಕರೆ ಉದ್ಯಮಿಯಾಗಿರುವ ಶ್ರೀಮಂತ ಪಾಟೀಲ ಅವರು, ಹಣಬಲದ ಜತೆಗೆ ಜನಬಲ ಹೊಂದಿರುವ ಕಾಗವಾಡ ಕ್ಷೇತ್ರದ ಪ್ರಭಾವಿ ನಾಯಕರಾಗಿದ್ದಾರೆ. ಅವರ ವಿರುದ್ಧ ಮುಂದಿನ ಚುನಾವಣೆಯಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬ ಚಿಂತೆ ಕಾಂಗ್ರೆಸ್ಸಿಗರನ್ನು ಕಾಡುತ್ತಿದೆ.

    ಆಕಾಂಗಳ ವಿವರ: ಬಿಜೆಪಿಯಿಂದ ಶ್ರೀಮಂತ ಪಾಟೀಲ ಆಕಾಂಯಾಗಿದ್ದು, ಕಾಂಗ್ರೆಸ್​ ಪಕ್ಷದಿಂದ ರಾಜು ಕಾಗೆ ಮತ್ತು ಅಂಕಲಿಯ ಡಾ.ಮಗದುಮ್ಮ ಅವರು ಆಕಾಂಗಳ ಪಟ್ಟಿಯಲ್ಲಿದ್ದಾರೆ. ಎಲ್ಲ ಸಮುದಾಯಗಳ ಜತೆ ತಮ್ಮದೇ ಆದ ಸಂಪರ್ಕ ಹೊಂದಿರುವುದರಿಂದ ಮಗದುಮ್ಮಗೆೆ ಟಿಕೆಟ್​ ನೀಡಿದರೆ ಸೂಕ್ತ ಎಂಬ ಮಾತುಗಳು ಕೇಳಿ ಬರುತ್ತಿವೆ.

    7 ಬಾರಿ ಕಾಂಗ್ರೆಸ್​ ಗೆಲುವು: 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷದಿಂದ ಗೆದ್ದಿದ್ದ ಶ್ರೀಮಂತ ಪಾಟೀಲ ಅವರು, ಆಪರೇಷನ್​ ಕಮಲದಿಂದಾಗಿ ರಾಜ್ಯದಲ್ಲಿ ಬದಲಾದ ರಾಜಕೀಯ ಸನ್ನಿವೇಶದಿಂದ ಡಿಸೆಂಬರ್​ 5, 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ 18557 ಮತಗಳ ಭಾರಿ ಅಂತರದಿಂದ ಗೆದ್ದರು. ಕಾಂಗ್ರೆಸ್​ ಅಭ್ಯರ್ಥಿ ರಾಜು ಕಾಗೆ ಅವರನ್ನು ಸೋಲಿಸಿ, ಪುನರಾಯ್ಕೆಯಾಗಿ ಬಿಎಸ್​ವೈ ಸಂಪುಟದಲ್ಲಿ ಸೇರಿದರು. ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಾಗವಾಡ ಕ್ಷೇತ್ರ ಉದಯವಾದ ಬಳಿಕ 1962ರಿಂದ ಇಲ್ಲಿಯವರೆಗೆ ಕಾಂಗ್ರೆಸ್​ ಏಳು ಬಾರಿ ಗೆದ್ದಿದೆ. ನಾಲ್ಕು ಬಾರಿ ಬಿಜೆಪಿ, ನಾಲ್ಕು ಬಾರಿ ಜನತಾ ದಳದ ಅಭ್ಯರ್ಥಿಗಳು ಗೆದ್ದು ಆಡಳಿತ ನಡೆಸಿದ್ದಾರೆ.

    2 ಸಾವಿರ ಕೋಟಿ ರೂ ಅನುದಾನದಲ್ಲಿ ಅಭಿವೃದ್ಧಿ: ಕಾಗವಾಡ ತಾಲೂಕಿನ ಉತ್ತರ ಭಾಗವನ್ನು ನೀರಾವರಿಗೊಳಪಡಿಸುವ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಗೆ ಈಗಾಗಲೇ 4 ಟಿ.ಎಂ.ಸಿ ನೀರು ಹಂಚಿಕೆಯಾಗಿದೆ. ಈ ನೀರಾವರಿ ಯೋಜನೆ ಅನುಷ್ಠಾನದಿಂದ ಅತ್ಯಂತ ಬರಗಾಲಪೀಡಿತ ಪ್ರದೇಶಗಳ 36 ಗ್ರಾಮಗಳ 24,460 ಹೆಕ್ಟೇರ್​ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಸರ್ಕಾರದಿಂದ 1400 ಕೋಟಿ ರೂ. ಮಂಜೂರಾಗಿದೆ. ತಮ್ಮ ಅಧಿಕಾರ ಅವಧಿಯಲ್ಲಿ ಒಟ್ಟು 2 ಸಾವಿರ ಕೋಟಿ ರೂ ಅನುದಾನದಲ್ಲಿ ಮಾಡಿರುವ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು, ಮುಂದಿನ ಚುನಾವಣೆ ಎದುರಿಸಲಾಗುವುದು. ಮತದಾರರು ಮತ್ತೇ ನಮಗೆ ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ.
    |ಶ್ರೀಮಂತ ಪಾಟೀಲ ಶಾಸಕ

    ನಮ್ಮ ನಾಯಕರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಕಣಕ್ಕಿಳಿಸುವ ಅಭ್ಯರ್ಥಿ ಗಳ ಪರವಾಗಿ ನಾವು ಕೆಲಸ ಮಾಡು ತ್ತೇವೆ. ಈ ಬಾರಿ ಕಾಗವಾಡದಿಂದ ಕಾಂಗ್ರೆಸ್​ ಪಕ್ಷವನ್ನು ಗೆಲ್ಲಿಸುವುದ ಕ್ಕಾಗಿ ಹಗಲಿರುಳು ಶ್ರಮಿಸುತ್ತೇವೆ.
    | ಡಾ.ಎನ್​.ಎ. ಮಗದುಮ್ಮ, ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿ

    | ರಾಯಣ್ಣ ಆರ್​.ಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts