More

    ಕಾಂಗ್ರೆಸ್ಸಿನಿಂದ ದಲಿತರಿಗೆ ಅನ್ಯಾಯ: ಉಷಾ ದಾಸರ

    ವಿಜಯವಾಣಿ ಸುದ್ದಿಜಾಲ ಗದಗ

    ನಗರದ ವಿವಿಧ ವಾರ್ಡಗಳಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಅವರು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಗುರುವಾರ ಮತಯಾಚನೆ ಮಾಡಿದರು.

    ಪ್ರಚಾರದ ವೇಳೆ ಮಾತನಾಡಿದ ಅಧ್ಯಕ್ಷೆ ಉಷಾ ದಾಸರ, ಕಾಂಗ್ರೆಸ್ಸ ಪಕ್ಷ ಅಲ್ಪಸಂಖ್ಯಾತ ಮತ್ತು ದಲಿತರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತದೆ. ಇಂತಹ ಮನಸ್ಥಿತಿಯಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಎಲ್ಲ ಧರ್ಮಗಳನ್ನು ಸಮನಾಗಿ ಕಂಡು, ಎಲ್ಲ ಧರ್ಮದಲ್ಲಿ ಇರುವ ಬಡವರಿಗೆ ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿ ಎ ಕೂಟಕ್ಕೆ ಬಲ ತುಂಬಲು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

    ಇದೊಂದು ಮಹತ್ವದ ಚುನಾವಣೆ. ಈ ದೇಶದ ಚುಕ್ಕಾಣಿಯನ್ನು ಬಲಿಷ್ಠ ನಾಯಕನಿಗೆ ನೀಡಬೇಕು.  ಪ್ರತಿಯೊಬ್ಬ ಮತದಾರನಿಗೂ ತನ್ನ ಮತ ಗೆಲ್ಲಬೇಕೆಂಬ ಆಸೆ ಇರುತ್ತದೆ. ಯಾರು ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಅವರಿಗೆ ಮತ ಹಾಕಿದರೆ ಮತ ಗೆಲ್ಲುತ್ತದೆ.  ಬಿಜೆಪಿ 370 ಕ್ಕಿಂತಲೂ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದರು

    ನರೇಂದ್ರ ಮೋದಿಯವರು  ಸಾಮಾನ್ಯ ಕುಟುಂಬದಿಂದ ಬಂದಿದ್ದಾರೆ. ಅವರು ಅಪ್ಪಟ ದೇಶಭಕ್ತರು. ಅವರ ತಾಯಿ ತೀರಿಕೊಂಡಾಗ ಮೂರು ಗಂಟೆಯಲ್ಲಿ ಅಂತ್ಯಕ್ರಿಯೆ ಮಾಡಿ, ಮತ್ತೆ ದೇಶದ ಕೆಲಸಕ್ಕೆ ತೊಡಗಿದರು. ಮೋದಿಯವರು ಬಂದ ಮೇಲೆ ಭಯೋತ್ಪಾದನೆ ನಿಂತು ಹೋಗಿದೆ.  ಮೋದಿಯವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ಅಂಬೇಡ್ಕರ್ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ಗರೀಬಿ ಹಠಾವೊ ಅಂತ ಹೇಳಿ ಕಾಂಗ್ರೆಸ್ ತಮ್ಮ ರಾಜಕೀಯ ರೊಟ್ಟಿ ಬೇಯಿಸಿಕೊಂಡಿತು ಎಂದು ಉಷಾ ದಾಸರ ಹೇಳಿದರು.

    ಮಹೇಶ ದಾಸರ, ಪ್ರಶಾಂತ ನಾಯ್ಕರ, ಅರವಿಂದ ಕೆಲೂರ, ಸಾವಿತ್ರಿ ಪಾಟೀಲ, ಶಾರದಾ ಸಜ್ಜನರ,ಅಕ್ಕಮ್ಮ ವಸ್ತ್ರದ , ಜಯಣ್ಣ ಶೆಟ್ಟರ, ನಾಗರಾಜ್ ಗುರಿಕಾರ, ರೇಖಾ ಬಂಗಾರಶೆಟ್ರ, ಗೋಪಾಲ್ ಗಡ್ಡ ದವರ, ಚಂದ್ರು ಒಂಟೆತ್ತಿನ ಸೇರಿದಂತೆ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts