More

    ಕಾಂಗ್ರೆಸ್‌ಗೆ ಭರ್ಜರಿ ಗೆಲುವು ನಿಶ್ಚಿತ

    ಕಲಬುರಗಿ: ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಉತ್ತಮ ವಾತಾವರಣವಿದ್ದು, ಈಗಾಗಲೇ ಕ್ಷೇತ್ರದಲ್ಲಿ ಮೂರು ಸುತ್ತು ಭೇಟಿ ನೀಡಿz್ದೆÃನೆ. ಕಳೆದ ಬಾರಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ಗೆಲುವು ಸಾಧಿಸಿದ್ದೆ. ಈ ಬಾರಿ ನಮ್ಮ ಸರ್ಕಾರ ೩೪ ಸಾವಿರ ಶಿಕ್ಷಕರನ್ನು ವರ್ಗಾವಣೆ ಮಾಡಿದೆ, ಏಳನೇ ವೇತನ ಆಯೋಗ, ಓಪಿಎಸ್ ನಮ್ಮ ಪ್ರಣಾಳಿಕೆಯಲ್ಲಿದೆ. ಆದ್ದರಿಂದ ಪದವೀಧರರು ಕಾಂಗ್ರೆಸ್‌ಗೆ ಬೆಂಬಲಿಸಿದ್ದು, ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾದೇಶಿಕ ಆಯುಕ್ತ, ಚುನಾವಣಾಧಿಕಾರಿ ಕೃಷ್ಣಾ ಬಾಜಪೇಯಿ ಅವರಿಗೆ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿ ಮಾತನಾಡಿದ ಅವರು, ಕಳೆದ ಬಾರಿ ನನ್ನ ಅಧಿಕಾರವಧಿಯಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ಈ ಮಧ್ಯೆ ಕರೋನಾ ಎದುರಾಗಿತ್ತು. ಇರುವ ಸಮಯದಲ್ಲಿ ಪದವೀಧರರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿz್ದÉÃನೆ. ಅತಿಥಿ ಉಪನ್ಯಾಸಕರಿಗೆ ೧೫ ಸಾವಿರ ವೇತನ ಹೆಚ್ಚಿಸಲಾಗಿದೆ. ಉಪನ್ಯಾಸಕರು, ಅತಿಥಿ ಶಿಕ್ಷಕರ ಕಾಯಂ ಕುರಿತು ಮುಖ್ಯಮಂತ್ರಿ, ಡಿಸಿಎಂ ಜತೆಗೆ ಚರ್ಚಿಸಿ, ಸಕಾರಾತ್ಮಕ ಸ್ಪಂದನೆಗೆ ಶ್ರಮಿಸಲಾಗುವುದು. ಎಲ್ಲೆಡೆ ಉತ್ತಮ ವಾತಾವರಣವಿದ್ದು, ಪಕ್ಷದ ಶಕ್ತಿಯಿಂದ ಗೆಲುವು ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಶಾಸಕ ಅಲ್ಲಮಪ್ರಭು ಪಾಟೀಲ್, ಎಂಎಲ್‌ಸಿ ಭೀಮರಾವ ಪಾಟೀಲ್, ಮಾಜಿ ಸಚಿವರಾದ ರಾಜಶೇಖರ ಪಾಟೀಲ್ ಹುಮನಾಬಾದ್, ರೇವುನಾಯಕ ಬೆಳಮಗಿ, ಮಾಜಿ ಎಂಎಲ್ಸಿ ಶರಣಪ್ಪ ಮಟ್ಟೂರ, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ್, ಡಾ.ಎಸ್.ಬಿ.ಕಾಮರಡ್ಡಿ, ಮಜರ್ ಅಲಂ ಖಾನ್, ಈರಣ್ಣ ಝಳಕಿ, ರೇವಣಸಿದ್ದಪ್ಪ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts