More

    ಕಳಪೆ ಬೀಜ ಪೂರೈಸಿದರೆ ಕಂಪನಿಗಳೇ ಹೊಣೆ

    ಹಾವೇರಿ: ಮೊಳಕೆ ಸಮಸ್ಯೆಯಿದ್ದರೆ ರೈತರಿಗೆ ಕಂಪನಿ ಹಾಗೂ ಪೂರೈಕೆದಾರರಿಂದ ಬೀಜ ಹಾಗೂ ಬಿತ್ತನೆ ವೆಚ್ಚವನ್ನು ಭರಿಸಬೇಕು. ಮೊಳಕೆ ಸಮಸ್ಯೆ ಕಂಡುಬಂದಿರುವುದರಿಂದ ರೈತರಿಗೆ ಸೋಯಾ ಬದಲು ಮೆಕ್ಕೆಜೋಳ, ಶೇಂಗಾ ಬಿತ್ತನೆಗೆ ಶಿಫಾರಸ್ಸು ಮಾಡಿ ಮನವೊಲಿಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

    ಸೋಯಾಬೀನ್ ಬಿತ್ತನೆ ಬೀಜದಲ್ಲಿ ಮೊಳಕೆ ಸಮಸ್ಯೆ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಂಜೆ ಕೃಷಿ ವಿವಿ ತಜ್ಞರು ಹಾಗೂ ಬೆಳಗಾವಿ ವಿಭಾಗದ ವಿವಿಧ ಜಿಲ್ಲೆಯ ಕೃಷಿ ಜಂಟಿ ನಿರ್ದೇಶಕರ ತುರ್ತು ಸಭೆ ನಡೆಸಿ ಅವರು ಮಾತನಾಡಿದರು.

    ರೈತರಿಗೆ ಪೂರೈಸಿರುವ ಬೀಜ ಕಳಪೆಯಾಗಿದ್ದರೆ ಪೂರೈಕೆ ಮಾಡಿದ ಕಂಪನಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಈ ಕುರಿತಂತೆ ರ್ಚಚಿಸಲು ಮಂಗಳವಾರ ಬೆಂಗಳೂರನಲ್ಲಿ ಸಭೆ ಆಯೋಜಿಸುವಂತೆ ಕೃಷಿ ಇಲಾಖೆ ಅಪರ ನಿರ್ದೇಶಕ ವೆಂಕರಾಮರೆಡ್ಡಿ ಪಾಟೀಲ ಅವರಿಗೆ ಸೂಚಿಸಿದರು.

    ರಾಜ್ಯದಲ್ಲಿ ಸೋಯಾ ಬಿತ್ತನೆ ಪ್ರದೇಶಗಳಲ್ಲಿ ಬೀಜ ಸರಬರಾಜು, ವಿತರಣೆ, ಮೊಳಕೆ ಸಮಸ್ಯೆ ಕುರಿತಂತೆ ರಾಜ್ಯದ ಕೃಷಿ ಇಲಾಖೆಯ ಅಪರ ಕೃಷಿ ನಿರ್ದೇಶಕ ವೆಂಕರಾಮರೆಡ್ಡಿ ಪಾಟೀಲ ಮಾತನಾಡಿ, ರಾಜ್ಯದಲ್ಲಿ 1,30,214.01ಕ್ವಿಂಟಾಲ್ ಸೋಯಾಬೀನ್ ಬಿತ್ತನೆ ಬೀಜವನ್ನು ಸರಬರಾಜು ಮಾಡಲಾಗಿದೆ. ಇದರಲ್ಲಿ 1,02,745.05 ಕ್ವಿಂಟಾಲ್ ಬೀಜವನ್ನು ವಿತರಣೆ ಮಾಡಲಾಗಿದೆ. ಮೊಳಕೆ ಸಮಸ್ಯೆ ಕಾರಣ 2,498ರೈತರು ಮರಳಿ ಬೀಜವನ್ನು ನೀಡಿದ್ದಾರೆ. ರಾಜ್ಯದಲ್ಲಿ ಸೋಯಾಬೀನ್ ಬಿತ್ತನೆ ಮಾಡಿದ ನಾಲ್ಕು ಜಿಲ್ಲೆಗಳ 9,695ರೈತರು ಬಿತ್ತನೆ ಮಾಡಿದ 8,592.54 ಹೆಕ್ಟೇರ್ ಪ್ರದೇಶದಲ್ಲಿ ಮೊಳಕೆ ಸಮಸ್ಯೆ ಕಂಡುಬಂದಿದೆ ಎಂದರು.

    ಹಾವೇರಿ ಜಿಲ್ಲೆಯಲ್ಲಿ 8,064.06ಕ್ವಿಂಟಾಲ್ ಬೀಜ ಸರಬರಾಜಾಗಿದ್ದು, 7,410ಕ್ವಿಂಟಾಲ್ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ಇದರಲ್ಲಿ 1,401ಕ್ವಿಂಟಾಲ್ ಬೀಜವನ್ನು ರೈತರು ಹಿಂತಿರುಗಿಸಿದ್ದಾರೆ. 1,434 ರೈತರ 942.05 ಹೆಕ್ಟೇರ್ ಪ್ರದೇಶದಲ್ಲಿ ಮೊಳಕೆ ಸಮಸ್ಯೆ ಕಂಡುಬಂದಿದೆ ಎಂದರು.

    ಸಭೆಯಲ್ಲಿ ಶಾಸಕ ಅರುಣಕುಮಾರ ಪೂಜಾರ, ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಸಿಇಒ ರಮೇಶ ದೇಸಾಯಿ, ಧಾರವಾಡ ವಿಶ್ವವಿದ್ಯಾಲಯದ ಕುಲಪತಿ ಮಹದೇವ ಛಟ್ಟಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಜಂಟಿ ಕೃಷಿ ನಿರ್ದೇಶಕರಾದ ರಾಜಶೇಖರ ಬಿಜಾಪುರ, ಬಿ. ಮಂಜುನಾಥ, ಜಿಲಾನಿಬಾಷಾ, ಚೇತನಾ ಪಾಟೀಲ, ಧಾರವಾಡ ವಿವಿ ಬೀಜ ಘಟಕದ ವಿಶೇಷಾಧಿಕಾರಿ ಡಾ. ಇಲ್ಲಿ, ಹನುಮನಮಟ್ಟಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಅಶೋಕ ಪಿ., ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts