More

    ಕಲ್ಲಂಗಡಿ ಬೆಳೆಗೆ ಬಂತು ಬಂಪರ್ ಬೆಲೆ

    ಮಲ್ಲಪ್ಪ ಗೌಡ ಔರಾದ್
    ಶಿಕ್ಷಕ ವೃತ್ತಿಗೆ ಗುಡ್ ಬೈ ಹೇಳಿ ಸ್ವಗ್ರಾಮಕ್ಕೆ ತೆರಳಿ ಕೃಷಿ ಚಟುವಟಿಕೆ ಕೈಗೊಂಡಾಗ ಬಂಪರ್ ಬೆಲೆ ತಂದದ್ದು ಮ್ಯಾಕ್ಸ್ ತಳಿಯ ಕಲ್ಲಂಗಡಿ ಬೆಳೆ. ನಾಗುರ (ಎಂ) ಗ್ರಾಮದ ಯುವ ರೈತ ಸುನೀಲಕುಮಾರ ಪಾಟೀಲ್ ಅವರು ಭರಪೂರ ಕಲ್ಲಂಗಡಿ ಬೆಳೆದು ಬದುಕು ಸಿಹಿಯಾಗಿಸಿಕೊಂಡಿದ್ದಾರೆ.

    ಬಿಎಸ್ಸಿ ಪದವೀಧರರಾದ ಸುನೀಲಕುಮಾರ ಭಾಲ್ಕಿ ತಾಲೂಕಿನ ಹಲಬರ್ಗಾದ ಖಾಸಗಿ ಶಾಲೆಯೊಂದರಲ್ಲಿ ಕಂಪ್ಯೂಟರ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಕರೊನಾ ಮಹಾಮಾರಿಯಿಂದಾಗಿ ಶಾಲೆ ಬಂದಾಯಿತು. ಆಗ ದಿಕ್ಕು ತೋಚದೆ ಸ್ವಗ್ರಾಮಕ್ಕೆ ಮರಳಿ ತೋಟಗಾರಿಕೆ ಇಲಾಖೆ ಹಾಗೂ ರಿಲಯನ್ಸ್ ಫೌಂಡೇಷನ್ ಸಹಕಾರ, ಮಾರ್ಗದರ್ಶನ ಪಡೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ಆರಂಭದಲ್ಲಿ ಶಿರಡಿ ಗುಲಾಬಿ ಬೆಳೆದು ಯಶಸ್ಸು ಕಂಡಿದ್ದ ಸುನೀಲಕುಮಾರ, ಈಗ ತಮ್ಮ ಎರಡು ಎಕರೆ ಜಮೀನಿನಲ್ಲಿ 1.5 ಲಕ್ಷ ರೂ. ಖಚರ್ು ಮಾಡಿ ಸುಮಾರು 50 ಟನ್ ಕಲ್ಲಂಗಡಿ ಬೆಳೆದು ಸಾಧನೆ ಮಾಡಿದ್ದಾರೆ. ಅಂದಾಜು 4 ಲಕ್ಷ ರೂ. ಲಾಭ ಗಳಿಸಿದ್ದಾರೆ.

    ಫೆಬ್ರವರಿ ತಿಂಗಳಲ್ಲಿ ಕಲ್ಲಂಗಡಿ ಸಸಿಗಳನ್ನು ನಾಟಿ ಮಾಡಿ ಜಮೀನಿಗೆ ಡ್ರಿಪ್ ಮಾಡಿಸಿದ್ದಾರೆ. ಜಮೀನಿನಲ್ಲಿ ರಿಲಯನ್ಸ್ ಫೌಂಡೇಷನ್ ಸಹಯೋಗದಲ್ಲಿ ಉಚಿತವಾಗಿ ಒಂದು ತೆರೆದ ಬಾವಿ ನಿಮರ್ಿಸಿಕೊಂಡು ಬೆಳೆಗೆ ನೀರು ಪೂರೈಸಿದ್ದಾರೆ. ಕೇವಲ ಎರಡು ತಿಂಗಳಲ್ಲಿ ಬೆಳೆ ಕೈಗೆ ಬಂದಿದ್ದು ಹೈದರಾಬಾದ್ನಿಂದ ವ್ಯಾಪಾರಿಗಳು ಖುದ್ದಾಗಿ ರೈತನ ತೋಟಕ್ಕೆ ಬಂದು ಕೆ.ಜಿಗೆ 10.50 ರೂ.ನಂತೆ ಕಲ್ಲಂಗಡಿ ಖರೀದಿಸಿ ಸ್ಥಳದಲ್ಲಿಯೇ ಹಣ ಪಾವತಿ ಮಾಡುತ್ತಿದ್ದಾರೆ. ಇನ್ನು ಫಸಲು ಚೆನ್ನಾಗಿ ಬಂದಿರುವ ಕಾರಣ ಸುತ್ತಮುತ್ತಲಿನ ಚಿಲ್ಲರೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಜಮೀನಿಗೆ ಭೇಟಿ ನೀಡಿ ಬೆಳೆ ನೋಡಿ ಭೇಶ್ ಎನ್ನುತ್ತಿದ್ದಾರೆ. ತೆರೆದ ಬಾವಿಯ ನೀರನ್ನೇ (ಮಳೆ ನೀರು) ಸದ್ಬಳಕೆ ಮಾಡಿಕೊಂಡು ಉತ್ತಮ ಫಸಲು ಪಡೆದಿರುವುದು ಗಮನಾರ್ಹ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts