More

    ಕಲ್ಮೇಶ್ವರ ದೇವಸ್ಥಾನದ ಪುಷ್ಕರಣಿ ಸ್ವಚ್ಛಗೊಳಿಸಿ

    ಮುಂಡಗೋಡ: ಪಟ್ಟಣದ ಕಲ್ಮೇಶ್ವರ ಓಣಿಯಲ್ಲಿರುವ ಶ್ರೀ ಕಲ್ಮೇಶ್ವರ ದೇವಸ್ಥಾನದ ಹೊಂಡದಲ್ಲಿ ಗಿಡ-ಗಂಟೆಗಳು ಬೆಳೆದಿದ್ದು, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಸ್ವಚ್ಛತೆ ಮಾಡಿಸಬೇಕು ಎಂದು ದೇವಸ್ಥಾನದ ಟ್ರಸ್ಟ್​ನವರು ಮಂಗಳವಾರ ಆಗ್ರಹಿಸಿದ್ದಾರೆ.

    ಕಲ್ಮೇಶ್ವರ ದೇವಸ್ಥಾನ ಪುರಾತನ ದೇಗುಲವಾಗಿದೆ. ಇಲ್ಲಿನ ಹೊಂಡವನ್ನು ಹಿರಿಯರು ಪುಷ್ಕರಣಿ ಎಂದು ಕರೆಯುತ್ತಿದ್ದರು. ಇದೇ ನೀರನ್ನು ನಿತ್ಯ ಕಲ್ಮೇಶ್ವರ ಮೂರ್ತಿಯ ಪೂಜೆಗೆ ಬಳಸಲಾಗುತ್ತಿತ್ತು. ಹೊಂಡದಲ್ಲಿ ತ್ಯಾಜ್ಯ ತುಂಬಿರುವುದರಿಂದ ಅಕ್ಕ- ಪಕ್ಕದಲ್ಲಿರುವ ಜನರಿಗೆ ರೋಗ-ರುಜಿನಗಳ ಭೀತಿ ಶುರುವಾಗಿದೆ. ಪ.ಪಂ. ಅಧಿಕಾರಿಗಳು, ಜನಪ್ರತಿನಿಧಿಗಳು ಆದಷ್ಟು ಬೇಗ ಈ ಹೊಂಡವನ್ನು ಸ್ವಚ್ಛಗೊಳಿಸಬೇಕು ಎಂದು ಶ್ರೀ ಕಲ್ಮೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶ್ರೀಕಾಂತ ಪಾಟೀಲ, ಉಪಾಧ್ಯಕ್ಷ ನಾಗರಾಜ ರಾಯ್ಕರ, ಕಾರ್ಯದರ್ಶಿ ರವಿಕಾಂತ ಓಣಿಕೇರಿ, ಸದಸ್ಯರಾದ ವಿನಾಯಕ ಶೇಟ್, ರಾಘವೇಂದ್ರ ಟೋಪೋಜಿ, ರಾಘವೇಂದ್ರ ತಿಮ್ಮಾಪುರ, ಮಂಜುನಾಥ ಕುಂಬ್ಳೆಪ್ಪನವರ, ಸಹದೇವಪ್ಪ ರಜಾಯಿ, ನಾಗಪ್ಪ ಲಚ್ಚಿ, ಚಂದ್ರಶೇಖರ ಬಂಕಾಪುರಮಠ ಮತ್ತು ನಾಗರಾಜ ಬೆಂಡಿಗೇರಿಮಠ ಆಗ್ರಹಿಸಿದ್ದಾರೆ.

    ಕಳೆದ ಎರಡು ವರ್ಷಗಳ ಹಿಂದೆ ಶ್ರೀ ಕಲ್ಮೇಶ್ವರ ದೇವಸ್ಥಾನದ ಹೊಂಡವನ್ನು ಸ್ವಚ್ಛಗೊಳಿಸಲಾಗಿತ್ತು. ಈಗ ಮತ್ತೆ ಹೊಂಡದಲ್ಲಿ ಗಿಡ ಗಂಟಿಗಳು ಬೆಳೆದಿರುವುದು ನನ್ನ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಹೊಂಡ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
    | ಸಂಗನಬಸಯ್ಯ ಪ.ಪಂ. ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts