More

    ಕಲೆಗೆ ಜನಪದರು ವೇದಿಕೆ ಕೊಡುಗೆ ಅಪಾರ, ಭೀಷ್ಮ ರಾಮಯ್ಯ ನಿರ್ದೇಶನದ ಯಥಾ ಪ್ರಕಾರ ನಾಟಕ ಪ್ರದರ್ಶನ

    ಹೊಸಕೋಟೆ: ನೂತನ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸುತ್ತಿರುವ ಈ ಜನಪದರು ರಂಗಮಂದಿರದಿಂದ ಸಾಕಷ್ಟು ಕಲಾವಿದರು ಸಮಾಜದ ಮುನ್ನೆಲೆಗೆ ಬಂದಿದ್ದು, ಕಲೆ ಉಳಿವಿಗೆ ಜನಪದರು ಸಂಸ್ಥೆ ಕೊಡುಗೆ ಅಪಾರ ಎಂದು ನಿರ್ದೇಶಕ ಭೀಷ್ಮರಾಮಯ್ಯ ಸಂತಸ ವ್ಯಕ್ತಪಡಿಸಿದರು.

    ನಗರದ ಜನಪದರು ಸಾಂಸ್ಕೃತಿಕ ವೇದಿಕೆಯಿಂದ ರಂಗಮಾಲೆ 55ರ ಸಂಚಿಕೆ ನಿಮಿತ್ತ ನಗರದ ಹೊರವಲಯದ ನಿಂಬೆಕಾಯಿಪುರದ ಜನಪದರು ರಂಗಮಂದಿರದಲ್ಲಿ ಶನಿವಾರ ಬೆಂಗಳೂರಿನ ಅಂತರಂಗ ಬಹಿರಂಗ ತಂಡ ಅಭಿನಯದ ಭೀಷ್ಮ ರಾಮಯ್ಯ ನಿರ್ದೇಶನದ ಯಥಾ ಪ್ರಕಾರ ನಾಟಕ ಪ್ರದರ್ಶನದಲ್ಲಿ ಮಾತನಾಡಿದರು.

    ಹುಟ್ಟುವ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿ ಕಲೆ ಅವಿಭಾಜ್ಯ ಅಂಗವಾಗಿರುತ್ತದೆ. ಇಂತಹ ಕಲೆಯನ್ನಾಧರಿಸಿ ಲಕ್ಷಾಂತರ ಜನ ಜೀವನದಲ್ಲಿ ಉತ್ತುಂಗಕ್ಕೆ ಏರಿದ್ದಾರೆ. ಉತ್ತಮ ವಿಚಾರಗಳನ್ನು ತಿಳಿದು ಸಮಾಜಕ್ಕೂ ಉತ್ತಮ ಸಂದೇಶ ನೀಡುತ್ತಾ ಬಂದಿದ್ದಾರೆ. ಅಂತಹವರಿಗೆ ಜನಪದರು ರಂಗಮಂದಿರ ಉತ್ತಮ ವೇದಿಕೆಯಾಗಿದೆ ಎಂದರು.

    ಜನಪದರು ಸಾಂಸ್ಕೃತಿಕ ವೇದಿಕೆ ನಿರ್ದೇಶಕ ಬೆಳತ್ತೂರು ಸುರೇಶ್ ಮಾತನಾಡಿ, 6 ವರ್ಷಗಳಿಂದ ಜನಪದರು ಸಾಂಸ್ಕೃತಿಕ ವೇದಿಕೆಯಿಂದ ಪ್ರತಿ ತಿಂಗಳ 2ನೇ ಶನಿವಾರ ನಾಟಕೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಈ ಭಾಗದ ಜನರ ಅಭಿರುಚಿಯಿಂದ ಈ ಭಾಗದಲ್ಲಿ ಜನಪದರು ರಂಗಮಂದಿರ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು.

    ೆ.22 ಹಾಗೂ 23 ರಂದು ಮೈಸೂರು ರಂಗಾಯಣ ವಿದ್ಯಾರ್ಥಿಗಳಿಂದ ಎರಡು ದಿನಗಳ ನಾಟಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

    ವೇದಿಕೆ ಅಧ್ಯಕ್ಷ ಕಾಟಂನಲ್ಲೂರು ಪಾಪಣ್ಣ, ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ್, ಸಿದ್ದೇಶ್ವರ ದೊಡ್ಡಬನಹಳ್ಳಿ, ಸುರೇಶ್, ಶಿವಕುಮಾರ್, ಮಮತಾ, ಮುನಿರಾಜು ಸುಮಿತ್ರಮ್ಮ ಹಾಗೂ ರಾಮಮೂರ್ತಿ, ದಾಸೋಹಿ ಬೊಮ್ಮೇನಹಳ್ಳಿ ಮುನಿರಾಜ್ ಹಾಗೂ ಮೊದಲಾದವರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts