More

    ಕಲಬುರಗಿಯಲ್ಲಿ ಶೂಟೌಟ್: ಕಳ್ಳರಿಗೆ ಗುಂಡೇಟು

    ಕಲಬುರಗಿ: ಕಳ್ಳತನ ಮಾಡಲು ಬಂದು ಸಿಕ್ಕು ಬಿದ್ದ ದರೋಡೆಕೋರರು ಪೇದೆ ಮೇಲೆ‌ ಚಾಕುವಿನಿಂದ ದಾಳಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತ್ಮರಕ್ಣಣೆಗಾಗಿ ಪೊಲೀಸರು ಪ್ರತಿಯಾಗಿ ‌ ಗುಂಡು ಹಾರಿಸಿದ್ದು, ಮಹಾರಾಷ್ಟ್ರ ಮೂಲದ ಇಬ್ಬರು ದರೋಡೆಕೋರರ ಕಾಲಿಗೆ ಗುಂಡೇಟು ತಗುಲಿದ ಘಟನೆ ಬುಧವಾರ ನಸುಕಿನಲ್ಲಿ ನಡೆದಿದೆ.

    ತೊಗರಿ ನಾಡು ಕಲಬುರಗಿ ನಗರದಲ್ಲಿ ಖಾಕಿಪಡೆಯ ಪಿಸ್ತೂಲ್ ‌ಮತ್ತೇ ಸದ್ದು ಮಾಡಿದೆ. ಈ ಹಿಂದೆ ನಗರದಲ್ಲಿ ‌ಹೆಚ್ಚಿದ್ದ ರೌಡಿಗಳನ್ನು ಮಟ್ಟ ಹಾಕಲು ಸರಣಿಯಂತೆ‌ ಶೂಟೌಟ್ ಘಟನೆಗಳು ನಡೆದಿದ್ದವು. ಈಗ ಮತ್ತೆ ಪೊಲೀಸರು ಮೈಕೊಡವಿಕೊಂಡು ಎದ್ದಿದ್ದಾರೆ. ಕಳೆದ ಕೆಲವು ದಿನಗಳಿಂದ ‌ನಗರದಲ್ಲಿ ಕಳ್ಳರ ಉಪಟಳ ಹೆಚ್ಚಿತ್ತು.

    ಸರ್ಕಲ್ ಇನ್ಸ್ ಪೆಕ್ಟರ ಪಂಡಿತ್ ಸಗರ್ ನಡೆಸಿದ ಫೈರಿಂಗ್‌ನಲ್ಲಿ ದರೋಡೆಕೋರರಾದ ಲವಾ ಮತ್ತು ದೇವಿದಾಅ ಗಾಯಗೊಂಡಿದ್ದಾರೆ. ಗಾಯಾಳುಗಳು ಮಹಾರಾಷ್ಟ್ರದ ಉಸ್ಮಾನಾಬಾದ ಜಿಲ್ಲೆ ತುಳಜಾಪೂರ ತಾಲೂಕಿನ ಝಳಕೋಳ ಗ್ರಾಮದವರು. ನಗರದ ಹೊರವಲಯದಲ್ಲಿ ವಾಸವಾಗಿದ್ದಾರೆ.

    ಗುಂಡೇಟು ತಿಂದವರು ಸೇರಿದಂತೆ ‌ಕೆಲವರು ಹಗಲಲ್ಲಿ ದೇವರ ಪ್ರತಿಮೆ ಹೊತ್ತು ಗಲ್ಲಿ ಗಲ್ಲಿ ಪ್ರದರ್ಶನ ಮಾಡುವ ಮೂಲಕ ಹಣ, ಆಹಾರ ಧಾನ್ಯ ಜನರಿಂದ ಪಡೆದುಕೊಳ್ಲುತ್ತಿದ್ದರು. ಮಹಾರಾಷ್ಟ್ರ ಮೂಲದ ಈ ಗ್ಯಾಂಗ್‌ನವರು ರಾತ್ರಿಯಾಗುತ್ತಿದ್ದಂತೆ ಮನೆ ಮನೆಗಳಿಗೆ ನುಗ್ಗಿ ದರೋಡೆ ಮಾಡುವ ಕೆಲಸ ಮಾಡುತ್ತಿದ್ದರು.

    ನಡೆದಿದ್ದಾದ್ದು ಇಷ್ಟು: ನಿನ್ನೆ ರಾತ್ರಿ ಈ ದರೋಡೆಕೋರರ ಗ್ಯಾಂಗ್, ಕಲಬುರಗಿ ನಗರದ ಬಿದ್ದಾಪುರ ಕಾಲನಿಯಲ್ಲಿರುವ ಕೆಲವು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿದೆ. ಬಿದ್ದಾಪುರ ಜನ ಪೊಲೀಸ್ ಕಂಟ್ರೋಲ್ ರೂಮ್‌ಗೆ ನೀಡಿದ್ದಾರೆ. ಮಾಹಿತಿ ಆಧರಿಸಿ ಅಶೋಕ ನಗರ ಠಾಣಾ ಪೊಲೀಸರು, ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಷ್ಟೇ ಅಲ್ಲ, ಸಾರ್ವಜನಿಕರ ಸಹಕಾರದೊಂದಿಗೆ ನಾಲ್ವರು ದರೋಡೆಕೋರರನ್ನು ವಶಕ್ಕೆ ತೆಗೆದುಕೊಂಡರು.

    ವಿಚಾರಿಸಿದ ಬಳಿಕ, ಅವರು ವಾಸವಿದ್ದ ಜಾಗಕ್ಕೆ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಇಬ್ಬರು ದರೋಡೆಕೋರರು ತಮ್ಮ ಬಳಿ ಇದ್ದ ಚಾಕುವಿನಿಂದ ಅಶೋಕನಗರ ಠಾಣೆ ಪೊಲೀಸ್ ಕಾನ್ಸ್‌ಟೇಬಲ್ ಶಿವಶರಣಪ್ಪ ಮೇಲೆ ದಾಳಿ ಮಾಡಿ ಇರಿದು ತಪ್ಪಿಸಿಕೊಳ್ಳಲು ಯತ್ನಿಸಿದರು.

    ಮತ್ತೆ ಚಾಕು ತೋರಿಸಿ ಓಡಲು ಯತ್ನಿಸಿದರು. ಆಗ ಜತೆಗಿದ್ದ ಇನ್ಸ್ ಪೆಕ್ಟರ್, ಪಂಡಿತ್ ಸಾಗರ್ ತಮ್ಮ ಹಾಗೂ ಸಿಬ್ಬಂದಿಯ ಆತ್ಮ ರಕ್ಷಣೆಗಾಗಿ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ದರೋಡೆಕೋರರು ತಮ್ಮ ಕೈಯಲ್ಲಿದ್ದ ಚಾಕು ಬಿಸಾಕದೆ, ಮತ್ತೇ ದಾಳಿ ಮಾಡಲು ಯತ್ನಿಸಿದಾಗ ದರೋಡೆಕೋರರತ್ತ ಫೈರಿಂಗ್ ಮಾಡಿದ್ದಾರೆ.  ಆಗ ಕಾಡತೂಸು ಇಬ್ಬರು ದರೋಡೆಕೋರ ಕಾಲು ಹೊಕ್ಕಿವೆ. ಗಾಯಗೊಂಡ ದರೋಡೆಕೋರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯವಿಲ್ಲ.

    ಬಬಲಾದ ಬಳಿ ಶೆಡ್ ಹಾಕಿಕೊಂಡು ಠಿಕಾಣಿ
     ಕಲಬುರಗಿ ಹೊರವಲಯದ ಬಬಲಾದ್ ಗ್ರಾಮದ ರಸ್ತೆಯಲ್ಲಿರುವ ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ಈ ಗ್ಯಾಂಗ್ ವಾಸವಿತ್ತು. ಹಗಲು ಹೊತ್ತಿನಲ್ಲಿ ದೇವರ ವಿಗ್ರಹ ಇರಿಸಿಕೊಂಡು ನಗರದ ಗಲ್ಲಿ ಗಲ್ಲಿಗಳಿಗೆ ತೆಗೆದುಕೊಂಡು ಹೋಗಿ ಸಾರ್ವಜನಿಕರು ಕೊಟ್ಟಂತಹ ಹಣ ದವಸ ಧಾನ್ಯ ಪಡೆದುಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ಅವರು ರಾತ್ರಿ ಯಾವ ಮನೆಗಳ ಮೇಲೆ ದಾಳಿ ಮಾಡಬೇಕು ಎನ್ನುವುದರ ಸ್ಕೆಚ್ ಸಹ ರೂಪಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಜಿಮ್ಸ್ ಕೈದಿಗಳ ವಾರ್ಡ್ ನಲ್ಲಿ ದಾಖಲು: ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ದರೋಡೆಕೋರರಾದ ಲವಾ ಮತ್ತು ದೇವಿದಾಸ ಎಂಬ ದರೋಡೆಕೋರರನ್ನ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ಪೊಲೀಸರು ಸಾಗಿಸಿದರು. ಕೂಡಲೆ ವೈದ್ಯರು ತುರ್ತು ಕಿರು ಶಸ್ತ್ರಚಿಕಿತ್ಸೆ ನಡೆಸಿ ಚಿಕಿತ್ಸೆ ನೀಡಿದರು. ಆಸ್ಪತ್ರೆಯ ಖೈದಿಗಳ ವಾರ್ಡನಲ್ಲಿ ದಾಖಲಿಸಿ ಉಪಚಾರ ಮಾಡಲಾಗುತ್ತಿದೆ.

    ಪೇದೆ ಬಸವೇಶ್ವರದಲ್ಲಿ ದಾಖಲು: ದರೋಡೆಕೋರರು ಚಾಕುವಿನಿಂದ ನಡೆಸಿದ ದಾಳಿಯಿಂದ ಗಾಯಗೊಂಡಿರುವ ಪೊಲೀಸ್ ಕಾನಸ್ಟೇಬಲ್ ಶಿವಶರಣ ಅವರನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ‌. 

    ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ್, ಡಿಸಿಪಿ ಶ್ರೀಕಾಂತ ‌ಕಟ್ಟಿಮನಿ, ಎಸಿಪಿಗಳಾದ ಗಿರೀಶ ಎಸ್.ಬಿ., ದೀಪನ್ ಎಂ.ಎನ್. ಗೀತಾ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಶೋಕನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts