More

    ಕರ್ನಾಟಕ ಸಾಂಸ್ಕೃತಿಕ ಚಟುವಟಿಕೆಗಳ ಅಸ್ಮಿತೆಯ ಕೇಂದ್ರ

    ಬಾಗಲಕೋಟೆ: ಕರ್ನಾಟಕ ಸಂಸ್ಕೃತಿಕ ಚಟುವಟಿಕೆಗಳ ಅಸ್ಮಿತೆಯ ಕೇಂದ್ರ. ಕನ್ನಡ ಕನ್ನಡಿಗರ ಅಸ್ಮಿತೆ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸದಸ್ಯರಾದ ಜಿ. ಕೆ ತಳವಾರ ಹೇಳಿದರು.

    ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಸಂಭ್ರಮ ೫೦ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿ ನವೆಂಬರ ೧ ಎಂದರೇನೇ ಅದೇನೋ ಖುಷಿ. ಅದೇನೋ ಸಡಗರ. ನಮ್ಮ ಹೆಮ್ಮೆಯ ಕರುನಾಡು ರೂಪುಗೊಂಡ ದಿನವದು. ದಕ್ಷಿಣ ಭಾರತದ ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ಅತ್ಯಂತ ವಿಜೃಂಭಣೆಯಿAದ ಆಚರಿಸುತ್ತಾರೆ.
    ಕರ್ನಾಟಕ ರಾಜ್ಯೋತ್ಸವ ಕನ್ನಡಿಗರ ಹೆಮ್ಮೆಯ ಹಬ್ಬ. ಕರುನಾಡಿನ ಸ್ವಾಭಿಮಾನದ ಸಂಕೇತ. ಕನ್ನಡಮ್ಮನ ತೇರನ್ನು ಎಳೆಯುವ ಸಡಗರದ ಕ್ಷಣ. ಹಲವು ಸಂಸ್ಕೃತಿಗಳ ಆಗರ. ಎಲ್ಲಾದರು ಇರು, ಎಂತಾದರೂ ಇರು. ಎಂದೆAದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ… ಕುವೆಂಪು ಅವರ ಈ ಅಪೂರ್ವ ಸಾಲುಗಳು ಬದುಕಿನ ದಾರಿಯಾಗಿವೆ ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಜಗನ್ನಾಥ ವಿ. ಚವ್ಹಾಣ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಈ ದಿನವನ್ನು ಅತ್ಯಂತ ಪ್ರೀತಿ, ಹೆಮ್ಮೆಯಿಂದ ಆಚರಣೆ ಮಾಡುತ್ತಾರೆ.ಕನ್ನಡ, ಕರ್ನಾಟಕ ಬರೀ ಭಾಷೆಯಲ್ಲ, ಬರೀ ನೆಲವಲ್ಲ ಅದೊಂದು ಭಾವನಾತ್ಮಕ ಸಂಬAಧ, ಎಂದೂ ಬಿಡಿಸಲಾರದ ಬಾಂಧವ್ಯ. ಕರುನಾಡು ಎಂಬ ಪದವೇ ಅಮೃತಕ್ಕೆ ಸಮಾನ. ನಮ್ಮ ಹೆಮ್ಮೆ ಸರ್ವ ಜನಾಂಗದ ಈ ಶಾಂತಿಯ ತೋಟ. ಇಂತಹ ಹೆಮ್ಮೆಯ ಕರುನಾಡು ಉದಯಿಸಿದ ಈ ದಿನದಂದು ಕನ್ನಡಾಂಬೆಯ ಭಾವಚಿತ್ರದ ಮೆರವಣಿಗೆ, ಕನ್ನಡ ಬಾವುಟದ ಹಾರಾಟ, ಜೈಕಾರ, ಕರುನಾಡ ಸಂಸ್ಕೃತಿ- ಇತಿಹಾಸ ಸಾರುವ ಹಾಡಿನ ಮೂಲಕ ಕನ್ನಡದ ಸಿರಿವಂತಿಕೆಯ ಸೊಗಡು ಎಲ್ಲೆಲ್ಲೂ ಅನುರಣಿಸುತ್ತಿರುತ್ತದೆ ಎಂದರು.

    ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಗುಂಪುಗಳ ಮೂಲಕ ಕನ್ನಡ ಭಕ್ತಿಗೀತೆಗಳನ್ನು ಹಾಡಿದರು. ಆಯ್ ಕ್ಯೂ ಎ ಸಿ ಸಂಯೋಜಕ ಗಿರಿಜಾ ನಾವು, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ ನಂಜುAಡಸ್ವಾಮಿ ಉಪಸ್ಥಿತರಿದ್ದರು. ಡಾ.ಬಸವರಾಜ ಕುಂಬಾರ ಪರಿಚಯಿಸಿದರು. ಪ್ರೊ ಎಸ್ ಐ ಪತ್ತಾರ ವಂದಿಸಿದರು. ಶಕುಂತಲಾ ಬರಗಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts