More

    ಕರೊನಾ ವೈದ್ಯರಿಗೆ ಪುಷ್ಪವೃಷ್ಟಿ

    ಹುಬ್ಬಳ್ಳಿ: ನಗರದ ಸೀಲ್​ಡೌನ್ ಪ್ರದೇಶದಲ್ಲಿ ಸರ್ವೆ ಕಾರ್ಯ ನಡೆಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ತೊರವಿಗಲ್ಲಿಯಲ್ಲಿ ನಿವಾಸಿಗಳು ಶನಿವಾರ ಸಂಜೆ ಪುಷ್ಪವೃಷ್ಟಿ ಮಾಡಿ ಗೌರವಿಸಿದರು.

    ತೊರವಿಗಲ್ಲಿ ಯುವಕ ಮಂಡಳದ ನೇತೃತ್ವದಲ್ಲಿ ತೊರವಿಗಲ್ಲಿ ನೂರಾರು ನಿವಾಸಿಗಳು ಕರೊನಾ ಯೋಧರಿಗೆ ಪುಷ್ಪವೃಷ್ಟಿ ಮಾಡಿ, ಆರತಿ ಬೆಳಗಿದರು. ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಡಾ. ಪ್ರಭು ಬಿರಾದಾರ, ಇತರ ವೈದ್ಯಕೀಯ ಸಿಬ್ಬಂದಿ ಪಾಲ್ಗೊಂಡಿದ್ದರು. ವಿಭಿನ್ನ ವೇಷ ಧರಿಸಿದ್ದ ಮಕ್ಕಳು ‘ಕೋವಿಡ್-19 ಯೋಧರಿಗೆ ಅಭಿನಂದನೆಗಳು’ ಎಂಬ ನಾಮಫಲಕ ಪ್ರದರ್ಶಿಸುವ ಮೂಲಕ ಗೌರವ ಸಲ್ಲಿಸಿದರು.

    ಸಾಮಾಜಿಕ ಅಂತರ ಮರೆತ ಜನ

    ಕರೊನಾ ಯೋಧರಿಗೆ ಗೌರವ ಸಲ್ಲಿಸುವ ಭರದಲ್ಲಿ ತೊರವಿಗಲ್ಲಿ ನಿವಾಸಿಗಳು ಸಾಮಾಜಿಕ ಅಂತರ ಮರೆತ ದೃಶ್ಯ ಕಂಡುಬಂದಿತು. ಮಾರ್ಗದುದ್ದಕ್ಕೂ ಮಹಿಳೆಯರು, ಮಕ್ಕಳು, ಪುರುಷರು ಸಾಮಾಜಿಕ ಅಂತರ ಕಾಯ್ದುಕೊಂಡು ನಿಂತಿದ್ದರು. ಆದರೆ, ಗಲ್ಲಿಯ ಅಕ್ಕಪಕ್ಕದ ಮನೆಗಳ ಮೇಲೆ, ರಸ್ತೆಯ ಕೊನೆಗೆ ಜನರು ಗುಂಪಾಗಿ ನಿಲ್ಲುವ ಮೂಲಕ ಸಾಮಾಜಿಕ ಅಂತರ ಮರೆತಂತೆ ತೋರಿದರು.

    ಲಾಕ್​ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರಗೆ ಮಕ್ಕಳನ್ನು ಬಿಡಬಾರದೆಂಬ ಸೂಚನೆ ಇದ್ದರೂ ಕೆಲವರು ಮಕ್ಕಳನ್ನು ಕರೆದುಕೊಂಡು ನಿಂತಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts