More

    ಕರೊನಾ ಲಾಭ ಪಡೆಯುವವರ ವಿರುದ್ಧ ಕ್ರಮ

    ವಿಜಯಪುರ: ಕರೊನಾದ ಲಾಭ ಪಡೆದುಕೊಳ್ಳುವ ಕ್ಲಿನಿಕ್, ಯೋಗ ಚಿಕಿತ್ಸಾ ಕೇಂದ್ರಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
    ಇಲ್ಲಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕರೊನಾ ವೈರಸ್ ಕುರಿತ ಕೈಗೊಂಡಿರುವ ಮುಂಜಾಗ್ರತೆ ಕ್ರಮಗಳ ಬಗ್ಗೆ ಭಾನುವಾರ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಕರೊನಾ ರೋಗದ ತಕ್ಷಣ ನಿಯಂತ್ರಣಕ್ಕೆ ಯಾವುದೇ ರೀತಿಯ ಲಸಿಕೆ ಮತ್ತು ಔಷಧ ಲಭ್ಯವಿಲ್ಲ. ವಿವಿಧ ಸಂಘ ಸಂಸ್ಥೆಗಳು ತಮ್ಮ ಸ್ವಂತ ಲಾಭ ಮತ್ತು ಹಣ ಗಳಿಕೆಗಾಗಿ ಯಾವುದೇ ರೀತಿಯ ಔಷಧ ಮಾರಾಟ ಮಾಡಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

    ವಿಜಯಪುರದಲ್ಲಿ ಲ್ಯಾಬ್

    ಕೋವಿಡ್ -19 ಸೋಂಕಿತರ ತುರ್ತು ಚಿಕಿತ್ಸೆಗಾಗಿ ವಿಜಯಪುರ ಹಾಗೂ ಕಲಬುರಗಿಯಲ್ಲಿ ಲ್ಯಾಬ್ ಸ್ಥಾಪನೆ ಕುರಿತಂತೆ ಬೇಡಿಕೆ ಬಂದಿದೆ. ಎಲ್ಲ ಮೂಲಸೌಕರ್ಯಗಳನ್ನು ಒಳಗೊಂಡ ಲ್ಯಾಬ್ ಬೇಕಾಗಲಿದ್ದು, ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಸಮಾಲೋಚನೆ ನಡೆಸುವುದಾಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

    76 ಜನ ವಿದೇಶದಿಂದ ಆಗಮನ

    ಜಿಲ್ಲೆಯಲ್ಲಿ ಇಂದಿನವರೆಗೆ ವಿದೇಶದಿಂದ ಮರಳಿದ 76 ಜನರ ಪೈಕಿ 62 ಜನರಿಗೆ ಕರೊನಾ ರೋಗ ಲಕ್ಷಣಗಳು ಕಂಡು ಬಂದಿಲ್ಲವೆಂದು ದೃಢಪಡಿಸಲಾಗಿದೆ. ಈ 76 ಜನರ ಪೈಕಿ 10 ಜನರ ಮೇಲೆ ನಿಗಾ ಇಡಲಾಗಿದ್ದು, ಶಂಕಿತ ಒಬ್ಬನನ್ನು ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಚೀನಾದಿಂದ, ರೋಮ್‌ನಿಂದ, ್ರಾನ್ಸ್, ಜರ್ಮನ್, ನೈಜಿರಿಯಾದಿಂದ ತಲಾ ಒಬ್ಬರು, ಬ್ಯಾಂಕಾಕ್‌ನಿಂದ ಹಾಗೂ ಇಂಡೋನೇಷ್ಯಾ, ಬೆಲ್ಜಿಯಂನಿಂದ ತಲಾ ಇಬ್ಬರು, ಸೌದಿ ಅರೇಬಿಯಾದಿಂದ 9, ದುಬೈನಿಂದ 17, ಮೆಕ್ಕಾ- ಮದೀನಾದಿಂದ 43 ಪ್ರಯಾಣಿಕರು ವಿಜಯಪುರಕ್ಕೆ ವಾಪಸ್ ಆಗಿದ್ದಾರೆ. ಎಲ್ಲರ ಬಗ್ಗೆ ಸೂಕ್ತ ನಿಗಾ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸಭೆಯಲ್ಲಿ ಮಾಹಿತಿ ನೀಡಿದರು.

    ಐತಿಹಾಸಿಕ ಸ್ಮಾರಕಗಳಲ್ಲಿ ನಿಷೇಧ

    ಕರೋನಾ ಸೋಂಕು ನಿಯಂತ್ರಣಕ್ಕಾಗಿ ಐತಿಹಾಸಿಕ ಸ್ಮಾರಕ ಗೋಳಗುಮ್ಮಟ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕರಿಗೆ ನಿಷೇಧಿಸಲಾಗಿದೆ. ಅಲ್ಲದೆ ಸಾರ್ವಜನಿಕ ಸ್ಥಳಗಳಾದ ವಿಜಯಪುರದ ಎಲ್‌ಬಿಎಸ್ ಮಾರುಕಟ್ಟೆ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

    ಜಿಪಂ ಸಿಇಒ ಗೋವಿಂದ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಿಸಿದ್ಧಿ, ಇಂಡಿ ಉಪ ವಿಭಾಗಾಧಿಕಾರಿ ಸ್ನೇಹಲ್ ಲೋಖಂಡೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ಕರೊನಾ ಲಾಭ ಪಡೆಯುವವರ ವಿರುದ್ಧ ಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts