More

    ಕರಾಳ ದಿನಾಚರಣೆಗೆ ಅನುಮತಿ ಬೇಡ

    ಗೋಕಾಕ: ನಾಡದ್ರೋಹಿ ಎಂಇಎಸ್​ಗೆ ಕರಾಳ ದಿನ ಆಚರಿಸಲು ಅನುಮತಿ ನೀಡದಂತೆ ಆಗ್ರಹಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್​ ಮೂಲಕ ಬೆಳಗಾವಿ ಪೊಲೀಸ್​ ಆಯುಕ್ತರಿಗೆ ಮನವಿ ಸಲ್ಲಿಸಿದರು.

    ಕಳೆದ ಹಲವಾರು ದಶಕಗಳಿಂದ ನಾಡದ್ರೋಹಿ ಎಂಇಎಸ್​ ಸಂಟನೆ ಕರ್ನಾಟಕ ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಿಸುತ್ತ ಬಂದಿದೆ. ಕನ್ನಡ ಮತ್ತು ಕರ್ನಾಟಕವನ್ನು ಅವಮಾನಿಸುತ್ತಿರುವುದು ಅತ್ಯಂತ ಖೇದಕರ ವಿಷಯವಾಗಿದೆ.

    ರಾಜ್ಯದಲ್ಲಿ ಅತ್ಯಂತ ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕರಾಳದಿನ ಆಚರಿಸುವುದು ಖಂಡನೀಯ. ಇದು ಗೊತ್ತಿದ್ದರೂ ಸರ್ಕಾರ, ಜಿಲ್ಲಾಡಳಿತ ಮತ್ತು ಪೊಲೀಸ್​ ಇಲಾಖೆ ನಾಡವಿರೋಧಿ ಸಂಟನೆ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ.

    ಈ ಬಗ್ಗೆ ಪ್ರತಿ ವರ್ಷ ಕರವೇ ಹಾಗೂ ಇನ್ನುಳಿದ ಕನ್ನಡ ಪರ ಸಂಟನೆಗಳು ಹೋರಾಟ ನಡೆಸಿ, ಜಿಲ್ಲಾಡಳಿತ ಮತ್ತು ಪೊಲೀಸ್​ ಇಲಾಖೆಗೆ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ಎಂಇಎಸ್​ ಸಂಟನೆಗೆ ಕರಾಳ ದಿನಾಚರಣೆಗೆ ಅನುಮತಿ ನೀಡದೆ ಈ ಸಂಟನೆ ನಿಷೇಧಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

    ಅಧ್ಯಕ್ಷ ಬಸವರಾಜ ಖಾನಪ್ಪನವರ, ಮುಖಂಡರಾದ ಸಾದಿಕ್​ ಹಲ್ಯಾಳ, ದೀಪಕ ಹಂಜಿ, ಅಶೋಕ ಗಾಡಿವಡ್ಡರ, ಬಸವರಾಜ ಗಾಡಿವಡ್ಡರ, ಮಲ್ಲು ಸಂಪಗಾರ, ಹನಿಫ್​ ಸನದಿ, ನಿಜಾಮ ನದಾಫ್​, ಮುಗುಟ್​ ಪೈಲ್ವಾನ್​, ಮಹಾದೇವ ಮಕ್ಕಳಗೇರಿ, ಕಿರಣ ತೋಗರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts