More

    ಕರಾಳ ದಿನಕ್ಕೆ ಅವಕಾಶ ಕೊಟ್ಟರೆ ಕ್ರಾಂತಿ

    ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ದಿನ ಯಾವುದೇ ಕಾರಣಕ್ಕೂ ನಾಡದ್ರೋಹಿ ಎಂಇಎಸ್‌ಗೆ ಕರಾಳ ದಿನ ಆಚರಿಸಲು ಅವಕಾಶ ನೀಡಬಾರದು. ಒಂದು ವೇಳೆ ಅನುಮತಿ ನೀಡಿದರೆ ಬೆಳಗಾವಿಯಲ್ಲಿ ದೊಡ್ಡ ಕ್ರಾಂತಿ ಆಗುತ್ತದೆ ಎಂದು ಕರವೇ ಶಿವರಾಮೇಗೌಡ ಬಣದ ಉತ್ತರ ಕರ್ನಾಟಕ ಅಧ್ಯಕ್ಷ ಮಹಾಂತೇಶ ರಣಗಟ್ಟಿಮಠ ಎಚ್ಚರಿಕೆ ನೀಡಿದ್ದಾರೆ.
    ಎಂಇಎಸ್ ಕರಾಳ ದಿನ ಆಚರಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿರುವುದರ ವಿರುದ್ಧ ನಗರದ ಚನ್ನಮ್ಮ ವೃತ್ತದಲ್ಲಿ ಕರವೇ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ. ರಾಜ್ಯದ ಎರಡನೇ ರಾಜಧಾನಿ. ಈಗಾಗಲೇ ಮಹಾಜನ ವರದಿ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು, ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಆದರೂ ಅನೇಕ ವರ್ಷಗಳಿಂದ ಗಡಿ ವಿವಾದದ ಹೆಸರಿನಲ್ಲಿ ಎಂಇಎಸ್ ಪುಂಡರು ಕ್ಯಾತೆ ತೆಗೆಯುತ್ತಲೇ ಬಂದಿದ್ದಾರೆ ಎಂದು ದೂರಿದರು. ಸರ್ಕಾರಕ್ಕೆ ತಾಕತ್ತು ಇದ್ದರೆ ಎಂಇಎಸ್ ಸಂಘಟನೆ ನಿಷೇಧಿಸಬೇಕು. ಕೂಡಲೇ ಆ ಎಲ್ಲ ನಾಯಕರನ್ನು ಬಂಧಿಸಿ ಜೈಲಿಗಟ್ಟಬೇಕು. ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಯುವಸೇನೆ, ಜೈ ಭೀಮ ಜನಪರವೇದಿಕೆ ಸಂಘಟನೆಗ ಪದಾಧಿಕಾರಿಗಳು ನಾವು ಇಲ್ಲಿ ಸೇರಿದ್ದೇವೆ.

    ರಾಜ್ಯೋತ್ಸವ ಇಲ್ಲಿ ಆಚರಿಸಬೇಕು ಎಂದುಕೊಂಡಿದ್ದೇವೆ. ಒಂದು ವೇಳೆ ಶಹಾಪುರ, ವಡಗಾವಿ, ಗೋವಾವೇಸ್‌ನಲ್ಲಿ ಮರಾಠಿಗರು ಅನ್ಯಾಯ ಮಾಡಿದರೆ ಲಕ್ಷಾಂತರ ಕನ್ನಡಿಗರು ಸೇರಿಕೊಂಡು ಅಲ್ಲಿಗೆ ಬರುತ್ತೇವೆ. ಒಂದು ಕ್ರಾಂತಿಯೇ ಆಗಲಿ. ಮರಾಠಿ ನಾಯಕರು ಏನಾದರೂ ಕ್ಯಾತೆ ತೆಗೆದರೆ ಮುಂದಿನ ದಿನಗಳಲ್ಲಿ ಅವರೆಲ್ಲರನ್ನೂ ಬೆಳಗಾವಿಯಿಂದ ಗಡಿಪಾರು ಮಾಡುವ ಕೆಲಸವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಕರವೇ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೋಡಿ ಮಾತನಾಡಿ, ಹಲವು ವರ್ಷಗಳಿಂದ ಬೆಳಗಾವಿಯಲ್ಲಿ ಅದ್ದೂರಿ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಆದರೆ, ರಾಜ್ಯೋತ್ಸವ ದಿನ ಎಂಇಎಸ್‌ನವರು ಆಚರಿಸುವ ಕರಾಳ ದಿನಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಎಂಇಎಸ್‌ನವರನ್ನು ಪೊಲೀಸರು ಬಂಧಿಸಬೇಕು ಎಂದು ಒತ್ತಾಯಿಸಿದರು. ಕಸ್ತೂರಿ ಭಾವಿ, ಗೌಸ್ ಸನದಿ, ಮಲ್ಲಿಕಾ ವಾಗಿ, ಅಕ್ಬರ್ ತಡೇಕರ, ಯೂಸುಫ್ ಶೀಗಿಹಳ್ಳಿ, ಮಲ್ಲಿಕಾ ಕುರಿ ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts