More

    ಕಬ್ಬು ನುರಿಸುವ ಹಂಗಾಮು ಆರಂಭ

    ಬೆಳಗಾವಿ: ತಾಲೂಕಿನ ಹುದಲಿಯ ಬೆಳಗಾಂ ಶುಗರ್ಸ್​ ಪ್ರೆ.ಲಿ. ಕಾರ್ಖಾನೆಯಲ್ಲಿ 2022&23ರ ಸಾಲಿನ ಕಬ್ಬು ನುರಿಸುವ ಹಂಗಾಮು ಶ್ರೀದಲ್ಲಿ ಪ್ರಾರಂಭಿಸಲಾಗುವುದು. ಪ್ರಸ್ತುತ ಹಂಗಾಮಿನಲ್ಲಿ ಕಾರ್ಖಾನೆಯ ಸುತ್ತ&ಮುತ್ತಲಿನ ಸುಮಾರು 80 ಕಿ.ಮೀ. ಅಂತರದಲ್ಲಿರುವ ಪ್ರದೇಶದಿಂದ ಉತ್ತಮ ತಳಿಯ ಕಬ್ಬನ್ನು ಪಡೆಯಲಾಗುವುದು.

    2020&21ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್​ ಕಬ್ಬಿಗೆ 2500 ರೂ. ಬಿಲ್​ ಅನ್ನು ಮೂದಲನೇ ಕಂತಾಗಿ ಮತ್ತು 100 ರೂ. ಎರಡನೇ ಕಂತಾಗಿ ಈಗಾಗಲೇ ನೀಡಲಾಗಿದೆ. ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿದಂತೆ ಇನ್ನೂ 50 ರೂ. ಮೂರನೇ ಕಂತಾಗಿ ನೀಡಲು ನಿರ್ಧರಿಸಲಾಗಿದೆ.

    2020&21ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್​ ಕಬ್ಬಿಗೆ ಒಟ್ಟಾರೆ 2,650 ರೂ. ದರ ನೀಡಿದಂತಾಗುತ್ತದೆ. 2021&22ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಈಗಾಗಲೇ 2,600 ರೂ. ನೀಡಲಾಗಿದ್ದು, ಎರಡನೇ ಕಂತಾಗಿ 100 ರೂ. ನೀಡಲು ನಿರ್ಧರಿಸಲಾಗಿದೆ. ಇದರೂಂದಿಗೆ 2021&22ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್​ ಕಬ್ಬಿಗೆ ಒಟ್ಟಾರೆ 2,700ರೂ. ದರ ನೀಡಿದಂತಾಗುತ್ತದೆ. ಪ್ರಸಕ್ತ ಹಂಗಾಮಿನಲ್ಲಿ ರೈತರು ಹೆಚ್ಚು ಕಬ್ಬು ಪೂರೈಸುವಂತೆ ಕಾರ್ಖಾನೆ ಚೇರ್ಮನ್​ ಪ್ರದಿಪಕುಮಾರ ಇಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts