More

    ಕಪ್ಪತಗುಡ್ಡದಲ್ಲಿ ಬೇಟೆಗಾರರ ಬಂಧನ

    ಮುಂಡರಗಿ: ತಾಲೂಕಿನ ಹಮ್ಮಿಗಿ ಗ್ರಾಮ ವ್ಯಾಪ್ತಿಯ ಕಪ್ಪತಗುಡ್ಡ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ವನ್ಯ ಪ್ರಾಣಿಗಳ ಬೇಟೆಯಾಡುತ್ತಿದ್ದವರನ್ನು ಆರ್​ಎಫ್​ಒ ಪ್ರದೀಪ ಪವಾರ ನೇತೃತ್ವದ ತಂಡ ಬಂಧಿಸಿದ ಘಟನೆ ಗುರುವಾರ ನಡೆದಿದೆ.

    ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಗ್ರಾಮದ 6 ಜನರು ಕಪ್ಪತಗುಡ್ಡ ಅರಣ್ಯ ಪ್ರದೇಶದೊಳಗೆ ಕೃಷ್ಣಮೃಗ, ಮೊಲ, ಕಾಡುಹಂದಿ, ನರಿ, ಚುಕ್ಕೆಜಿಂಕೆ, ಕಾಡುಕುರಿ ಮೊದಲಾದ ಪ್ರಾಣಿ ಬೇಟೆಯಾಡಲು ತೆರಳಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಅರಣ್ಯ ಅಧಿಕಾರಿಗಳು 6 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಬಂಧಿತರು ಬುಧವಾರ ರಾತ್ರಿಯೇ ಅರಣ್ಯ ಪ್ರದೇಶಕ್ಕೆ ಹಾಸಿಗೆ ಸಮೇತ ಬಂದಿದ್ದರು. ಇದನ್ನರಿತು ದಾಳಿ ನಡೆಸಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದೇವೆ ಎಂದು ಆರ್​ಎಫ್​ಒ ಪ್ರದೀಪ ಪವಾರ ತಿಳಿಸಿದರು.

    ನರಸಿಂಹ ದುರುಗಪ್ಪ, ಲಕ್ಷ್ಮಣ ವೆಂಕಟೇಶ, ದುರಗೇಶ ಮಂಜಪ್ಪ, ಕುರವತ್ತಿ ಸುಂಕಪ್ಪ, ದುರಗೇಶ ದುರಗಪ್ಪ, ಸುಂಕಪ್ಪ ದಾವೋಜಿ ಬಂಧಿತರು. ಅವರಿಂದ 4 ಬೈಕ್, 4 ಬಲೆ ಹಾಗೂ ಬಲೆಗೆ ಹಾಕುವ 20 ಕೋಲುಗಳನ್ನು ವಶಕ್ಕೆ ಪಡೆಯಲಾಗಿದೆ.

    ಉಪವಲಯ ಅರಣ್ಯಾಧಿಕಾರಿ ಆರ್.ಎಚ್. ಹೊನ್ನಕೇರಿ, ಅರಣ್ಯ ರಕ್ಷಕರಾದ ವೈ.ಎಚ್. ಕಾಶಿನಕುಂಟಿ, ಬಸವರಾಜ ಬಾಳ್ವಗೋಳ, ಪ್ರಕಾಶ ಗಾಣಿಗೇರ, ಶಿವಾನಂದ ಗೌಡ್ರ, ಮೈಲಾರಪ್ಪ ಮಡಿವಾಳರ, ಕುಮಾರ ಪೂಜಾರ, ಮೌಲಾಸಾಬ್ ಬನ್ನಿಕೊಪ್ಪ, ಎ.ಎಫ್. ಶೇಖ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts