More

    ಕನ್ನಡ ಪರೀಕ್ಷೆಗೂ ಹೆದರಿದ ವಿದ್ಯಾರ್ಥಿಗಳು!

    ಬೆಳಗಾವಿ: ಜಿಲ್ಲೆಯಾದ್ಯಂತ ಗುರುವಾರದಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭಗೊಂಡಿದ್ದು, ನಗರದ ಕೇಂದ್ರವೊಂದರಲ್ಲಿ ಕನ್ನಡ ವಿಷಯದಲ್ಲಿ ನಕಲು ಮಾಡುತ್ತಿದ್ದ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ.

    ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 95 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ ಒಟ್ಟು 36,859 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಕನ್ನಡ ಪರೀಕ್ಷೆಗೆ 1,665 ವಿದ್ಯಾರ್ಥಿಗಳು ಗೈರು ಉಳಿದಿದ್ದರು. ಬೆಳಗಾವಿ ನಗರದ ಆರ್‌ಪಿಡಿ ಪರೀಕ್ಷಾ ಕೇಂದ್ರದಲ್ಲಿ ಕನ್ನಡ ವಿಷಯ ನಕಲು ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಡಿಬಾರ್ ಆಗಿದ್ದಾನೆ.

    ಬೆಳಗಾವಿ, ಚಿಕ್ಕೋಡಿ ಡಿಡಿಪಿಯು ನೇತೃತ್ವದ ತಂಡ, ನೋಡಲ್ ಅಧಿಕಾರಿಗಳ ತಂಡ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿತು. ಕೆಲ ಕೇಂದ್ರಗಳಲ್ಲಿ ಪ್ರವೇಶ ಪತ್ರ, ಕೊಠಡಿ ಅದಲು ಬದಲುಗಳಿಂದಾಗಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಬೇಕಾಯಿತು. ಬೆಳಗಾವಿ ನಗರ ಪರೀಕ್ಷಾ ಕೇಂದ್ರದಲ್ಲಿ ಕೆಲ ವಿದ್ಯಾರ್ಥಿಗಳು ಹಾಲ್‌ಟಿಕೆಟ್ ಸಿಗದಿರುವ ಕಾರಣ ಸ್ವಲ್ಪಹೊತ್ತು ಗೊಂದಲ ಉಂಟಾಗಿತ್ತು.

    ಚಿಕ್ಕೋಡಿಯಲ್ಲಿ 53 ಕೇಂದ್ರಗಳಲ್ಲಿ ಅರೇಬಿಕ್ ವಿಷಯಕ್ಕೆ ನೋಂದಾಯಿಸಿಕೊಂಡಿದ್ದ 23ರ ಪೈಕಿ 20 ವಿದ್ಯಾರ್ಥಿಗಳು ಹಾಜರಾದರು. ಮೂವರು ಗೈರಾದರು. ಜಿಲ್ಲೆಯಲ್ಲಿ ಮೊದಲ ದಿನ ಪಿಯು ಪರೀಕ್ಷೆ ಗೊಂದಲ ರಹಿತವಾಗಿ ನಡೆದಿದೆ. ಎಲ್ಲಿಯೂ ತೊಂದರೆಯಾಗಿಲ್ಲ ಎಂದು ಬೆಳಗಾವಿ ಡಿಡಿಪಿಯು ಎಂ.ಎಂ. ಕಾಂಬ್ಳೆ, ಚಿಕ್ಕೋಡಿ ಡಿಡಿಪಿಯು ಪಾಂಡುರಂಗ ಭಂಡಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts