More

    ಕನ್ನಡ ನಾಡು, ನುಡಿಯ ಅಸ್ಮಿತೆ ಉಳಿಸಿ

    ಹನಗೋಡು: ಹೋಬಳಿಯ ಹೆಬ್ಬಾಳ ಗ್ರಾಮದಲ್ಲಿ ಅರುಣೋದಯ ಯುವ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜಕುಮಾರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.

    ಕಾರ್ಯಕ್ರಮದಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವವು ನಾಡಿನ ಏಕತೆ, ಸಮಾನತೆ, ಸ್ವಾಭಿಮಾನ ಹಾಗೂ ಸಹಬಾಳ್ವೆಯ ಸಂಕೇತವಾಗಿದ್ದು, ಪ್ರತಿಯೊಬ್ಬ ಕನ್ನಡಿಗನೂ ನಮ್ಮ ನಾಡು, ನುಡಿಯ ಅಸ್ಮಿತೆಯನ್ನು ಉಳಿಸಿ, ಬೆಳೆಸುವ ಪ್ರಜ್ಞಾವಂತಿಕೆ ಮೆರೆಯಬೇಕು ಎಂದರು.

    ರಾಜ್ಯದ ಪ್ರತಿಯೊಂದು ಹಂತದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸುವುದು, ಕನ್ನಡ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುವುದು, ಕನ್ನಡ ಸಾಹಿತ್ಯ ಶ್ರೀಮಂತಿಕೆಯನ್ನು ಗೌರವಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

    ಟ್ರಸ್ಟ್‌ನ ಅಧ್ಯಕ್ಷ ಅಜೀಷ್‌ಮೋಹನ್ ಮಾತನಾಡಿದರು. ಮನಗನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಪಾರ್ವತಿ, ತಾಪಂ ಮಾಜಿ ಸದಸ್ಯೆ ರೂಪ ನಂದೀಶ್, ಮುಖಂಡರಾದ ರವಿಕುಮಾರ್, ಚೆಲುವೇಗೌಡ, ಶ್ರೀನಿವಾಸ್, ನಂದೀಶ್, ಗವಿಮಾದು, ಗ್ರಾ.ಪಂ. ಸದಸ್ಯರಾದ ರಂಗಣ್ಣ, ಸದಾನಂದ, ಗೌರಮ್ಮ ಗವಿಮಾದು, ರಾಧಾ, ಟ್ರಸ್ಟ್‌ನ ಗೌರವ ಅಧ್ಯಕ್ಷ ರಾಮಕೃಷ್ಣ, ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ಕಿರಣ್ ಕುಮಾರ್, ಖಜಾಂಚಿ ಮಾದೇವ, ಪದಾಧಿಕಾರಿಗಳಾದ ಅಶೋಕ್, ರಂಜನ್ ಮಣಿಕಂಠ, ರೋಹಿತ್, ಪ್ರವೀಣ್, ವಸಂತ, ಯತೀಶ್, ರಘು, ರವಿ, ಮಧು, ಶಂಕರೆಗೌಡ, ರಾಜೇಶ್, ಶುಭಾಶ್, ಶಶಿ ಹಾಗೂ ಟ್ರಸ್ಟಿನ ಆಡಳಿತ ಮಂಡಳಿ ಮತ್ತು ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts