More

    ಕತಾರ್​ನಲ್ಲಿ ಸಾವಿರಾರು ಕನ್ನಡಿಗರ ಪರದಾಟ

    ಹುಬ್ಬಳ್ಳಿ: ಜೀವನೋಪಾಯಕ್ಕಾಗಿ ದೂರದ ಕತಾರ್​ಗೆ ತೆರಳಿರುವ ಸಾವಿರಾರು ಕನ್ನಡಿಗರು ಲಾಕ್​ಡೌನ್​ನಿಂದಾಗಿ ಸ್ವದೇಶಕ್ಕೆ ಮರಳಲಾಗದೆ ಪರದಾಡುತ್ತಿದ್ದಾರೆ. ಕರೊನಾ ಸೋಂಕು ಹರಡದಂತೆ ದೇಶದಾದ್ಯಂತ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಲಾಕ್​ಡೌನ್​ನಲ್ಲಿ ಸಾಕಷ್ಟು ಸಡಿಲಿಕೆ ಮಾಡಿದ್ದರೂ ಅಂತಾರಾಷ್ಟ್ರೀಯ ವಿಮಾನ ಹಾರಾಟ ಇದುವರೆಗೆ ಪ್ರಾರಂಭಗೊಂಡಿಲ್ಲ.

    ಹೀಗಾಗಿ ಕತಾರ್​ನಲ್ಲಿ ಸಿಲುಕಿರುವ ಕನ್ನಡಿಗರಿಗೆ ಸ್ವದೇಶಕ್ಕೆ ಮರಳಲು ಆಗುತ್ತಿಲ್ಲ. ಕತಾರ್​ನಲ್ಲಿಯೂ ಅಲ್ಲಿನ ಸರ್ಕಾರ ಲಾಕ್​ಡೌನ್ ಘೊಷಿಸಿದೆ. ಹೀಗಾಗಿ ಹಲವಾರು ಕಂಪನಿಗಳು ಮುಚ್ಚಿವೆ. ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕಟ್ಟಡ ನಿರ್ವಣಕ್ಕೆ ಕಾರ್ಯಕ್ಕೆ ಹೋದವರು ಕೆಲಸ ಇಲ್ಲದೆ ಕೂತಿದ್ದು, ಭಾರತ ಸರ್ಕಾರವನ್ನು ಸಂರ್ಪಸುತ್ತಿದ್ದಾರೆ.

    ಕತಾರ್​ಗೆ ತೆರಳಿದ್ದ ಕನ್ನಡಿಗ ಸಾಫ್ಟ್​ವೇರ್ ಇಂಜಿನಿಯರ್​ಗಳು, ಕಟ್ಟಡ ಕಾರ್ವಿುಕರು, ಸಲೂನ್ ಉದ್ಯೋಗಿಗಳು ಅತ್ತ ಕೆಲಸವೂ ಇಲ್ಲದೆ, ಇತ್ತ ತಾಯ್ನಾಡಿಗೂ ಮರಳಲು ಆಗದೆ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಹೀಗಾಗಿ ಅಲ್ಲಿನ ಕನ್ನಡಿಗರಿಗೆ ದಿನ ದೂಡುವುದು ಕಷ್ಟಕರವಾಗಿದೆ. ಅವರೆಲ್ಲ ಮಾತೃದೇಶದತ್ತ ಮುಖ ಮಾಡಿದ್ದಾರೆ. ಇಲ್ಲಿ ಬಂದರೆ ಸ್ವಂತ ನಾಡಿನಲ್ಲಿ ಏನಾದರೂ ಕೆಲಸ ಮಾಡಿ ಜೀವನ ಕಳೆಯಬಹುದೆಂಬ ಆಶಯ ಈ ಕನ್ನಡಿಗರದ್ದು. ಕತಾರ್​ನಲ್ಲಿರುವ 30 ಸಾವಿರಕ್ಕೂ ಹೆಚ್ಚು ಕನ್ನಡಿಗರಲ್ಲಿ ಶೇ. 60ರಷ್ಟು ಜನ ಮಂಗಳೂರು ಹಾಗೂ ಸುತ್ತಲಿನ ಕರಾವಳಿ ಭಾಗದವರು. ಇನ್ನುಳಿದವರು ಉತ್ತರ ಕರ್ನಾಟಕ ಸೇರಿ ರಾಜ್ಯದ ಇತರ ಪ್ರದೇಶದವರಾಗಿದ್ದಾರೆ.

    22 ರಂದು ಬರಲಿದೆ ವಿಶೇಷ ವಿಮಾನ: ಕತಾರ್​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಕೇಂದ್ರ ಸರ್ಕಾರದೊಂದಿಗೆ ರ್ಚಚಿಸಿದ ನಂತರ ಜೂ. 22 ರಂದು ಬೆಂಗಳೂರಿಗೆ ವಿಶೇಷ ವಿಮಾನ ಬರುತ್ತಿದೆ. ಈ ವಿಮಾನದಲ್ಲಿ 185 ಜನ ಸ್ವದೇಶಕ್ಕೆ ಬರುತ್ತಿದ್ದಾರೆ. ಇವರಲ್ಲಿ ಕೆಲಸ ಕಳೆದುಕೊಂಡವರು, ಗರ್ಭಿಣಿಯರು, ಆರೋಗ್ಯ ಸಮಸ್ಯೆ ಉಳ್ಳವರು, ವೀಸಾ ಮುಗಿದವರು, ಪ್ರವಾಸಿ ವೀಸಾದಡಿ

    ಕತಾರ್​ಗೆ ತೆರಳಿದವರು ಇದ್ದಾರೆ. ಕರಾವಳಿ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕತಾರ್​ನಿಂದ ನೇರವಾಗಿ ಮಂಗಳೂರಿಗೆ ವಿಮಾನ ಸೌಲಭ್ಯ ಒದಗಿಸಬೇಕೆಂಬುದು ಅವರ ಬೇಡಿಕೆಯಾಗಿದೆ. ಬೆಂಗಳೂರಿಗೆ ತೆರಳಿದರೆ ಅಲ್ಲಿ ಕ್ವಾರಂಟೈನ್​ನಲ್ಲಿ ಇದ್ದು, ಮಂಗಳೂರಿಗೆ ತೆರಳಬೇಕಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಕರ್ನಾಟಕದ ಸಾವಿರಾರು ಜನರು ಕತಾರ್​ನಲ್ಲಿ ಸಿಲುಕಿದ್ದಾರೆ. ಸದ್ಯವೇ ಮೊದಲ ವಿಶೇಷ ವಿಮಾನ ಬೆಂಗಳೂರಿಗೆ ಹೊರಡಲಿದೆ. ಕೇಂದ್ರ ಸರ್ಕಾರ ಶೀಘ್ರ ಮತ್ತಷ್ಟು ವಿಮಾನ ಸೌಲಭ್ಯ ಒದಗಿಸಲಿ. ಅದರಲ್ಲೂ ನೇರವಾಗಿ ಮಂಗಳೂರಿಗೂ ವಿಮಾನ ಸೌಲಭ್ಯ ಒದಗಿಸಲು ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ರ್ಚಚಿಸಿದರೆ ಇಲ್ಲಿನ ಕನ್ನಡಿಗರಿಗೆ ಅನುಕೂಲವಾಗುತ್ತದೆ.

    | ಸುಬ್ರಹ್ಮಣ್ಯ ಹೆಬ್ಬಾಗಿಲು, ಕತಾರ್​ನಲ್ಲಿಯ ಉದ್ಯೋಗಿ

    ದೇವಿಕೊಪ್ಪದಲ್ಲಿ ಬಿಗಿ ಬಂದೋಬಸ್ತ್

    ಕಲಘಟಗಿ: ತಾಲೂಕಿನ ದೇವಿಕೊಪ್ಪ ಗ್ರಾಮದ ಪುರುಷನಿಗೆ (68 ವರ್ಷ) ಕರೊನಾ ಸೋಂಕು ಮಂಗಳವಾರ ದೃಢವಾಗಿದ್ದು, ಪಿ-5828 ಎಂದು ಗುರುತಿಸಲಾಗಿದೆ. ಕರೊನಾ ಸೋಂಕಿತ ಪತ್ತೆಯಾಗುತ್ತಿದ್ದಂತೆ ಜಿಲ್ಲಾಧಿಕಾರಿ ನಿರ್ದೇಶನದನ್ವಯ ತಾಲೂಕು ಆಡಳಿತ ಗ್ರಾಮದಲ್ಲಿ ಬೀಡು ಬಿಟ್ಟಿದೆ. ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುತ್ತಿದೆ.

    ಸೋಂಕಿತ ವ್ಯಕ್ತಿಯ ಮನೆಯ ಸುತ್ತಲಿನ ಗೌಡ್ರ ಓಣಿ, ಕಬ್ಬೇರ ಓಣಿ, ಜನತಾ ಪ್ಲಾಟ್ ಬೀದಿ, ಕೆರಿ ಓಣಿ ಪ್ರದೇಶವನ್ನು ಬಫರ್ ಜೋನ್ ಎಂದು ಗುರುತಿಸಲಾಗಿದೆ. ಹುಬ್ಬಳ್ಳಿ- ಕಾರವಾರ ರಾಷ್ಟ್ರೀಯ ಹೆದ್ದಾರಿಗೆ ಗ್ರಾಮದಿಂದ ಸಂರ್ಪಸುವ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳುವ ಒಂದು ಕಿಲೋಮೀಟರ್ ಪ್ರದೇಶವನ್ನು ಮಂಗಳವಾರ ಸೀಲ್​ಡೌನ್ ಮಾಡಿ, ಕುಟುಂಬ ಸದಸ್ಯರನ್ನು ಹಾಗೂ ಪ್ರಾಥಮಿಕ ಸಂಪರ್ಕದಲ್ಲಿ ಇರುವ ವ್ಯಕ್ತಿಗಳನ್ನು ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

    ಕರೊನಾ ಸೋಂಕಿತ ವ್ಯಕ್ತಿಗೆ ನಿಕಟ ಹಾಗೂ ಸಂಪರ್ಕದಲ್ಲಿರುವವರ ಶೋಧ ಕಾರ್ಯ ಜಾರಿಯಲ್ಲಿದೆ. ಸಂರ್ಪತ ಪ್ರತಿಯೊಬ್ಬರೂ ಜೂ. 10ರಂದು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣಕ್ಕೆ ಆಗಮಿಸಲಿರುವ ಸಂಚಾರಿ ಗಂಟಲ ದ್ರವ ಸಂಗ್ರಹ ತಂಡದ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬಿ.ಗುಡಿಹಾಳದಲ್ಲೂ ಬಿಗಿ: ತಾಲೂಕಿನ ಬಿ.ಗುಡಿಹಾಳ ಗ್ರಾಮದಲ್ಲಿ ಮೊದಲ ಕರೊನಾ ಸೋಂಕಿನ ವ್ಯಕ್ತಿ ಪತ್ತೆಯಾಗಿತ್ತು. ನಂತರ ಜೂ. 3ರಂದು ಗ್ರಾಮದಲ್ಲಿ 215 ಜನರ ಗಂಟಲ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಅದರಲ್ಲಿ 21 ವರ್ಷದ ಯುವತಿಗೆ ಕರೊನಾ ಪಾಸಿಟಿವ್ ಇರುವುದು ಶನಿವಾರ ಕಂಡುಬಂದಿದ್ದು, ಪಿ-5381 ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಎರಡು ಪಾಸಿಟಿವ್ ಆಗಿದ್ದರಿಂದ ಗ್ರಾಮದಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗಿದೆ. ಸೋಂಕಿತ ಯುವತಿಯ ಕುಟುಂಬ ಸದಸ್ಯರು ಹಾಗೂ ಅಕ್ಕಪಕ್ಕದವರನ್ನು ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

    ಮಂಗಳವಾರಪೇಟೆ ಸೀಲ್​ಡೌನ್

    ಹುಬ್ಬಳ್ಳಿ: ಇಲ್ಲಿನ ಘಂಟಿಕೇರಿ ಓಣಿ ಬಳಿಯ ಮಂಗಳವಾರ ಪೇಟೆಯ ಒಂದೇ ಕುಟುಂಬದ ಮೂವರಲ್ಲಿ ಭಾನುವಾರ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತಡರಾತ್ರಿ ಮಹಾನಗರ ಪಾಲಿಕೆ ವತಿಯಿಂದ ಸೀಲ್​ಡೌನ್ ಮಾಡಲಾಗಿದೆ.

    ಸೋಂಕಿತನ ಮನೆಯಿಂದ 100 ಮೀ. ಸುತ್ತ ಬ್ಯಾರಿಕೇಡ್ ಹಾಕಿ ಸೀಲ್​ಡೌನ್ ಮಾಡಲಾಗಿದ್ದು, ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮನೆಯಿಂದ ಯಾರೂ ಹೊರಗೆ ಬಾರದಂತೆ ಸೂಚಿಸಲಾಗಿದೆ. ಪಾಲಿಕೆ ವತಿಯಿಂದ ತರಕಾರಿ, ಕಿರಾಣಿ ಮತ್ತಿತರ ಸಾಮಗ್ರಿಗಳನ್ನು ಮನೆ ಬಳಿ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ರಾಜಸ್ಥಾನದ ಜೋಧಪುರದಿಂದ ಜೂ. 4ರಂದು ನಗರಕ್ಕೆ ವಾಪಸಾಗಿದ್ದ 61 ವರ್ಷದ ವ್ಯಕ್ತಿ, ಆತನ ಪತ್ನಿ ಹಾಗೂ 14 ವರ್ಷದ ಪುತ್ರನಿಗೆ ಸೋಂಕು ದೃಢಪಟ್ಟಿತ್ತು. ಕುಟುಂಬದ ಇನ್ನೊಬ್ಬರ ವರದಿ ನೆಗೆಟಿವ್ ಬಂದಿದ್ದು, ಹೋಮ್ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts