More

    ಕಣ್ಮನ ಸೆಳೆಯುತ್ತಿದೆ ವರ್ಲಿ ಕಲೆ

    ವಿಜಯವಾಣಿ ವಿಶೇಷ ಹಾವೇರಿ

    ಜಿಲ್ಲಾಡಳಿತ ಭವನದ ಮಹಡಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಟ್ಟಡದ ರೂಪ ಬದಲಾಯಿಸಿರುವ ಕಲಾ ಶಿಕ್ಷಕರು ಸಾಂಪ್ರದಾಯಿಕ ವರ್ಲಿ ಕಲೆಯ ಚಿತ್ತಾರಗಳಿಂದ ರಂಗು ರಂಗಾಗಿಸಿದ್ದಾರೆ.

    ಡಿಡಿಪಿಐ ಕಚೇರಿಗೆ ಈ ಮೊದಲು ಮಾಸಿದ ಸುಣ್ಣಬಣ್ಣವಿತ್ತು. ಇದೀಗ ವರ್ಲಿ ಕಲೆಯ ರಂಗು ಮೆತ್ತಿಕೊಂಡು ಕಚೇರಿಯ ಗೋಡೆ ಕಂಗೊಳಿಸುತ್ತಿದೆ. ಈ ವರ್ಲಿ ಕಲೆಯಲ್ಲಿ ಶೈಕ್ಷಣಿಕ ಯೋಜನೆಗಳ ಮಾಹಿತಿಯ ಪ್ಲಾಸ್ಟಿಕ್, ಫ್ಲೆಕ್ಸ್ ಫಲಕಗಳ ಬದಲಿಗೆ ಪರಿಸರ ಸ್ನೇಹಿ ಗೋಡೆ ಬರಹಗಳ ಮಾಹಿತಿ, ಆಕರ್ಷಕ ಗೋಡೆ ಬರಹಗಳ ಚಿತ್ತಾರವು ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳ ಗಮನ ಸೆಳೆಯುತ್ತಿದೆ.

    ಕಳೆದ ಒಂದು ತಿಂಗಳಿನಿಂದ 25 ಜನ ಶಿಕ್ಷಕರು ಜಿಲ್ಲಾಡಳಿತ ಭವನದ 2ನೇ ಮಹಡಿಯಲ್ಲಿರುವ ಡಿಡಿಪಿಐ ಕಚೇರಿಯ ಹೊರ ಆವರಣದ ಗೋಡೆಗಳಿಗೆ ವರ್ಲಿ ಕಲೆಯ ಪೇಟಿಂಗ್ ಮಾಡಿದ್ದಾರೆ. ಕಲಾ ಶಿಕ್ಷಕರ ಆಸಕ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಬೆನ್ನೆಲುಬಾಗಿ ನಿಂತಿದ್ದಾರೆ. ಸುಣ್ಣದಿಂದ ಢಾಳಾಗಿ ಕಾಣುತ್ತಿದ್ದ ಗೋಡೆಗಳಿಗೆ ಶೈಕ್ಷಣಿಕ ಚಟುವಟಿಕೆಗಳ ಕುರಿತು ಸಾರ್ವಜನಿಕರ ಗಮನ ಸೆಳೆಯುವ ಚಿತ್ರಗಳನ್ನು ರಚಿಸಲಾಗಿದೆ.

    ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿ ರುವ 25 ಶಿಕ್ಷಕರು ತಮ್ಮ ಕೈಚಳಕದಿಂದ ಗೋಡೆಯ ಅಂದ ಹೆಚ್ಚಿಸಿದ್ದಾರೆ. ಕೆಳ ಭಾಗದಲ್ಲಿ ವರ್ಲಿ ಕಲೆಯ ಚಿತ್ರಗಳು, ಮೇಲ್ಭಾಗದಲ್ಲಿ ಶಿಕ್ಷಣ ಇಲಾಖೆಯ ಯೋಜನೆಗಳಾದ ಉಚಿತ ಪಠ್ಯಪುಸ್ತಕ, ಸೈಕಲ್, ಶೂ ಸಾಕ್ಸ್, ಸಮವಸ್ತ್ರ ವಿತರಣೆ, ಅಕ್ಷರ ದಾಸೋಹ, ಕ್ಷೀರಭಾಗ್ಯ, ಅಂಗವಿಕಲ

    ಮಕ್ಕಳಿಗೆ ವ್ಯಾಯಾಮ, ವಿಟಾಮಿನ್ ಮಾತ್ರೆಗಳ ವಿತರಣೆ, ಪರಿಸರ ಜಾಗೃತಿ, ವಿಜ್ಞಾನ ವಿವಿಧ ಮಾದರಿಗಳ ಪ್ರದರ್ಶನ, ಅಟಲ್ ಟೆಂಕರಿಂಗ್ ಪ್ರಯೋಗಾಲಯ, ಮಕ್ಕಳ ಗುಂಪು ಅಧ್ಯಯನ, ವಿದ್ಯಾರ್ಥಿ ಗಳಿಗೆ ಉಚಿತ ಕಂಪ್ಯೂಟರ್ ಕೊಡುಗೆ, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಒಳಗೊಂಡಂತೆ ಹಲವು ಶೈಕ್ಷಣಿಕ ಯೋಜನೆಗಳ ಕುರಿತ ಚಿತ್ರಗಳು ಇಲ್ಲಿವೆ.

    ಜಿಲ್ಲೆಯ ಎಲ್ಲ ಜೊತೆಗೆ ಶಾಲಾ ಗೋಡೆಗಳಿಗೂ ಚಿತ್ತಾರ ಬಿಡಿಸುವ ಮೂಲಕ ಮಕ್ಕಳಲ್ಲಿ ಪಾರಂಪರಿಕ ಕಲೆಯ ಬಗ್ಗೆ ಆಸಕ್ತಿ ಮೂಡಿಸಲು ಉದ್ದೇಶಿಸಲಾಗಿದೆ. ಫ್ಲೆಕ್ಸ್, ಪ್ಲಾಸ್ಟಿಕ್ ಫಲಕಗಳ ಬದಲಿಗೆ ವರ್ಲಿ ಕಲೆಯ ಚಿತ್ರಗಳಿಗೆ ಅವಕಾಶ ಕಲ್ಪಿಸಿದರೆ ಪರಿಸರ ರಕ್ಷಣೆಯ ಜೊತೆಗೆ ಪಾರಂಪರಿಕ ಕಲೆಗಳಿಗೆ, ಕಲಾವಿದರಿಗೆ ಪ್ರೋತ್ಸಾಹ ದೊರಕುತ್ತದೆ ಎಂಬುದು ಕಲಾ ಶಿಕ್ಷಕರ ಅಭಿಪ್ರಾಯವಾಗಿದೆ.

    ಜಿಲ್ಲೆಯಲ್ಲಿ ಅತ್ಯಂತ ಪ್ರತಿಭಾನ್ವಿತ ಕಲಾ ಶಿಕ್ಷಕರು ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯ ಹಲವು ಶಾಲೆಗಳಲ್ಲಿ ಪೇಂಟಿಂಗ್ ಮಾಡುವುದರ ಮೂಲಕ ತಮ್ಮ ಪ್ರತಿಭೆ ತೋರಿಸಿದ್ದಾರೆ. ಈ ಶಿಕ್ಷಕರಿಗೆ ಮತ್ತಷ್ಟು ಪ್ರೇರಣೆ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಭವನದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯ ಹೊರಗಡೆ ಗೋಡೆಯ ಮೇಲೆ ವರ್ಲಿ ಕಲೆಯ ಚಿತ್ರಗಳನ್ನು ಬಿಡಿಸುವುದರ ಮೂಲಕ ಕಚೇರಿಗೆ ಸುಂದರ ವಾತಾವರಣ ನಿರ್ವಿುಸಿದ್ದಾರೆ. ಇದರಿಂದ ಕಚೇರಿಗೆ ಭೇಟಿ ನೀಡುವವರಿಗೆ ಖುಷಿ ನೀಡಿದೆ.

    | ಡಿಡಿಪಿಐ ಅಂದಾನೆಪ್ಪ ವಡಗೇರಿ ಡಿಡಿಪಿಐ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts