More

    ಕಣ್ಮನ ಸೆಳೆದ ಹಲಿಗೆ ಹಬ್ಬ

    ಧಾರವಾಡ: ಜಾನಪದ ಸೊಗಡು ಹೋಳಿ ಹುಣ್ಣಿಮೆ ಆಚರಿಸಿ ಹಿಂದು ಸಂಪ್ರದಾಯ ಉಳಿಸಿ ಎಂಬ ಧ್ಯೇಯದೊಂದಿಗೆ ನಗರದ ಹೋಳಿ ಹುಣ್ಣಿಮೆ ಆಚರಣೆ ಸಮಿತಿ ವತಿಯಿಂದ ಭಾನುವಾರ ನಗರದಲ್ಲಿ ಬೃಹತ್ ಹಲಿಗೆ ಹಬ್ಬ ನಡೆಸಲಾಯಿತು.

    ಇಲ್ಲಿನ ಕಾಮನಕಟ್ಟಿ ರಸ್ತೆಯ ಶ್ರೀ ಪ್ಯಾಟಿ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಹಲಿಗೆ ಸಂಚಲನಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು. ನಂತರ ಭೂಸಪ್ಪ ಚೌಕ್, ಲೈನ್ ಬಜಾರ್, ಟಿಕಾರೆ ರಸ್ತೆ, ವಿವೇಕಾನಂದ ವೃತ್ತ, ಸುಭಾಷ ರಸ್ತೆ ಮಾರ್ಗವಾಗಿ ಗಾಂಧಿಚೌಕ್​ನಲ್ಲಿ ಸಮಾರೋಪಗೊಂಡಿತು.

    ನಗರದ ವಿವಿಧ ಬಡಾವಣೆಗಳಿಂದ ಆಗಮಿಸಿದ್ದ ಯುವಕರು ಕೇಸರಿ ಧ್ವಜ, ಶಾಲು ಧರಿಸಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಹಲಿಗೆ ಸಂಚಲನ ನೋಡಲು ನೆರದಿದ್ದ ಜನರು ಹಲಿಗೆ ಸದ್ದಿಗೆ ಹೆಜ್ಜೆಹಾಕಿ ಸಂಭ್ರಮಿಸಿದರು. ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಹೋಳಿ ಹುಣ್ಣಿಮೆ ಆಚರಣೆ ಸಮಿತಿ ಅಧ್ಯಕ್ಷ ಶಂಕರ ಶೇಳಕೆ, ಈರೇಶ ಅಂಚಟಗೇರಿ, ಮೋಹನ ರಾಮದುರ್ಗ, ನೂರಾರು ಯುವಕರು, ಹಿರಿಯರು, ಇತರರು ಇದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts