More

    ಕಡಿಮೆ ವೀರ್ಯಾಣುಗಳಿದ್ದರೂ ತಂದೆಯಾಗಬಹುದು

    ಹುಬ್ಬಳ್ಳಿ: ನಿಸ್ಸಂತಾನತೆಯ ಸ್ಥಿತಿಯಲ್ಲಿ ಪುರುಷರೂ ಕೂಡ ಚಿಕಿತ್ಸೆ ಪಡೆಯಲು ಮುಂದಾಗಬೇಕು. ಪುರುಷರು ತಮ್ಮಲ್ಲಿ ಯಾವುದೇ ನ್ಯೂನತೆ, ತೊಂದರೆ ಇಲ್ಲ ಎಂದು ಭಾವಿಸುತ್ತಾರೆ. ಇಂದಿನ ಆಧುನಿಕ ವೈದ್ಯಕೀಯ ತಂತ್ರಜ್ಞಾನದ ಸಹಾಯದಿಂದ ಪುರುಷರು ತಮ್ಮಲ್ಲಿರುವ ನ್ಯೂನತೆಯನ್ನು ತಿಳಿದುಕೊಂಡು ಸರಿಯಾದ ಚಿಕಿತ್ಸೆ ಪಡೆದು, ತಂದೆಯ ಭಾಗ್ಯ ಪಡೆಯಬಹುದು ಎಂದು ಇಂದಿರಾ ಐವಿಎಫ್ ಗ್ರುಪ್​ನ ಚೇರ್ಮನ್ ಡಾ. ಅಜಯ ಮುರ್ಡಿಯಾ ಹೇಳಿದರು.

    ಫಾದರ್ಸ್ ಡೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ತಾಯಿಯು ತನ್ನ ಸಂತತಿಗೋಸ್ಕರ 9 ತಿಂಗಳು ತನ್ನ ಗರ್ಭದಲ್ಲಿಟ್ಟುಕೊಂಡು ಕಾಪಾಡಿಕೊಳ್ಳುತ್ತಾಳೆ. ಅದೇ ರೀತಿಯಾಗಿ ತಂದೆ ಸಹ ಅದರ ಭವಿಷ್ಯದ ಬಗ್ಗೆ ಯೋಚಿಸುತ್ತಾನೆ. ಪ್ರತಿಯೊಬ್ಬ ಪುರುಷನು ತೊದಲು ನುಡಿಗಳಿಂದ ಹ್ಯಾಪಿ ಫಾದರ್ಸ್ ಡೇ ಎಂಬ ಮಾತನ್ನು ಕೇಳಲು ಕಾತುರನಾಗಿರುತ್ತಾನೆ. ಆದರೆ, ಅನೇಕ ಕಾರಣಗಳಿಂದ ಪುರುಷರು ತಂದೆಯಾಗಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕೆಲವು ವೈದ್ಯಕೀಯ ಕಾರಣಗಳು ಹಾಗೂ ಬದಲಾಗುತ್ತಿರುವ ಜೀವನಶೈಲಿ, ಧೂಮಪಾನ ಮತ್ತು ಮದ್ಯಪಾನಗಳಂತಹ ಕೆಟ್ಟ ಅಭ್ಯಾಸಗಳು ಕಾರಣ ಎಂದರು.

    ಇಂದಿರಾ ಐವಿಎಫ್ ಹುಬ್ಬಳ್ಳಿ ಕೇಂದ್ರದ ಮುಖ್ಯಸ್ಥೆ ಡಾ. ಪ್ರತಿಭಾ ಪವಾರ ಮಾತನಾಡಿ, ಕೆಲ ವರ್ಷಗಳ ಹಿಂದೆ ವೀರ್ಯಾಣುಗಳ ಕೊರತೆಯಿಂದ ವೀರ್ಯದಾನಿಗಳ ಸಹಾಯ ಪಡೆಯಲಾಗುತ್ತಿತ್ತು. ಆದರೆ, ಇಂದಿನ ದಿನಮಾನಗಳಲ್ಲಿ ಐವಿಎಫ್, ಐಸಿಎಸ್​ಐಗಳಂಥ ತಂತ್ರಜ್ಞಾನಗಳಿಂದ ತಂದೆಯ ಭಾಗ್ಯ ಪಡೆಯಬಹುದು ಎಂದರು.

    ಇಂದಿರಾ ಐವಿಎಫ್ ಹುಬ್ಬಳ್ಳಿ ಕೇಂದ್ರದ ತಜ್ಞ ವೈದ್ಯ ಡಾ. ಆಶಾ ಪಾಟೀಲ ಮಾತನಾಡಿ, ಅಂಕಿ ಅಂಶಗಳ ಪ್ರಕಾರ ಧೂಮಪಾನ ಹಾಗೂ ಮದ್ಯಪಾನ ಮಾಡುವ ಪುರುಷರಲ್ಲಿ ಶೇ. 13ರಿಂದ 15ರಷ್ಟು ವೀರ್ಯಾಣುಗಳು ಕಡಿಮೆಯಾಗುತ್ತವೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts