More

    ಕಂಟಕ ತಂದ ಮುಂಬೈ ನಂಟು

    ಕಾರವಾರ: ಮುಂಬೈ ನಂಟು ಉತ್ತರ ಕನ್ನಡಕ್ಕೆ ಕಂಠಕ ತರುತ್ತಿದೆ. ಮಹಾರಾಷ್ಟ್ರದಿಂದ ಮರಳಿದ ವ್ಯಕ್ತಿಗಳಿಂದ ಜಿಲ್ಲೆಯಲ್ಲಿ ಸೋಂಕು ಹರಡುವುದು ಮುಂದುವರಿದಿದೆ.

    ಸದ್ಯ ಮಹಾರಾಷ್ಟ್ರದಿಂದ ಜಿಲ್ಲೆಗೆ ಬರಲು 4028 ಜನರು ಸೇವಾ ಸಿಂಧು ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದುವರೆಗೆ 2 ಸಾವಿರದಷ್ಟು ಜನ ಮಾತ್ರ ಜಿಲ್ಲೆಗೆ ಬಂದು ಕ್ವಾರಂಟೈನ್​ನಲ್ಲಿದ್ದಾರೆ. ಇನ್ನೂ ಎರಡು ಸಾವಿರಕ್ಕೂ ಅಧಿಕ ಜನ ಬರುವ ಸಾಧ್ಯತೆ ಇದೆ. ಸದ್ಯ ಮೇ 31 ರವರೆಗೆ ರಾಜ್ಯಕ್ಕೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರಲು ನಿರ್ಬಂಧವಿರುವುದರಿಂದ ಅಲ್ಲಿಯವರೆಗೆ ತೊಂದರೆ ಇಲ್ಲ. ಜೂನ್ ನಂತರ ಎರಡನೇ ಹಂತದಲ್ಲಿ ಅನಿವಾಸಿ ಉತ್ತರ ಕನ್ನಡಿಗರು ವಿವಿಧೆಡೆಯಿಂದ ಬರುವವರಿಂದ ಇನ್ನಷ್ಟು ಕರೊನಾ ಪ್ರಕರಣಗಳು ಹೆಚ್ಚುವ ಆತಂಕವಿದೆ.

    ಶುಕ್ರವಾರ ಒಂದು ಪ್ರಕರಣ ಖಚಿತ: ಶುಕ್ರವಾರ ಹೊನ್ನಾವರದಲ್ಲಿ ಇನ್ನೊಂದು ಪ್ರಕರಣ ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಮೇ 12 ರಂದು ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದ ಹೊನ್ನಾವರ ಹೊಸಪಟ್ಟಣದ 44 ವರ್ಷದ ವ್ಯಕ್ತಿಗೆ ಸೋಂಕು ಇರುವುದು ಖಚಿತವಾಗಿದೆ. ಆತನ ಪತ್ನಿ ಹಾಗೂ ಮಗುವಿನ ಪ್ರಯೋಗಾಲಯ ಪರೀಕ್ಷಾ ವರದಿ ಇನ್ನೂ ಬರುವುದು ಬಾಕಿ ಇದೆ.

    1200 ಜನರ ವರದಿ ಬಾಕಿ: ಜಿಲ್ಲೆಯಲ್ಲಿ ಶುಕ್ರವಾರದವರೆಗೆ 5,448 ಜನರನ್ನು ಮನೆ, ಹೋಟೆಲ್ ಹಾಗೂ ವಿವಿಧ ಸರ್ಕಾರಿ ಕಟ್ಟಡಗಳಲ್ಲಿ ನಿಗಾದಲ್ಲಿ ಇರಿಸಲಾಗಿದೆ. ಇದುವರೆಗೆ 4,376 ಜನರ ಗಂಟಲ ದ್ರವದ ಮಾದರಿಯನ್ನು ಪಡೆಯಲಾಗಿದೆ. ಅದರಲ್ಲಿ 3,084 ಜನರ ಪ್ರಯೋಗಾಲಯ ವರದಿ ನೆಗೆಟಿವ್ ಬಂದಿದೆ. 1,228 ಜನರ ವರದಿ ಇನ್ನೂ ಬರುವುದು ಬಾಕಿ ಇದೆ. ಶುಕ್ರವಾರ 264 ಜನರ ಗಂಟಲ ದ್ರವದ ಮಾದರಿ ಪಡೆಯಲಾಗಿದ್ದು, 109 ಜನರನ್ನು ವಿವಿಧ ಆಸ್ಪತ್ರೆಗಳಲ್ಲಿ ಐಸೋಲೇಶನ್​ನಲ್ಲಿ ಇರಿಸಲಾಗಿದೆ.

    ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯ ಕೋವಿಡ್-19 ಪ್ರಕರಣಗಳ ಸಂಖ್ಯೆ 64 ಕ್ಕೆ ಏರಿಕೆಯಾಗಿದೆ. ಅದರಲ್ಲಿ 12 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 52 ಸಕ್ರಿಯ ಪ್ರಕರಣಗಳಿವೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸೋಂಕಿತ ತಾಯಿ ಮಗನಿಗೂ ಕಾರವಾರ ಕ್ರಿಮ್್ಸ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆಸ್ಪತ್ರೆಯಲ್ಲಿ 51 ರೋಗಿಗಳಿದ್ದಾರೆ.ಮೇ 8 ರಂದು ದಾಖಲಾದ 8 ಜನರ ಆರೋಗ್ಯ ಚೇತರಿಕೆಯಾಗಿದ್ದು, ಒಂದೆರಡು ದಿನದಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಕ್ರಿಮ್್ಸ ನಿರ್ದೇಶಕ ಡಾ.ಗಜಾನನ ನಾಯಕ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿರುವವರು:
    ಕಾರವಾರ -285, ಅಂಕೋಲಾ – 79, ಕುಮಟಾ-134, ಹೊನ್ನಾವರ – 156, ಭಟ್ಕಳ- 202, ಶಿರಸಿ- 175, ಸಿದ್ದಾಪುರ- 146, ಯಲ್ಲಾಪುರ- 76, ಹಳಿಯಾಳ, 503, ದಾಂಡೇಲಿ – 170, ಮುಂಡಗೋಡ, 95, ಜೊಯಿಡಾ-150 ಜನರು ಜಿಲ್ಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts