More

    ಔರಾದ್ ತಾಲೂಕಿನ ರಾಮಶೆಟ್ಟಿಗೆ ಒಲಿದ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ

    ರೇವಣಸಿದ್ದಪ್ಪ ಪಾಟೀಲ್ ಬೀದರ್
    ದೊಡ್ಡಾಟ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯ ತೊಡಗಿಸಿಕೊಂಡಿದ್ದರೂ ಎಲೆಮರೆ ಕಾಯಿಯಂತಿರುವ ಹಿರಿಯ ರಂಗ ಕಲಾವಿದ ರಾಮಶೆಟ್ಟಿ ಬಂಬುಳಗೆ ಅವರಿಗೆ ಪ್ರತಿಷ್ಠಿತ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಬಂದಿದೆ.

    ಯಾವುದೇ ಫಲಾಪೇಕ್ಷೆ ಇಲ್ಲದೆ ತಮ್ಮ ಕಾರ್ಯಚಟುವಟಿಕೆ ಮುಂದುವರಿಸಿರುವ 63ರ ಹರೆಯದ ಬಂಬುಳಗೆ ಅವರ ಸೇವೆಗೆ ತಡವಾದರೂ ಮನ್ನಣೆ ಸಿಕ್ಕಿದೆ. ಇವರ ಸೇವೆ ಗುರುತಿಸಿ ಅಕಾಡೆಮಿಯು 2020-21ರ ದೊಡ್ಡಾಟ ಕ್ಷೇತ್ರದ ವಾಷರ್ಿಕ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಏಪ್ರಿಲ್ ಮೊದಲ ವಾರ ಬಾಗಲಕೋಟೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಪ್ರಶಸ್ತಿಯು 25 ಸಾವಿರ ರೂ. ನಗದು, ಪುರಸ್ಕಾರ ಒಳಗೊಂಡಿದೆ.

    ಜಿಲ್ಲೆಯ ಬಯಲಾಟ ಕ್ಷೇತ್ರದ ಕಲಾವಿದರ ಸಾಲಿನ ಅಗ್ರಪಂಕ್ತಿಯೊಳಗೆ ಸ್ಥಾನ ಪಡೆದವರು ರಾಮಶೆಟ್ಟಿ ಬಂಬುಳಗೆ. ಔರಾದ್ ತಾಲೂಕಿನ ಜೀರ್ಗಾ ನಿವಾಸಿಯಾದ ಬಂಬುಳಗೆ ವೃತ್ತಿಯಲ್ಲಿ ಕೃಷಿಕ. ಕೃಷಿ ಜತೆಗೆ ದೊಡ್ಡಾಟ ಮತ್ತು ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಆರ್ಥಿಕವಾಗಿ ಅಷ್ಟೇನು ಸಬಲವಾಗಿರದಿದ್ದರೂ ಸಂಸ್ಕಾರ, ಸಂಸ್ಕೃತಿ ಶ್ರೀಮಂತಿಕೆಗೇನೂ ಕೊರತೆ ಇಲ್ಲ. ಇದೇ ಅವರ ಯಶಸ್ಸಿಗೆ ಹಾದಿ ತೋರಿಸಿದೆ.

    ಕೇವಲ ಏಳನೇ ತರಗತಿವರೆಗೆ ಶಿಕ್ಷಣ ಪಡೆದಿರುವ ಬಂಬುಳಗೆ, ಚಿಕ್ಕಂದಿನಿಂದಲೂ ರಂಗ ಕಲೆ ಮತ್ತು ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಹಳ್ಳಿಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಉಪ ಜೀವನಕ್ಕೆ ಕೃಷಿ ಮಾಡಿದರೆ, ಹವ್ಯಾಸಕ್ಕೆ ದೊಡ್ಡಾಟ, ನಾಟಕ, ಸಂಗೀತ, ಕೋಲಾಟ ಆರಿಸಿಕೊಂಡರು. ಕೃಷಿ ಜತೆಯಲ್ಲಿ ನಿತ್ಯವೂ ಸಾಂಸ್ಕೃತಿಕ ಕ್ಷೇತ್ರಕ್ಕೂ ಸಮಯ ನೀಡಿ ಗಡಿ ಜಿಲ್ಲೆಯಲ್ಲಿ ಬಯಲಾಟ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ.

    ಹಿರಿಯ ರಂಗಕಲಾವಿದ ಗುರುನಾಥ ಕೋಟೆ ನೇತೃತ್ವದ ದೊಡ್ಡಾಟ ಪಡೆಯಲ್ಲಿ ಅಭಿನಯಿಸುತ್ತ ಬಂದ ಇವರು ದೊಡ್ಡಾಟದಲ್ಲಿ ವಿಶೇಷವಾಗಿ ಗಿರಿಜಾ ಕಲ್ಯಾಣದಲ್ಲಿ ಸಾರಥಿ ಮತ್ತು ವಜ್ಜರ ಧನಿಷ್ಠ ಪ್ರಧಾನಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ನಂತರ ನಾಲ್ಕು ದಶಕದಿಂದ ವಿವಿಧೆಡೆ ದೊಡ್ಡಾಟ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ದೊಡ್ಡಾಟ ಆಡುವುದು ಸುಲಭವಲ್ಲ. ಇದಕ್ಕಾಗಿ ಸುಮಾರು 25 ಕಲಾವಿದರ ತಂಡ, ಏಳೆಂಟು ತಿಂಗಳ ಸಿದ್ಧತೆ ಬೇಕು. ಮುಖ್ಯವಾಗಿ ದೊಡ್ಡಾಟದಲ್ಲಿ ಡೈಲಾಗ್ಗಳನ್ನು ಗಟ್ಟಿ ಧ್ವನಿಯಲ್ಲಿ ಹೇಳಬೇಕು. ಅಷ್ಟು ದಿನ ಕಾಲ ಧ್ವನಿ ಕೆಡದಂತೆ ಎಣ್ಣೆ ಮತ್ತಿತರ ಆಹಾರ ಸೇವನೆ ಬಿಡಬೇಕಾಗುತ್ತದೆ.

    ಯಕ್ಷಗಾನದ ಪ್ರತಿರೂಪದಂತಿರುವ ದೊಡ್ಡಾಟ ಇಂದು ಸಾಗರದಾಚೆ ತನ್ನ ಪ್ರಯೋಗಗಳನ್ನು ಮಾಡಬೇಕಿತ್ತು. ಆದರೆ ಪ್ರೋತ್ಸಾಹದ ಕೊರತೆಯಿಂದ ಕಲೆ ನಶಿಸಿ ಹೋಗಿದೆ. ದೊಡ್ಡಾಟ ಆಡಿಸುವವರು, ಆಡುವವರು ಇಲ್ಲದಂತಾಗಿದೆ. ಯಕ್ಷಗಾನದಂತೆ ರಂಗ ಕಲೆಯ ಸಾಂಸ್ಕೃತಿಕ ಪ್ರತೀಕವಾಗಿರುವ ದೊಡ್ಡಾಟವನ್ನು ಸಹ ಜೀವಂತವಾಗಿ ಇಡಬೇಕಿದೆ. ನಾಟಕ ಆಡಿಸುವವರು ಮತ್ತು ನಟರಿಗೆ ಅಗತ್ಯ ತರಬೇತಿ ಜತೆಗೆ ಪ್ರೋತ್ಸಾಹ ನೀಡಲು ಸಕರ್ಾರ, ಅಕಾಡೆಮಿಗಳು ಮುಂದಾಗಬೇಕಿದೆ.

    ಕೋಲಾಟ ಮಾಸ್ಟರ್ ರಾಮಶೆಟ್ಟಿ: ದೊಡ್ಡಾಟ ಜತೆಗೆ ಕೋಲಾಟ ಮತ್ತು ತಬಲಾ ವಾದನದಲ್ಲಿ ರಾಮಶೆಟ್ಟಿ ಅವರದ್ದು ಎತ್ತಿದ ಕೈ. ಸ್ವಗ್ರಾಮ ಸೇರಿ ವಿವಿಧೆಡೆ ಹಬ್ಬ, ಮಹೋತ್ಸವ ನಿಮಿತ್ತ ನಡೆಯುವ ಕೋಲಾಟದಲ್ಲಿ ಇವರ ನೇತೃತ್ವವೇ ಇರುತ್ತದೆ. ಜಾನಪದ ಹಾಡು ಹಾಡುತ್ತ ಆಡುವ ಕೋಲಾಟ ನೋಡಲು ಅದ್ಭುತ. ಕೋಲಾಟ ಆಡುವುದರ ಜತೆಗೆ ರಾಮಶೆಟ್ಟಿ ಅವರು ಕಲಿಸುತ್ತಾರೆ. ಹೀಗಾಗಿ ಕೋಲಾಟ ಮಾಸ್ಟರ್ ಎಂದೇ ಕರೆಯುತ್ತಾರೆ. ಅಲ್ಲದೆ ದಬಲಾ ವಾದನದಲ್ಲೂ ಸೈ ಎನಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts