More

    ಒಳಚರಂಡಿ ಕಾಮಗಾರಿ ಶೇ. 90ರಷ್ಟು ಪೂರ್ಣ

    ಬ್ಯಾಡಗಿ: ಪಟ್ಟಣದ ಒಳಚರಂಡಿ ಹಾಗೂ 24x7 ನೀರು ಸರಬರಾಜು ಯೋಜನೆ ಕಾಮಗಾರಿ ಶೇ. 90 ರಷ್ಟು ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ಸಂಪರ್ಕ ನೀಡಲಾಗುತ್ತಿದೆ ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನವೀನಕುಮಾರ ಎಚ್.ವಿ. ಹೇಳಿದರು.

    ಪಟ್ಟಣದ ವಿವಿಧೆಡೆ ಯೋಜನೆಯ ಕಾಮಗಾರಿ ಗುರುವಾರ ಪರಿಶೀಲಿಸಿ, ಒಳಚರಂಡಿ ನೀರು ಹರಿಸಲು ಚಾಲನೆ ನೀಡಿ ಅವರು ಮಾತನಾಡಿದರು.

    ಪಟ್ಟಣದ 23 ವಾರ್ಡ್​ಗಳು ಹಾಗೂ ಹೊಸಬಡಾವಣೆ ಸೇರಿ ಒಳಚರಂಡಿ ಕಾಮಗಾರಿಗೆ 65.47 ಕೋಟಿ ರೂ. ಮಂಜೂರಾಗಿದೆ. 24*7 ಕುಡಿಯುವ ನೀರು ಪೂರೈಕೆ ಯೋಜನೆಗೆ 44.57 ಕೋಟಿ ರೂ. ಹಾಗೂ ರಾಣೆಬೆನ್ನೂರಿನಿಂದ ಬ್ಯಾಡಗಿ ಪೈಪ್​ಲೈನ್ ನವೀಕರಣಕ್ಕೆ 8 ಕೋಟಿ ರೂ. ಹಾಗೂ ಮನೆ ಮನೆಗಳಿಗೆ ನೀರಿನ ಪೈಪ್, ಚಂಬರ್ ಅಳವಡಿಸಲು 2.5 ಕೋಟಿ ರೂ. ಮಂಜೂರಾಗಿದೆ.ಯೋಜನೆಯ ಶೇ. 90ರಷ್ಟು ಕಾಮಗಾರಿ ಪೂರ್ಣಗೊಳಿಸಿದ್ದು, ಹಂತಹಂತವಾಗಿ ಸಂಪರ್ಕ ನೀಡಲಾಗುವುದು ಎಂದರು.

    ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಮಾತನಾಡಿ, 23 ವಾರ್ಡ್​ಗಳಲ್ಲಿ ಪೈಪ್​ಲೈನ್ ಹಾಗೂ ಚಂಬರ್ ನಿರ್ವಿುಸಿದ್ದು, ಗಾಂಧಿನಗರ, ವಿದ್ಯಾನಗರ, ಬಸವೇಶ್ವರ ನಗರ, ನೆಹರು ನಗರಗಳಲ್ಲಿ ಸಂಪರ್ಕ ನೀಡಲಾಗುತ್ತಿದೆ. ಒಳಚರಂಡಿ ನೀರು ಹರಿದು ಸಂಗ್ರಹವಾಗಲು ದೊಡ್ಡ ಮಟ್ಟದ ನೀರು ಶುದ್ಧೀಕರಣ ಘಟಕವನ್ನು ತೆರೇದಹಳ್ಳಿ ಬಳಿ ನಿರ್ವಿುಸಲಾಗಿದೆ. ಪಕ್ಕದಲ್ಲಿ ಕಸ ಬೇರ್ಪಡಿಸಿ ಮರುಬಳಕೆ ಮಾಡುವ ಘಟಕ, ಇತರ ಕಾಮಗಾರಿ ನಡೆದಿವೆ. ಸಾರ್ವಜನಿಕರಿಗೆ ಯುಜಿಡಿ ಹಾಗೂ ನೀರು ಪೂರೈಕೆ ಕುರಿತು ಸಾಕಷ್ಟು ಮಾಹಿತಿ ನೀಡಿದ್ದೇವೆ. ಪಟ್ಟಣವನ್ನು ರಾಜ್ಯದಲ್ಲಿ ನಂ.1 ಸ್ವಚ್ಛ ನಗರ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

    ಸಾರ್ವಜನಿಕರು ನಿಯಮಿತವಾಗಿ ನಿಗದಿಪಡಿಸಿದ ಶುಲ್ಕ ನೀಡಬೇಕು. ಹೊಸ ನಳಗಳ ಸಂಪರ್ಕ ಪಡೆಯುವರು ಪುರಸಭೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

    ಇಂಜಿನಿಯರ್ ಎಂ. ಉಮೇಶ, ಮಹಾಂತೇಶ ಹಳ್ಳಿ, ಎ.ವೀರಾಚಾರ್ಯ, ಪುರಸಭೆ ಸದಸ್ಯರಾದ ಗಾಯತ್ರಿ ರಾಯ್ಕರ, ಈರಣ್ಣ ಬಣಕಾರ, ಸುಭಾಸ ಮಾಳಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts