More

    ಒತ್ತುವರಿ ತೆರವು ಮಾಡಿ ರಸ್ತೆ ಅಭಿವೃದ್ಧಿ

    ಬೇಲೂರು: ಪಟ್ಟಣದ ಪಂಪ್‌ಹೌಸ್ ರಸ್ತೆಯಿಂದ ವಿವಿಧ ವಾರ್ಡ್‌ಗಳಿಗೆ ಸಂಪರ್ಕ ಕಲ್ಪಿಸುವ ಹಳೇ ಕುರುಬಗೇರಿ, ಕನಕ ಮಾರ್ಗದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸೋಮವಾರ ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ ಹಾಗೂ ಸದಸ್ಯರು ಚಾಲನೆ ನೀಡಿದರು.


    ರಸ್ತೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ಜತೆಗೆ ಗಿಡಗಂಟಿಗಳಿಂದ ಮುಚ್ಚಿಹೋಗಿತ್ತು. ವಾರ್ಡ್ ಸಭೆಗೆ ಬಂದ ಸಂದರ್ಭ ಸಾರ್ವಜನಿಕರಿಂದ ದೂರು ಬಂದ ಕಾರಣ ಜಾಗವನ್ನು ಒತ್ತುವರಿದಾರರಿಂದ ಬಿಡಿಸುವ ಮೂಲಕ ಸಮತಟ್ಟು ಮಾಡಿ 55 ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕರಣ ಮಾಡಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ಸಿ.ಎನ್.ದಾನಿ ತಿಳಿಸಿದರು.


    ಸದಸ್ಯ ಶಾಂತಕುಮಾರ್ ಮಾತನಾಡಿ, ರಸ್ತೆಗಳನ್ನು ಯಾರೇ ಒತ್ತುವರಿ ಮಾಡಿದ್ದರೂ ಮುಲಾಜಿಲ್ಲದೆ ಬಿಡಿಸಿರುವುದಕ್ಕೆ ಇದೊಂದು ಉದಾಹರಣೆಯಾಗಿದೆ. ಹಲವಾರು ವರ್ಷಗಳಿಂದ ಈ ರಸ್ತೆಯನ್ನು ಕೆಲ ಪ್ರಭಾವಿಗಳು ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದ್ದರು. ಆದರೆ ಪುರಸಭೆ ಆಡಳಿತ ಮುಲಾಜಿಲ್ಲದೆ ತೆರವುಗೊಳಿಸಿ ರಸ್ತೆ ಮಾಡಿಸಲಾಗಿದೆ. ಇಂಥ ಹಲವಾರು ರಸ್ತೆಗಳು ಒತ್ತುವರಿ ಆಗಿದ್ದರೆ ಅಂಥ ರಸ್ತೆಗಳನ್ನು ತೆರವುಗೊಳಿಸುವುದರ ಮೂಲಕ ಸಾರ್ವಜನಿಕರ ಉಪಯೋಗಕ್ಕೆ ನೀಡಿ ರಸ್ತೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಕವಿ, ಸಾಹಿತಿಗಳ ಹೆಸರು ನಾಮಕರಣ ಮಾಡಲಾಗುವುದು ಎಂದರು.


    ಸದಸ್ಯ ಅಶೋಕ್ ಮಾತನಾಡಿ, ಗೆಂಡೇಹಳ್ಳಿ ರಸ್ತೆಯಿಂದ ಫಿಶ್ ಮಾರ್ಕೆಟ್‌ವರೆಗೂ ಇತಿಹಾಸವಿದ್ದ ರಸ್ತೆಯನ್ನು ಬಿಡಿಸುವ ಮೂಲಕ ಅಧ್ಯಕ್ಷ ಹಾಗೂ ಅಧಿಕಾರಿಗಳು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಇದೇ ರೀತಿ ಪುರಸಭೆ ವ್ಯಾಪ್ತಿಯಲ್ಲಿ ಹಲವು ಭಾಗಗಳಲ್ಲಿ ರಸ್ತೆಗಳು ಒತ್ತುವರಿಯಾಗಿದ್ದು ಅವುಗಳನ್ನು ಬಿಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.


    ಪುರಸಭೆ ಸದಸ್ಯರಾದ ಬಿ.ಗಿರೀಶ್, ಪುಟ್ಟಸ್ವಾಮಿ, ಜೆಡಿಎಸ್ ಮುಖಂಡ ಸಂತೋಷ್, ಶಿವಣ್ಣ, ಜಗದೀಶ್, ಶೇಖರ್, ನಾಸಿರ್, ಆರೋಗ್ಯಾಧಿಕಾರಿ ಲೋಹಿತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts