More

    ಒತ್ತುವರಿ ಜಾಗದಲ್ಲಿ ನಿರ್ಮಿಸಿದ್ದ ರೆಸಾರ್ಟ್ ತೆರವು

    ಸಕಲೇಶಪುರ: ಅರಣ್ಯ ಜಾಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿದ್ದ ರೆಸಾರ್ಟ್ ಹಾಗೂ ಮನೆಯನ್ನು ಅರಣ್ಯ ಇಲಾಖೆ ಮಂಗಳವಾರ ವಶಕ್ಕೆ ಪಡೆದಿದೆ.

    ತಾಲೂಕಿನ ಅಚ್ಚನಹಳ್ಳಿ ಗ್ರಾಮದ ಸರ್ವೆ ನಂ.92ರಲ್ಲಿ 7.36 ಎಕರೆ, ಸರ್ವೆ ನಂಬರ್ 148/1 ರಲ್ಲಿ 3 ಎಕರೆ, ಸರ್ವೆ ನಂ. 148/2 ರಲ್ಲಿ 2 ಎಕರೆ ಸೇರಿದಂತೆ ಒಟ್ಟು 14.36 ಎಕರೆ ಅರಣ್ಯಕ್ಕೆ ಸೇರಿದ ಜಾಗವನ್ನು ಗ್ರಾಮದ ಸುಭಾಷ್ ಸ್ಟೀಪನ್ ಕುಟುಂಬ ಒತ್ತುವರಿ ಮಾಡಿಕೊಂಡು ಸ್ಟೋನ್‌ವ್ಯಾಲಿ ಎಂಬ ಹೆಸರಿನ ರೆಸಾರ್ಟ್ ಹಾಗೂ ಮನೆ ನಿರ್ಮಿಸಿದ್ದರು. ಈ ಬಗ್ಗೆ ಸಕಲೇಶಪುರ ವಲಯ ಅರಣ್ಯಾಧಿಕಾರಿಗಳು ದೂರು ದಾಖಲಿಸಿದ್ದರು.

    ದೂರನ್ನು ಆಧಾರಿಸಿ ತನಿಖೆ ನಡೆಸಿದ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ರವೀಂದ್ರ ಅವರ ನ್ಯಾಯಾಲಯ ಅಕ್ರಮವಾಗಿ ನಿರ್ಮಿಸಿರುವ ರೆಸಾರ್ಟ್ ಹಾಗೂ ಮನೆ ತೆರವಿಗೆ ಆದೇಶಿಸಿತ್ತು.

    ಈ ಹಿನ್ನೆಲೆಯಲ್ಲಿ ಸಕಲೇಶಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹದೇವ್ ಹಾಗೂ ವಲಯಾರಣ್ಯಾಧಿಕಾರಿ ಶಿಲ್ಪಾ ಅವರ ನೇತೃತ್ವದಲ್ಲಿ ಹಾಸನ, ಅರಕಲಗೂಡು, ಬೇಲೂರು ಹಾಗೂ ಯಸಳೂರು ವಲಯ ಅರಣ್ಯಾಧಿಕಾರಿಗಳು ಹಾಗೂ 50 ಕ್ಕೂ ಅಧಿಕ ಅರಣ್ಯ ಸಿಬ್ಬಂದಿ ದಾಳಿ ನಡೆಸಿ, ಮನೆಯಿಂದ ಕುಟುಂಬದ ಸದಸ್ಯರನ್ನು ಹೊರ ಕಳುಹಿಸಿ, ರೆಸಾರ್ಟ್‌ಗೆ ಬೀಗ ಹಾಕಿದ್ದಲ್ಲದೆ ರೆಸಾರ್ಟ್ ಪ್ರವೇಶಿಸದಂತೆ ಕಂದಕ ನಿರ್ಮಾಣ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts