More

    ಒಂದು ಎಕರೆ ಬದನೆ ಬೆಳೆ ನಾಶ ಮಾಡಿದ ರೈತ

    ಮಾಂಜರಿ: ಕರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್‌ಡೌನ್ ಘೋಷಿಸಿದ್ದರಿಂದ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗದೆ ಅಸಹಾಯಕರಾಗಿದ್ದಾರೆ. ಸಮೀಪದ ನಣದಿ ಗ್ರಾಮದ ರೈತ ಅಭೀಜಿತ ಅಶೋಕ ಧರ್ಮೋಜೆ ಒಂದು ಎಕರೆಯಲ್ಲಿ ಬೆಳೆದಿದ್ದ ಬದನೆಕಾಯಿ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾರೆ.

    ಫೆಬ್ರವರಿಯಲ್ಲಿ 35,000 ರೂ. ಖರ್ಚು ಮಾಡಿ ಒಂದು ಎಕರೆ ಬದನೆ ಬೆಳೆದಿದ್ದರು. ಲಾಕ್‌ಡೌನ್ ಮೊದಲು ವಿವಿಧ ಮಾರುಕಟ್ಟೆಗೆ ತೆರಳಿ ಬದನೆ ಮಾರಿ 10,000 ರೂ. ಆದಾಯ ಗಳಿಸಿದ್ದೆ. ಆದರೆ, ಲಾಕ್‌ಡೌನ್ ಪ್ರಾರಂಭವಾದ ಬಳಿಕ ಮಾರಾಟ ಸ್ಥಗಿತಗೊಂಡಿತು. ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ವರುಣನ ಕಾಟ ಹಾಗೂ ಸಾಗಣೆ ಮಾಡಲು ಬೇಕಾದ ವಾಹನ ಸಿಗದೆ ಗಿಡಗಳನ್ನು ಟ್ರ್ಯಾಕ್ಟರ್ ಮೂಲಕ ನೆಲದಲ್ಲೇ ಮುಚ್ಚಿ ಹಾಕಿದೆ ಎಂದು ಅಭಿಜಿತ ಅಳಲು ತೋಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts