More

    ಐಸಿಸಿ ಗಮನ ಸೆಳೆದ ಗೋಕರ್ಣ ಬೀಚ್ ಕ್ರಿಕೆಟ್

    ಕಾರವಾರ: ವಿದೇಶಿ ಪ್ರವಾಸಿಗರ ನೆಚ್ಚಿನ ತಾಣ ಗೋಕರ್ಣ ಕಡಲ ತೀರ ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಗಮನವನ್ನೂ ಸೆಳೆದಿದೆ. ಗೋಕರ್ಣ ಕುಡ್ಲೆ ಕಡಲ ತೀರದಲ್ಲಿ ಯುವಕರು ಕ್ರಿಕೆಟ್ ಆಡುತ್ತಿರುವ ಫೋಟೋವನ್ನು ಐಸಿಸಿ ಸೋಮವಾರ ಟ್ವೀಟ್ ಮಾಡಿದೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ ಬಾಂಗ್ಲಾದೇಶ ಮೂಲದ ಪೊರಾಗ್ ಸರ್ಕೆರ್ ಎಂಬ ಹವ್ಯಾಸಿ ಛಾಯಾಗ್ರಾಹಕ ತೆಗೆದ ಚಿತ್ರ ಇದಾಗಿದೆ. ಐಸಿಸಿ ಟ್ವೀಟ್​ಗೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಅದ್ಬುತ ಸ್ಥಳ ಎಲ್ಲಿದೆ ಎಂದು ದೇಶ, ವಿದೇಶದ ಜನ ಕೇಳಿದ್ದಾರೆ. ವಿಶ್ವದಾದ್ಯಂತ ಕರೊನಾ ಅಟ್ಟಹಾಸ ಮೆರೆಯುತ್ತಿರುವ ಕಾರಣ ಎಲ್ಲ ಕ್ರಿಕೆಟ್ ಟೂರ್ನಿಗಳು ರದ್ದಾಗಿವೆ. ಕ್ರಿಕೆಟ್ ಪ್ರೇಮಿಗಳು ಇದರಿಂದ ಬೇಸರಗೊಂಡಿದ್ದಾರೆ. ಐಸಿಸಿ ವಿಶ್ವದ ವಿವಿಧೆಡೆ ಕ್ರಿಕೆಟ್ ಆಟದ ಫೋಟೋಗಳನ್ನು ಅಪ್​ಲೋಡ್ ಮಾಡಿ ಕ್ರಿಕೆಟ್ ಪ್ರೇಮಿಗಳನ್ನು ಹುರಿದುಂಬಿಸುತ್ತಿದೆ. ಐಸಿಸಿ ಟ್ವೀಟ್ ಬಗ್ಗೆ ಪೊರಾಗ್ ಸರ್ಕೆರ್ ತಮ್ಮ ಫೇಸ್​ಬುಕ್ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ. ಐಸಿಸಿಯ ಈ ಟ್ವೀಟ್ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಾಸಕಿ ರೂಪಾಲಿ ನಾಯ್ಕ ಸಹ ತಮ್ಮ ಜಾಲ ತಾಣ ಖಾತೆಗಳಲ್ಲಿ ಹೆಮ್ಮೆಯ ವಿಷಯ ಎಂದು ಬರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts