More

    ಐದು ಎಕರೆ ಉಳ್ಳಾಗಡ್ಡಿ ಬೆಳೆ ನಾಶ

    ನರಗುಂದ: ಬೆಳೆಗೆ ಯೋಗ್ಯ ಬೆಲೆ ಸಿಗದ ಕಾರಣ ಅಸಮಾಧಾನಗೊಂಡ ತಾಲೂಕಿನ ರಡ್ಡೇರನಾಗನೂರ ಗ್ರಾಮದ ರೈತನೊಬ್ಬ ಐದು ಎಕರೆಯಲ್ಲಿ ಬೆಳೆಯಲಾದ ಉಳ್ಳಾಗಡ್ಡಿಯನ್ನು ಸಂಪೂರ್ಣ ನಾಶ ಪಡಿಸಿದ್ದಾರೆ.

    ಎಪಿಎಂಸಿ ಸದಸ್ಯ ವೆಂಕನಗೌಡ ಪಾಟೀಲ ಎಂಬುವರು ತಮ್ಮ 5 ಎಕರೆ ಜಮೀನಿನಲ್ಲಿ ಉಳ್ಳಾಗಡ್ಡಿ ಬೆಳೆದಿದ್ದರು. ಬಿತ್ತನೆ, ಕೂಲಿ ಕಾರ್ವಿುಕರ ಖರ್ಚು, ಎಡೆ ಹೊಡೆಯುವುದು ಸೇರಿ ಸುಮಾರು 1 ಲಕ್ಷ 80 ಸಾವಿರ ರೂ. ಖರ್ಚು ಮಾಡಿದ್ದಾರೆ. ಬೆಳೆಯೂ ಚೆನ್ನಾಗಿ ಬಂದಿದೆ. ಆದರೆ, ಲಾಕ್​ಡೌನ್​ನಿಂದಾಗಿ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲ. ಹೀಗಾಗಿ ಸುಮಾರು ಒಂದು ಟನ್ ಉಳ್ಳಾಗಡ್ಡಿ ಬೆಳೆಯನ್ನು ಟ್ರ್ಯಾಕ್ಟರ್​ನಿಂದ ಹರಗಿ ನಾಶಪಡಿಸಿದ್ದಾರೆ.

    ಸರ್ಕಾರ ತರಕಾರಿ ಬೆಳೆದ ರೈತರಿಗೆ 15 ಸಾವಿರ ರೂಪಾಯಿ ಪರಿಹಾರ ಘೊಷಿಸಿದೆ. ಆದರೆ, ಹಣ ಇನ್ನೂ ರೈತರ ಖಾತೆಗೆ ಜಮೆಯಾಗಿಲ್ಲ. ಪರಿಹಾರವೂ ಇಲ್ಲ. ಬೆಳೆದಿರುವ ಬೆಳೆಗಳಿಗೆ ಸೂಕ್ತ ಬೆಲೆಯೂ ಸಿಗುತ್ತಿಲ್ಲ. ಇದರಿಂದ ಕೆಲ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಸರ್ಕಾರ ಪ್ರತಿ ಹೆಕ್ಟೇರ್ ತರಕಾರಿ ಬೆಳೆಗೆ 15 ಸಾವಿರ ರೂ.ಪರಿಹಾರ ನೀಡುವುದಾಗಿ ಘೊಷಿಸಿದೆ. ಆದರೆ, ರೈತರಿಂದ ಅರ್ಜಿ ಸ್ವೀಕರಿಸುವಂತೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಇದರಿಂದಾಗಿ ಪರಿಹಾರ ವಿತರಣೆ ಕಾರ್ಯ ಸ್ವಲ್ಪ ವಿಳಂಬವಾಗಿದ್ದು, ರೈತರು ತಾಳ್ಮೆಯಿಂದ ಇರಬೇಕು. ಸರ್ಕಾರ ಪರಿಹಾರದ ಹಣ ಬಿಡುಗಡೆ ಮಾಡಿದ ತಕ್ಷಣವೇ ತರಕಾರಿ ಬೆಳೆದಿರುವ ಎಲ್ಲ ರೈತರಿಗೂ ನೀಡಲಾಗುತ್ತದೆ.
    | ಸಂಜೀವ ಚವ್ಹಾಣ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts