More

    ಐಎಂಸಿಟಿಯಿಂದ ಸ್ಥಳ ಪರಿಶೀಲನೆ

    ಭಟ್ಕಳ: ಆಗಸ್ಟ್​ನಲ್ಲಿ ಸುರಿದ ಭಾರಿ ಮಳೆಗೆ ತಾಲೂಕಿನಲ್ಲಿ ಸಾಕಷ್ಟು ಹಾನಿ ಸಂಭವಿಸಿತ್ತು. ಈ ಹಾನಿ ಸಂಬಂಧ ಕೇಂದ್ರಕ್ಕೆ ನೆರವು ಕೋರಿ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಐಎಂಸಿಟಿ (ಇಂಟರ್ ಮಿನಿಸ್ಟೀರಿಯಲ್ ಸೆಂಟ್ರಲ್ ಟೀಮ್ ಅಧಿಕಾರಿಗಳ ಕೇಂದ್ರ ತಂಡ ತಾಲೂಕಿನ ವಿವಿಧ ಭಾಗಗಳಲ್ಲಿ ಸಂಚರಿಸಿ ಗುರುವಾರ ಪರಿಶೀಲನೆ ನಡೆಸಿತು.

    ಕೇಂದ್ರ ಗೃಹ ವ್ಯವಹಾರಗಳ ಜಂಟಿ ಕಾರ್ಯದರ್ಶಿ ಆಶೀಷ್ ನೇತೃತ್ವದಲ್ಲಿ ಅಧಿಕಾರಿಗಳಾದ ಮಹೇಶ, ಭವ್ಯಾ ಅವರುಳ್ಳ ತಂಡವು ಹಾನಿಯಾಗಿರುವ ರಸ್ತೆ, ಕೃಷಿ ಕ್ಷೇತ್ರ, ತೋಟ, ಬಂದರು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿತು.

    ಐಎಂಸಿಟಿ ಭೇಟಿ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಕರ್ನಾಟಕ ವಿಪತ್ತು ನಿರ್ವಹಣೆ ಪ್ರಾಧಿಕಾರದ ಆಯುಕ್ತ ಮನೋಜ ರಂಜನ್, ಭಟ್ಕಳದ ಭೂ ಕುಸಿತದ ಸ್ಥಳಕ್ಕೆ ಕೇಂದ್ರ ನೆರೆ ಹಾನಿ ಅಧ್ಯಯನ ತಂಡದ ಅಧಿಕಾರಿಗಳು ಭೇಟಿ ನೀಡಿದ್ದು, ಮಾಹಿತಿ ಸಂಗ್ರಹಿಸಿದ್ದಾರೆ. ನಾವು ನೀಡಿರುವ ಹಾನಿ ವಿವರವನ್ನು ಅವರು ಪರೀಶೀಲನೆ ನಡೆಸಿ ಈ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಎನ್​ಡಿ ಆರ್​ಎಫ್ ಅನುದಾನ ಬಿಡುಗಡೆಗೆ ಶಿಫಾರಸು ಮಾಲಿದ್ದಾರೆ ಎಂದರು.

    ಭೂ ಕುಸಿತ ಸ್ಥಳದಲ್ಲಿ ಪ್ರತ್ಯೇಕ ಅಧ್ಯಯನ ನಡೆಸಬೇಕು ಎಮದು ಗಣಿ, ಭೂ ವಿಜ್ಞಾನ ಮತ್ತು ಅಮೃತ ಯುನಿವರ್ಸಿಟಿಗೆ ಮುಖ್ಯಮಂತ್ರಿಯವರು ಪತ್ರ ಬರೆದಿದ್ದಾರೆ. ಭೂ ಕುಸಿತ ಮುನ್ನೆಚ್ಚರಿಕೆ ಸೆನ್ಸರ್​ಗಳನ್ನು ಅಳವಡಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

    ಜಿಲ್ಲಾಧಿಕಾರಿ ಮುಲ್ಲೈಮುಗಿಲನ್, ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಎಸ್., ತಹಸೀಲ್ದಾರ್ ಸುಮಂತ ಬಿ.ಇ., ಇಒ ಪ್ರಭಾಕರ ಚಿಕ್ಕನಮನೆ, ಮುಂಡಳ್ಳಿ ಪಂಚಾಯಿತಿ ಅಧ್ಯಕ್ಷ ಶೇಷು ನಾಯ್ಕ, ಇತರರು ಇದ್ದರು.

    ಮೂರು ತಂಡಗಳಾಗಿ ಪರಿಶೀಲನೆ: ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ರಾಜ್ಯದಲ್ಲಿ ಸುಮಾರು 7600 ಕೋಟಿ ರೂ.ಗಳಷ್ಟು ಆಸ್ತಿ ಹಾನಿ ಸಂಭವಿಸಿತ್ತು. ಇಲ್ಲಿನ ಹಾನಿಯ ಕುರಿತು ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹಾನಿ ಅಧ್ಯಯನಕ್ಕೆ 7 ಜನರ ತಂಡ ರಾಜ್ಯಕ್ಕೆ ಆಗಮಿಸಿದ್ದು, 3 ಪ್ರತ್ಯೇಕ ತಂಡಗಳಲ್ಲಿ ಮಂಗಳೂರು, ಉಡುಪಿ, ಉತ್ತರ ಕನ್ನಡದಲ್ಲಿ ನೆರೆ ಹಾನಿ ಪರಿಶೀಲನೆ ನಡೆಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts