More

    ಎಸ್.ಎಸ್.ಎಲ್.ಸಿ ಪರೀಕ್ಷೆ ಸಿಇಒ ಕುರೇರ ಭೇಟಿ

    ಬಾಗಲಕೋಟೆ: ಜಿಲ್ಲೆಯಲ್ಲಿ ನಡೆಯುತ್ತಿರುವ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಿಗೆ ಜಿ.ಪಂ ಸಿಇಓ ಶಶಿಧರ ಕುರೇರ ಬುಧವಾರ ಭೇಟಿ ನೀಡಿ ಪರೀಕ್ಷೆ ಸುಸೂತ್ರವಾಗಿ ನಡೆದ ಬಗ್ಗೆ ಪರಿಶೀಲನೆ ನಡೆಸಿದರು. ನಗರದ ಅಂಜುಮನ್ ಬಾಲಕರ ಉರ್ದು ಪ್ರೌಢಶಾಲೆ ಹಾಗೂ ಸಮೃದ್ದಿ ಗುರುಕುಲ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಬುಧವಾರ ನಡೆದ ಸಮಾಜ ವಿಜ್ಞಾನ ವಿಷಯ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ನೊಂದಣಿಯಾದ ಒಟ್ಟು ೩೧೨೨೯ ವಿದ್ಯಾರ್ಥಿಗಳ ಪೈಕಿ ೩೦೯೮೧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ೨೪೮ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಬಾದಾಮಿ ತಾಲೂಕಿನಲ್ಲಿ ಪರೀಕ್ಷೆಗೆ ನೊಂದಣಿಯಾದ ೫೩೨೭ ಪೈಕಿ ೫೨೯೨ ವಿದ್ಯಾರ್ಥಿಗಳು ಹಾಜರಾಗಿ ೩೫ ಜನ ಗೈರು ಹಾಜರಾಗಿದ್ದಾರೆ. ಬಾಗಲಕೋಟೆ ತಾಲೂಕಿನಲ್ಲಿ ನೊಂದಾಯಿಸಿದ ೪೬೬೮ ಪೈಕಿ ೪೬೩೪ ಜನ ಹಾಜರಿದ್ದು, ೩೪ ಜನ ಗೈರು ಹಾಜರಾಗಿದ್ದಾರೆ.

    ಬೀಳಗಿ ತಾಲೂಕಿನಲ್ಲಿ ನೊಂದಣಿಯಾದ ೨೮೪೦ ವಿದ್ಯಾರ್ಥಿಗಳ ಪೈಕಿ ೨೮೧೬ ಜನ ಹಾಜರಾಗಿ ೨೪ ಜನ ಗೈರು ಹಾಜರಾಗಿದ್ದಾರೆ. ಹುನಗುಂದ ತಾಲೂಕಿನಲ್ಲಿ ೫೧೪೨ ಪೈಕಿ ೫೧೦೩ ಜನ ಹಾಜರಾಗಿ ೩೯ ಜನ ಗೈರು ಹಾಜರಾಗಿದ್ದಾರೆ. ಜಮಖಂಡಿ ತಾಲೂಕಿನಲ್ಲಿ ೮೦೮೨ ಪೈಕಿ ೮೦೧೪ ಜನ ಗೈರು ಹಾಜರಾಗಿ ೬೮ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಮುಧೋಳ ತಾಲೂಕಿನಲ್ಲಿ ೫೧೭೦ ವಿದ್ಯಾರ್ಥಿಗಳ ಪೈಕಿ ೫೧೨೨ ಹಾಜರಾಗಿ ೬೮ ಜನ ಗೈರು ಹಾಜರಾಗಿರುತ್ತಾರೆ. ಈ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿ ಡಿಬಾರ್ ಆಗಿರುವದಿಲ್ಲವೆಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts