More

    ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ ಪರಿಶೀಲಿಸಿದ ಬಿಇಒ

    ಹಾವೇರಿ: ಕರೊನಾ ಮಹಾಮಾರಿಯ ಸಮಯದಲ್ಲಿ ನಡೆಯುತ್ತಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಡೆಸಲು ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಬಸವೇಶ್ವರ ನಗರದ ಬಿಆರ್​ಸಿ ಕಚೇರಿಯಲ್ಲಿ ಸ್ಥಾಪಿಸಿರುವ ಪರೀಕ್ಷಾ ಸಹಾಯವಾಣಿ ಹಾಗೂ ಪರೀಕ್ಷಾ ಕೇಂದ್ರಗಳ ಕಂಟ್ರೋಲ್ ರೂಮ್ಂದ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಬಿಇಒ ಎಂ.ಎಚ್. ಪಾಟೀಲ ಮಂಗಳವಾರ ಕರೆ ಮಾಡಿ ಮಾಹಿತಿ ಪಡೆದರು.

    ಕಂಟ್ರೋಲ್ ರೂಮ್ೆ ಚಾಲನೆ ನೀಡಿದ ಅವರು, ಪರೀಕ್ಷಾ ಕೇಂದ್ರದಲ್ಲಿ ಪೂರ್ಣ ಪ್ರಮಾಣದ ಸ್ಯಾನಿಟೈಸೇಶನ್ ಮಾಡಲಾಗಿದೆಯೇ, ಎಸ್​ಒಪಿ ಪ್ರಕಾರ ಡೆಸ್ಕ್ ಅಳವಡಿಕೆಯಾಗಿದೆಯೇ, ಪರೀಕ್ಷಾ ದಿನ ಬೆಳಗ್ಗೆಯೇ ಬರಲು ಆರೋಗ್ಯ ಇಲಾಖೆಯವರು ಪಟ್ಟಿ ಸಿದ್ಧಪಡಿಸಿಕೊಂಡಿದ್ದೀರಾ. ಪರೀಕ್ಷೆಗೆ ಎಲ್ಲ ಸಿದ್ಧತೆಗಳು ಆಗಿವೆಯೇ ಎಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಪ್ರಶ್ನಿಸಿದರು. ಅಲ್ಲದೆ, ಏನಾದರೂ ಸಮಸ್ಯೆಯಿದ್ದರೆ ಈಗಲೇ ಗಮನಕ್ಕೆ ತನ್ನಿ ಎಂದು ಸೂಚನೆ ನೀಡಿದರು.

    ಪರೀಕ್ಷಾ ಕೇಂದ್ರಗಳಲ್ಲಿ ಎಸ್​ಒಪಿ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲು 26 ಸೂಚನೆ ನೀಡಿದ್ದು, ಅವೆಲ್ಲವುಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಕರೆ ಮಾಡಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಮಾಡದೇ ಇದ್ದರೆ ಕೂಡಲೆ ಮಾಡುವಂತೆ, ಅಗತ್ಯ ಬಿದ್ದರೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಸರಿಪಡಿಸುವ ಕೆಲಸ ಸಹಾಯವಾಣಿ ಕಂಟ್ರೋಲ್ ರೂಮ್ಂದ ಆಗುತ್ತದೆ ಎಂದರು.

    ಎಲ್ಲ 13 ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ನಿತ್ಯ ಬೆಳಗ್ಗೆ, ಸಂಜೆ ಕರೆ ಮಾಡಿ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುವ ಕುರಿತು ಮಾಹಿತಿ ನೀಡಲಿದೆ. ಇದಕ್ಕಾಗಿ ಮುಖ್ಯ ಶಿಕ್ಷಕರಾದ ಬಸವರಾಜ ಮಮದಾಪುರ ಹಾಗೂ ಶಾಯಿದಾ ನಾಶಿಪುಡಿ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ಹಾಗೂ ಬಿಆರ್​ಪಿಗಳಾದ ಎಸ್.ಎಸ್. ಕೋತಂಬ್ರಿ, ಕೆ.ಕೆ. ಬಳ್ಳಾರಿ, ಶ್ರೀನಿವಾಸ, ಸಿಆರ್​ಪಿ ಶ್ರೀಕಾಂತ ದೊಡ್ಡಕುರುಬರ, ಟಿಇಸಿಒ ಮಂಜುನಾಥ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

    ಸಹಾಯವಾಣಿ ಸಂಖ್ಯೆಗಳು: ಬಸವರಾಜ ಮಮದಾಪುರ 8310263201, ಶಾಯಿದಾ ನಾಶಿಪುಡಿ 7892631821, ಎಸ್.ಎಸ್. ಕೋತಂಬ್ರಿ 9448961570, ಕೆ.ಕೆ. ಬಳ್ಳಾರಿ 9148159576, ಶ್ರೀಕಾಂತ ದೊಡ್ಡಕುರುಬರ 9964405988, ಶ್ರೀನಿವಾಸ 8296358662, ಮಂಜುನಾಥ 9880699555 ಇವರಿಗೆ ಕರೆ ಮಾಡಿ ಪರಿಹರಿಸಿಕೊಳ್ಳಬಹುದು ಎಂದು ಬಿಇಒ ಎಂ.ಎಚ್. ಪಾಟೀಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts