More

    ಎಸಿಬಿ ಬಲೆಗೆ ತಹಸೀಲ್ದಾರ್ ಕಚೇರಿ ಟೈಪಿಸ್ಟ್

    ಮುಂಡರಗಿ: ಆರ್​ಟಿಸಿ 11 ಕಾಲಂನಲ್ಲಿ ಹೆಸರು ಕಡಿಮೆ ಮಾಡಲು 5 ಸಾವಿರ ರೂ. ಲಂಚ ಪಡೆಯುತ್ತಿದ್ದ ತಹಸೀಲ್ದಾರ್ ಕಚೇರಿಯ ಟೈಪಿಸ್ಟ್ ಮಾರುತಿ ಉಪ್ಪಾರಟ್ಟಿ ಅವರು ಬುಧವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.
    ಎಸ್ಪಿ ಬಿ.ಎಸ್. ನೇಮಗೌಡ ಮಾರ್ಗದರ್ಶನದ ಡಿವೈಎಸ್ಪಿ ಎಂ.ವಿ. ಮಲ್ಲಾಪೂರ ನೇತೃತ್ವದ ತಂಡ ದಾಳಿ ನಡೆಸಿ, ಬಂಧಿಸಿದೆ.
    ತಾಲೂಕಿನ ಗಂಗಾಪೂರ ಗ್ರಾಮದ ಕರಿಯಪ್ಪ ಬಂಗಿ ಅವರು ತಮ್ಮ ಜಮೀನಿನ ಆರ್​ಟಿಸಿ 11 ಕಾಲಂನಲ್ಲಿ ಹೆಸರು ಕಡಿಮೆ ಮಾಡುವಂತೆ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಹೆಸರು ಕಡಿಮೆ ಮಾಡುವುದಕ್ಕೆ ತಹಸೀಲ್ದಾರ್ ಕಚೇರಿಯ ಟೈಪಿಸ್ಟ್ ಮಾರುತಿ ಉಪ್ಪಾರಟ್ಟಿ ಅವರು 11ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. 11 ಸಾವಿರ ರೂ. ಪೈಕಿ ಫೆ. 1ರಂದು 6 ಸಾವಿರ ರೂ. ಪಡೆದುಕೊಂಡಿದ್ದರು. ಬುಧವಾರ ಮತ್ತೆ 5 ಸಾವಿರ ರೂ. ಪಡೆಯುವ ಸಂದರ್ಭದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ನಂತರ ಎಸಿಬಿ ಅಧಿಕಾರಿಗಳು ತಹಸೀಲ್ದಾರ್ ಕಚೇರಿಯಲ್ಲಿ ಈ ಕುರಿತು ಕಡತಗಳ ಪರಿಶೀಲನೆ ನಡೆಸಿದರು.
    ಎಸಿಬಿ ಸಿಪಿಐ ವಿ.ಎಂ. ಹಳ್ಳಿ, ಆರ್.ಎಫ್. ದೇಸಾಯಿ, ಎಸಿಬಿ ಸಿಬ್ಬಂದಿ ಎಂ.ಎಂ. ಅಯ್ಯನಗೌಡ, ದೀಪಾಲಿ, ವೀರೇಶ ಜೋಳದ, ವೀರೇಶ ಬಿಸನಳ್ಳಿ, ಎಸ್.ಬಿ. ಮುಲ್ಲಾ, ಎಂ.ಜಿ. ಮುಳಗುಂದ, ಎನ್.ಎಸ್. ತಾಯಣ್ಣವರ, ಐ.ಸಿ. ಜಾಲಿಹಾಲ, ತಾರಪ್ಪ, ನಾರಾಯಣರಡ್ಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts