More

    ಎಲ್ಲ ಸದಸ್ಯರು ನಗರಾಭಿವೃದ್ಧಿಗೆ ಶ್ರಮಿಸಿ

    ಕಾರವಾರ: ನಗರದ ಸಂಪೂರ್ಣ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಎಲ್ಲ ಸದಸ್ಯರು ಒಂದಾಗಿ ಕಾರ್ಯ ನಿರ್ವಹಿಸಿ ಕಾರವಾರವನ್ನು ಚೆಂದಗಾಣಿಸ ಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

    ಸೋಮವಾರ ಆಯೋಜನೆಯಾಗಿದ್ದ ಇಲ್ಲಿನ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

    ಬಿಣಗಾ, ಕೋಡಿಬಾಗ ಹಾಗೂ ಬಾಂಡಿಶಿಟ್ಟಾದಲ್ಲಿ ಸಣ್ಣ ತರಕಾರಿ ಮಾರುಕಟ್ಟೆ ನಿರ್ವಣ, ಕೆಎಚ್​ಬಿ ಸೇರಿ ವಿವಿಧೆಡೆ ಇರುವ ಸಣ್ಣ ಕ್ರಿಡಾಂಗಣಗಳ ಅಭಿವೃದ್ಧಿ, ರ್ಪಾಂಗ್ ಹಾಗೂ ಏಕಮುಖ ಸಂಚಾರ ವ್ಯವಸ್ಥೆ ಹಾಗೂ ಕೋಣೆನಾಲ ತ್ಯಾಜ್ಯ ನೀರು ಶುದ್ಧೀಕರಣಕ್ಕೆ ಕ್ರಮ ವಹಿಸಬೇಕಿದೆ ಎಂದು ಸಲಹೆ ನೀಡಿದರು.

    ಒಳಚರಂಡಿ ಸಮಸ್ಯೆ: ನಗರದ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಸಂದೀಪ ತಳೇಕರ್ ಪ್ರಸ್ತಾಪಿಸಿದರು. ಮೊದಲು ಕಾಮಗಾರಿ ಸಮರ್ಪಕವಾಗಿ ಆಗಿಲ್ಲ. ಆದರೆ, ಈಗ ಎರಡನೇ ಹಂತದ ಯುಜಿಡಿ ಕಾಮಗಾರಿಗೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 300 ಕೋಟಿ ರೂ.ಗಳ ಯೋಜನೆ ರೂಪಿಸಿದೆ. ಅದರಲ್ಲಿಯೇ ಹಳೆಯ ಯುಜಿಡಿ ರಿಪೇರಿಗೂ ಕ್ರಮ ವಹಿಸಲಾಗುವುದು ಎಂದು ಪೌರಾಯುಕ್ತ ಆರ್.ಪಿ. ನಾಯ್ಕ ಹೇಳಿದರು.

    ನಗರಸಭೆಯ ತ್ಯಾಜ್ಯದಿಂದ ಗೊಬ್ಬರ ಮಾಡಿ ಮಾರಾಟ ಮಾಡಲಾಗುತ್ತಿದೆ. ನಗರಸಭೆಯ ಎದುರು ಅಂಗಡಿ ತೆರೆದಿದ್ದು, ಪ್ರತಿ ಕೆಜಿಗೆ 5 ರೂ.ನಂತೆ ಸಾವಯವ ಗೊಬ್ಬರ ಮಾರಾಟವಾಗಲಿದೆ. ದ್ರವ ತ್ಯಾಜ್ಯ ಶುದ್ಧೀಕರಿಸಿ ಉದ್ಯಾನಗಳಿಗೆ ನೀರುಣಿಸಲು ಯೋಜಿಸಲಾಗಿದೆ. ಪ್ಲಾಸ್ಟಿಕ್ ಸೇರಿ ಇತರ ತ್ಯಾಜ್ಯ ಮಾರಾಟ ಮಾಡಿ ಹಣ ಗಳಿಸಲಾಗುತ್ತಿದೆ ಎಂದು ಆರ್.ಪಿ. ನಾಯ್ಕ ತಿಳಿಸಿದರು. ಉಪಾಧ್ಯಕ್ಷ ಪ್ರಕಾಶ ನಾಯ್ಕ ವೇದಿಕೆಯಲ್ಲಿದ್ದರು.

    ವಿಡಿಯೋ ಬಾಂಬ್: ನಗರದಲ್ಲಿ ಈ ಹಿಂದೆ ಇದ್ದ ಟ್ರ್ಯಾಕ್ಟರ್ ಒಂದು ನಾಪತ್ತೆಯಾಗಿದೆ. ಅದು ನಗರಸಭೆಗೆ ಸೇರಿದ ಒಬ್ಬ ವ್ಯಕ್ತಿಯ ಮನೆಯ ಕಾಂಪೌಂಡ್ ಒಳಗೆ ಇದ್ದ ವಿಡಿಯೋ ನನ್ನ ಬಳಿ ಇದೆ ಎಂದು ಗಣಪತಿ ನಾಯ್ಕ ಸಭೆಯಲ್ಲಿ ವಿಡಿಯೋ ಬಾಂಬ್ ಎಸೆದರು. ಅದಕ್ಕೆ ಪ್ರತಿಕ್ರಿಯಿಸಿದ ಆರ್.ಪಿ. ನಾಯ್ಕ ಟ್ರ್ಯಾಕ್ಟರ್ ಕತೆ ಏನಾಗಿದೆ ಎಂಬ ಬಗ್ಗೆ ಮುಂದಿನ ಸಭೆಯಲ್ಲಿ ಮಾಹಿತಿ ನೀಡುವುದಾಗಿ ತಿಳಿಸಿದರು.

    ಸಂಧ್ಯಾ ಬಾಡಕರ್ ಸ್ಥಾಯಿ ಸಮಿತಿ ಅಧ್ಯಕ್ಷೆ : ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ಜೆಡಿಎಸ್ ಬಿಜೆಪಿಗೆ ಬೇಷರತ್ ಬೆಂಬಲ ನೀಡಿದೆ. ಇದರಿಂದ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಆ ಪಕ್ಷಕ್ಕೆ ನೀಡುವ ಮೂಲಕ ಬಿಜೆಪಿ ಮಿತ್ರ ಪಕ್ಷದ ಋಣ ತೀರಿಸಿದೆ. ಸೋಮವಾರ ನಡೆದ ಸಭೆಯಲ್ಲಿ ಸಂಧ್ಯಾ ಸಂಜಯ ಬಾಡಕರ್ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

    ರ್ಚಚಿತ ವಿಷಯಗಳು: ಟ್ಯಾಗೋರ್ ಕಡಲ ತೀರದ ಪಕ್ಕ ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ಕಾಂಪೌಂಡ್ ನಿರ್ಮಾಣ ಕಾಮಗಾರಿ ಕೈಗೊಂಡಿದ್ದು, ಅದನ್ನು ಸ್ಥಗಿತಗೊಳಿಸುವಂತೆ ಶಾಸಕಿ ಸೂಚನೆ.

    ಸಭೆಯ ಅನುಮೋದಿತ ಯೋಜನೆ ಬಿಟ್ಟು ಮೀನು ಮಾರುಕಟ್ಟೆ ಕಟ್ಟಡ ನಿರ್ವಿುಸಿದ ನಗರಸಭೆ ಹಿಂದಿನ ಇಂಜಿನಿಯರ್ ವಿರುದ್ಧ ಸರ್ಕಾರಕ್ಕೆ ದೂರು ನೀಡಲು ನಿರ್ಧಾರ.

    ಪೌರ ಕಾರ್ವಿುಕರ ಗೃಹ ಭಾಗ್ಯದಡಿ ಪಂರ್ಚಷಿವಾಡದಲ್ಲಿ ನಿರ್ಮಾಣ ಮಾಡಿದ ಮನೆಗಳಿಗೆ ಯೋಜನೆಗಿಂತ 70 ಲಕ್ಷ ರೂ. ಹೆಚ್ಚು ಖರ್ಚಾದ ಬಗ್ಗೆ ಮಕ್ಬುಲ್ ಶೇಖ್ ಆಕ್ಷೇಪ.

    ಭಾನುವಾರದ ಸಂತೆ ಹಾಗೂ ಇತರ ದಿನಗಳ ಬೀದಿ ವ್ಯಾಪಾರಿಗಳ ಕರ ವಸೂಲಿಗೆ ತಡೆ. ನಗರಸಭೆಗೆ ಆದಾಯ ನಷ್ಟ ಕ್ರಮ ವಹಿಸಲು ಸದಸ್ಯರ ಒತ್ತಾಯ.

    ಅನಧಿಕೃತವಾದ 500 ಕಟ್ಟಡಗಳಿಗೆ ನಗರಸಭೆ ನೋಟಿಸ್ ನೀಡಿದೆ. ಆದರೆ, ಅಪಾರ್ಟ್​ವೆುಂಟ್​ಗಳಿಗೆ ನೀಡದ ಬಗ್ಗೆ ಸಂದೀಪ ತಳೇಕರ್ ಆಕ್ಷೇಪ.

    ವೈಯಕ್ತಿಕ ಆಸಕ್ತಿ ಇಲ್ಲದೆ, ಎಲ್ಲ ಸದಸ್ಯರನ್ನೂ ಸಮಾನವಾಗಿ ಕಂಡು ಇಡೀ ನಗರದ ಅಭಿವೃದ್ಧಿಗೆ ಶ್ರಮಿಸಲಿದ್ದೇನೆ. ಕೊಠಡಿಯ ಎದುರು ಸಲಹಾ ಪೆಟ್ಟಿಗೆ ಇಡಲಿದ್ದೇನೆ. ಸಾರ್ವಜನಿಕರಿಂದ ಅಧಿಕಾರಿಗಳ ವಿರುದ್ಧ ದುರ್ವರ್ತನೆಯ ದೂರು ಬಂದರೆ, ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ವಹಿಸಲಿದ್ದೇನೆ. | ಡಾ.ನಿತಿನ್ ಪಿಕಳೆ ಕಾರವಾರ ನಗರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts