More

    ಎಲ್ಲ ವಿಧಾನಸಭೆ ಕ್ಷೇತ್ರದಲ್ಲಿ ಕೆಆರ್ ಎಸ್ ಸ್ಪರ್ಧೆ

    ದಾವಣಗೆರೆ:
    ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಎದುರಿಸಲಿದೆ ಎಂದು ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ತಿಳಿಸಿದರು.
    60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ನಡೆದಿದೆ.‌ ಮುಂದಿನ ಆರು ತಿಂಗಳಲ್ಲಿ 150 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಕನಿಷ್ಟ 100 ರೂ. ನೀಡಿ ಸ್ವಯಂಪ್ರೇರಿತವಾಗಿ ಸದಸ್ಯತ್ವ ಪಡೆದಿರುವ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿದ್ದಾರೆ. ಪಕ್ಷವು ಹೆಚ್ಚು ಸಂಘಟನಾತ್ಮಕವಾಗಿ ಬೆಳೆಯುತ್ತಿದೆ ಎಂದರು.
    ಕೆಆರ್ ಎಸ್, ಜೆಡಿಯು ಮತ್ತು ಡಬ್ಲ್ಯೂಪಿಐ ಮೂರು ಪಕ್ಷಗಳು ಒಕ್ಕೂಟವಾಗಿ ಬಿಬಿಎಂಪಿ ಚುನಾವಣೆಗೆ ಎದುರಿಸುತ್ತಿದ್ದೇವೆ. ಹಾಗೆಯೇ ಆಮ್ ಆದ್ಮಿಪಕ್ಷ, ಸ್ವರಾಜ್ ಇಂಡಿಯಾ, ಉತ್ತಮ ಪ್ರಜಾಕೀಯ ಪಕ್ಷ, ನಾಲ್ಕೈದು ಕಮ್ಯುನಿಸ್ಟ್ ಪಕ್ಷಗಳು ಸೇರಿ ಸಮಾನ ಮನಸ್ಕ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುವ ಯೋಜನೆ ಪ್ರಗತಿಯಲ್ಲಿದೆ ಎಂದು ಹೇಳಿದರು.
    ರಾಜ್ಯದಲ್ಲಿರುವ ದುರಾಡಳಿತ ಮತ್ತು ಮೂರೂ ಪ್ರಮುಖ ಪಕ್ಷಗಳ ಭ್ರಷ್ಠ ರಾಜಕಾರಣವನ್ನು ಹೋಗಲಾಡಿಸಿ, ಜನಜಾಗೃತಿ ಮೂಡಿಸಲು ಮೊದಲ ಹಂತದಲ್ಲಿ 28 ದಿನಗಳ ಕಾಲ 11ಜಿಲ್ಲೆಗಳಲ್ಲಿ ಕರ್ನಾಟಕ ಜನಚೈತನ್ಯ ಯಾತ್ರೆ ನಡೆಸಲಾಗಿ ತುಮಕೂರಿನಲ್ಲಿ ಸಮಾರೋಪ ಗೊಂಡಿತ್ತು.ಇದೀಗ ಚಿತ್ರದುರ್ಗದಿಂದ ಎರಡನೆ ಹಂತದ ಯಾತ್ರೆ ಆರಂಭವಾಗಿದ್ದು, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳನ್ನು ತಲುಪಲಾಗುವುದು. ಜು. 21 ರಂದು ನವಲಗುಂದ ಮತ್ತು ನರಗುಂದದಲ್ಲಿ ರೈತ ಹುತಾತ್ಮರ ಸ್ಮರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪಕ್ಷದ ರೈತ ಘಟಕದ ಪದಾಧಿಕಾರಿಗಳು ಹಾಗು ಸೈನಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷ ರಘು ಜಾಣಗೆರೆ, ಜಿಲ್ಲಾಧ್ಯಕ್ಷ ಮಂಜುನಾಥ ಹಳ್ಳಿಕೇರಿ, ಯುವ ಘಟಕ‌ ಅಧ್ಯಕ್ಷ ಡಿ.ಜಿ. ಮಾಲತೇಶ್ ಇದ್ದರು.
    ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts