More

    ಎಲ್ಲ ರೋಗಗಳ ವಾಹಕ ಒತ್ತಡ

    ಹುಬ್ಬಳ್ಳಿ: ಇಲ್ಲಿನ ಅಪೂರ್ವ ನಗರದ ಅಪೂರ್ವ ಗಾರ್ಡನ್​ನಲ್ಲಿ ಕಳೆದ ಮೂರು ದಿನಗಳವರೆಗೆ ಏರ್ಪಡಿಸಿದ್ದ ಹಾರ್ಟ್​ಫುಲ್​ನೆಸ್ ಧ್ಯಾನೋತ್ಸವ ಸಂಪನ್ನಗೊಂಡಿತು.

    ಸತ್ವಂ ಫಿಜಿಯೋಥರಪಿ ಸೆಂಟರ್​ನ ದೇಹದಾರ್ಢ್ಯ ಚಿಕಿತ್ಸಾ ತಜ್ಞೆ ಡಾ. ವಿಜೇತಾ ಹಳೇಪೇಟ್ ಮಾತನಾಡಿ, ಇಂದಿನ ದಿನಗಳಲ್ಲಿ ಒತ್ತಡವೆಂಬುದು ವ್ಯಕ್ತಿಯ ಬದುಕನ್ನು ಆವರಿಸಿ, ಎಲ್ಲ ರೋಗಗಳ ವಾಹಕವೆನಿಸಿದೆ. ಒತ್ತಡದಿಂದ ಮುಕ್ತರಾಗಲು ಆರೋಗ್ಯ ಪೂರ್ಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಅಗತ್ಯ ಎಂದು ಸಲಹೆ ಮಾಡಿದರು.

    ಬೆಂಗಳೂರಿನ ಕ್ರೆಸ್ಟ್ ಸಂಸ್ಥೆಯ ನಿರ್ದೇಶಕ ಡಾ. ಮೋಹನದಾಸ ಹೆಗಡೆ ಮಾತನಾಡಿ, ಆತ್ಮೋದ್ಧಾರ, ವ್ಯಕ್ತಿತ್ವ ವಿಕಸನ ಹಾಗೂ ಜೀವನ ಕ್ರಮದಲ್ಲಿ ಬದಲಾವಣೆ ತರುವಲ್ಲಿ ಪ್ರಾರ್ಥನೆ ಬಹು ಮುಖ್ಯಪಾತ್ರ ವಹಿಸುತ್ತದೆ. ಪ್ರಾರ್ಥನೆ ಹಾಗೂ ಧ್ಯಾನದ ವೇಳೆ ಪ್ರೀತಿ, ವಿಶ್ವಾಸ, ಭಕ್ತಿ ತುಂಬಿಕೊಂಡಿರಬೇಕು ಎಂದರು.

    ಹಾರ್ಟ್​ಫುಲ್​ನೆಸ್ ಧ್ಯಾನ ಸಂಸ್ಥೆಯ ಹುಬ್ಬಳ್ಳಿ ವಲಯದ ಸಂಚಾಲಕ ಅಜಿತ ಕಾಮತ್ ಮಾತನಾಡಿ, ಧ್ಯಾನವನ್ನು ನಿತ್ಯ ಮುಂದುವರಿಸುವ ಧ್ಯಾನಾಸಕ್ತರು ಅನುಸರಿಸಬೇಕಾದ ನಿತ್ಯ ಕ್ರಮದ ಬಗೆಗೆ ವಿವರಿಸಿದರು.

    ಸಂಸ್ಥೆಯ ಹುಬ್ಬಳ್ಳಿ ಕೇಂದ್ರದ ಸಂಚಾಲಕ ಡಾ.ಬಿ.ಆರ್. ಬಾರಕೋಲ್, ಧಾರವಾಡ ಕೇಂದ್ರದ ಸಂಚಾಲಕ ಶ್ರೀಧರ ಚಕ್ರವರ್ತಿ ಇತರರು ಉಪಸ್ಥಿತರಿದ್ದರು. ಸುನೀತಾ ಕುರ್ತಕೋಟಿ ನಿರೂಪಿಸಿದರು. ಪ್ರಶಿಕ್ಷಕ ರಾಜಶೇಖರ ನೂಲಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts