More

    ಎಲ್ಲರ ಬಾಯಿಗೆ ಬೀಗ ಹಾಕಿದ ಅಮಿತ್ ಷಾ

    ಹುಬ್ಬಳ್ಳಿ: ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಮಾಡಿದ ಅಮಿತ್ ಷಾ, ಪಕ್ಷದ ಧಾರವಾಡ, ಹಾವೇರಿ, ಗದಗ ಜಿಲ್ಲೆಯ ಪದಾಧಿಕಾರಿಗಳೊಂದಿಗೆ ರಾತ್ರಿಯ ಭೋಜನ ಸವಿದರು.

    ಡೆನಿಸನ್ಸ್ ಹೋಟೆಲ್​ನ ವಿಶಾಲ ಸಭಾಂಗಣದಲ್ಲಿ ಏರ್ಪಡಿಸಿದ್ದ ಔತಣಕೂಟಕ್ಕೆ ಮೊದಲು ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷವನ್ನು ಬೇರು ಮಟ್ಟದಿಂದ ಇನ್ನೂ ಸಶಕ್ತವಾಗಿ ಬಲಗೊಳಿಸಬೇಕು. ಕೇಂದ್ರ-ರಾಜ್ಯದ ಬಿಜೆಪಿ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ತೆಗೆದುಕೊಂಡ ಐತಿಹಾಸಿಕ ನಿರ್ಧಾರಗಳ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಿಕೊಡಬೇಕು. ಪಕ್ಷದ ಹಿರಿಯ ಮತ್ತು ಹಳೆಯ, ನಿಷ್ಠಾವಂತ ಕಾರ್ಯಕರ್ತರಿಗೆ ಗೌರವ ಕೊಡಬೇಕು ಎಂದು ಹೇಳಿದರು. ಪಕ್ಷಕ್ಕಾಗಿ ಹೆಚ್ಚು ಸಮಯ ಮೀಸಲಿಡುವಂತೆ ಸಲಹೆ ನೀಡಿದರು ಎಂದು ತಿಳಿದುಬಂದಿದೆ.

    ಪಕ್ಷದ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಮುರುಗೇಶ ನಿರಾಣಿ, ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಸಿ.ಎಂ. ನಿಂಬಣ್ಣವರ, ಅಮೃತ ದೇಸಾಯಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕರು, ಸ್ಥಳೀಯ ಸಂಸ್ಥೆಗಳ ಹಾಲಿ-ಮಾಜಿ ಸದಸ್ಯರು, ಇತರರು ಇದ್ದರು.

    ಬಾಯಿಗೆ ಬೀಗ: ಔತಣಕೂಟ ಮುಗಿದ ನಂತರ ಹೊರಗಡೆ ಬಂದ ಪ್ರಮುಖರನ್ನು ಸುದ್ದಿಗಾರರು ಮಾತನಾಡಿಸಿದಾಗ, ಚರ್ಚೆ ಆಗಿದೆ, ಅಂಥದ್ದೇನಿಲ್ಲ ಎಂದರು. ಪಟ್ಟು ಬಿಡದೇ ಕೇಳಿದಾಗ, ಚರ್ಚೆಯ ವಿಷಯಗಳನ್ನು ಮಾಧ್ಯಮದವರೊಂದಿಗೆ ಹಂಚಿಕೊಳ್ಳದಂತೆ ತೀರ್ವನಿಸಲಾಗಿದೆ ಎಂದರು. ಬೇರೆ ಬೇರೆ ಮುಖಂಡರನ್ನು ಕೇಳಿದಾಗಲೂ ಉತ್ತರ ಒಂದೇ ಆಗಿತ್ತು. ಅಂದರೆ, ಅಮಿತ್ ಷಾ ಅವರು ಚರ್ಚೆಯನ್ನು ಪೂರ್ಣಗೊಳಿಸುವ ಹಂತದಲ್ಲಿ ಎಲ್ಲರ ಬಾಯಿಗೆ ಬೀಗ ಹಾಕಿದ್ದರು!

    ಪಕ್ಷದವರೊಂದಿಗೆ ಔತಣ ಸವಿದ ಷಾ, ಮಾಧ್ಯಮದವರಿಗೆ ತಿಳಿಸದಂತೆ ಕಟ್ಟುಪಾಡು ವಿಧಿಸಿದ್ದು ಏಕೆ ಎನ್ನುವುದು ನಿಗೂಢವಾಗಿದೆ. ಬೇರೆ ಏನನ್ನೋ ರ್ಚಚಿಸಿರುವ ಸಾಧ್ಯತೆಯೂ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts