More

    ಎನ್‌ಇಪಿ ರದ್ದತಿ ರಾಜಕೀಯ ದುರುದ್ದೇಶ

    ಚಿತ್ರದುರ್ಗ: ರಾಜ್ಯ ಸರ್ಕಾರ ರಾಜಕೀಯ ದುರುದ್ದೇಶಕ್ಕಾಗಿ ಎನ್‌ಇಪಿ ರದ್ದು ಮಾಡಿದೆ. ಇದನ್ನು ಖಂಡಿಸಿ ಮುಂದಿನ ದಿನಗಳನ್ನು ಉಗ್ರ ಹೋರಾಟಕ್ಕೆ ರೂಪರೇಷೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರೇಮಾ ಜೋಡಿದಾರ್ ತಿಳಿಸಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ವಿದ್ಯಾರ್ಥಿಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಎನ್‌ಇಪಿ ಅಗತ್ಯ ತುಂಬಾ ಇದೆ. ಆದರೆ, ಎಸ್‌ಇಪಿ ಜಾರಿಗೊಳಿಸುತ್ತೇವೆಂದು ಈಗಿನ ಸರ್ಕಾರ ಹೇಳುತ್ತಿದೆ. ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ ಎಂದು ದೂರಿದರು.

    ರಾಜ್ಯದ ವಸತಿನಿಲಯಗಳು ಬಹಳ ದುಸ್ಥಿತಿಯಲ್ಲಿವೆ. ಹಲವೆಡೆ ಶೌಚ ಗೃಹಗಳಿಲ್ಲ, ತಿಂಡಿ-ಊಟ ಅವ್ಯವಸ್ಥೆಯಿಂದ ಕೂಡಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ನೂತನ ಕಟ್ಟಡಗಳು ನಿರ್ಮಾಣವಾಗುತ್ತಿಲ್ಲ. ಈ ಕುರಿತು ಎಬಿವಿಪಿ ಸರ್ವೇ ಕೈಗೊಂಡು ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದರು.

    ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ನಾಯಕತ್ವ ಗುಣ ಬೆಳೆಸಲು ನ. 9, 10ರಂದು ಬೆಂಗಳೂರಿನಲ್ಲಿ ಕಾಲೇಜು ಘಟಕಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮಾವೇಶ ಹಮ್ಮಿಕೊಂಡಿದೆ. ಸಹಿ ಸಂಗ್ರಹ ಕ್ಯಾಂಪೇನ್, ಸಾಂಸ್ಕೃತಿಕ ಚಳವಳಿ ಮಂಗಳೂರಿನಿಂದ ಆರಂಭವಾಗಲಿದೆ ಎಂದು ತಿಳಿಸಿದರು.

    ದಾವಣಗೆರೆ ವಿಭಾಗ ಸಂಚಾಲಕ ವರುಣಕೌಟಿ, ಜಿಲ್ಲಾ ಸಂಚಾಲಕ ಸಿದ್ದೇಶ, ನಗರ ಕಾರ್ಯದರ್ಶಿ ಗೋಪಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts