More

    ಎಚ್‌ಐವಿ ಜಾಗೃತಿಗಾಗಿ ಮ್ಯಾರಥಾನ್ ಓಟ  -ಯುವಜನೋತ್ಸವ ಭಾಗವಾಗಿ ಆಯೋಜನೆ

    ದಾವಣಗೆರೆ: ಯುವಜನೋತ್ಸವ ಕಾರ್ಯಕ್ರಮ ನಿಮಿತ್ತ ಎಚ್‌ಐವಿ ಜಾಗೃತಿಗಾಗಿ ದಾವಣರೆಯಲ್ಲಿ ಸೋಮವಾರ, 4 ಕಿ.ಮೀ.ವರೆಗೆ ಮ್ಯಾರಥಾನ್ ಓಟ ಸ್ಪರ್ಧೆ ನಡೆಸಲಾಯಿತು.
    ಓಟದ ಮೂಲಕವಾಗಿ ಸಾರ್ವಜನಿಕರಿಗೆ ಎಚ್‌ಐವಿ, ಏಡ್ಸ್ ಬಗ್ಗೆ ತಿಳಿವಳಿಕೆ, ಕಳಂಕ ಮತ್ತು ತಾರತಮ್ಯ ತಡೆಗಟ್ಟುವುದು, ಏಡ್ಸ್ ನಿಯಂತ್ರಣ ಕಾಯ್ದೆ, ಉಚಿತ ರಾಷ್ಟ್ರೀಯ ಸಹಾಯವಾಣಿ 1097, ಸೇವಾ ಸೌಲಭ್ಯಗಳ ಮಾಹಿತಿ ಕುರಿತು ಇತ್ಯಾದಿ ಅರಿವು ಮೂಡಿಸಲಾಯಿತು. 80ಕ್ಕೂ ಹೆಚ್ಚು ಯುವಕ-ಯುವತಿಯರು ಭಾಗವಹಿಸಿದ್ದರು.
    ಕರ್ನಾಟಕ ಏಡ್ಸ್ ನಿಯಂತ್ರಣ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ರಕ್ತಭಂಡಾರ, ಶಿಕ್ಷಣ ಇಲಾಖೆ, ಯುವಜನ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ಡಿಎಚ್‌ಒ ಡಾ. ಎಸ್.ಷಣ್ಮುಖಪ್ಪ ಚಾಲನೆ ನೀಡಿದರು. ಅಲ್ಲಿಂದ ಆರಂಭವಾದ ಓಟ, ಗುಂಡಿ ಮಹದೇವಪ್ಪ ವೃತ್ತ, ದಂಡ ವೈದ್ಯಕೀಯ ಕಾಲೇಜು ರಸ್ತೆ, ವಿದ್ಯಾನಗರ, ವಿದ್ಯಾರ್ಥಿಭವನ ಮಾರ್ಗವಾಗಿ ಜಿಲ್ಲಾಸ್ಪತ್ರೆಗೆ ಮರಳಿತು.
    ಮ್ಯಾರಥಾನ್ ಓಟದಲ್ಲಿ ಯುವಕರ ವಿಭಾಗದಲ್ಲಿ ಡಿ.ಆರ್.ಆರ್ ಪಾಲಿಟೆಕ್ನಿಕ್‌ನ ಆರ್. ಕೀರ್ತಿ ಪ್ರಥಮ, ಹರಿಹರ ಜಿ.ಎಫ್.ಜಿ.ಸಿ ಕಾಲೇಜಿನ ಆರ್.ಸಂಜೀವ್ ದ್ವಿತೀಯ, ದಾವಣಗೆರೆ ಸೈನ್ಸ್ ಅಕಾಡೆಮಿಯ ವೀರೇಂದ್ರನಾಯ್ಕ ತೃತೀಯ ಬಹುಮಾನ ಪಡೆದರು. ಯುವತಿಯರ ವಿಭಾಗದಲ್ಲಿ ದಾವಣಗೆರೆ ಪ್ರಥಮ ದರ್ಜೆ ಕಾಲೇಜಿನ ಅರ್ಚನಾ ಗಾಯಕ್‌ವಾಡ್ ಪ್ರಥಮ, ಎ.ವಿ.ಕೆ ಕಾಲೇಜಿನ ಪಿ.ಕೆ.ಅನುಷಾ ದ್ವಿತೀಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾನಿಯಾ ತೃತೀಯ ಬಹುಮಾನ ಪಡೆದರು. ಕ್ರಮವಾಗಿ 5 ಸಾವಿರ ರೂ, 3500 ರೂ ಹಾಗೂ 2500 ರೂ. ಹಾಗೂ ಎರಡೂ ವಿಭಾಗದಿಂದ ಏಳು ಮಂದಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.
    ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಪ್ರಭಾರ ಅಧೀಕ್ಷಕ ಡಾ.ಎಂ.ಬಿ. ನಾಗೇಂದ್ರಪ್ಪ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಕಾರ್ಯಕ್ರಮ ಅಧಿಕಾರಿ ಡಾ. ಡಿ.ಪಿ.ಮುರಳೀಧರ, ಹರಿಹರ ಎನ್ನೆಸ್ಸೆಸ್ ಅಧಿಕಾರಿ ಅನಂತನಾಯಕ, ಗುರುನಾಥ್, ವೈದ್ಯಾಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts