More

    ಎಕರೆಗೆ 50 ಸಾವಿರ ರೂ. ಪರಿಹಾರ ಕೊಡಿ

    ಔರಾದ್: ಔರಾದ್ (ಬಿ) ಮತ್ತು ಕಮಲನಗರ ತಾಲೂಕಿನಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿ ರೈತರ ಬೆಳೆ ನಷ್ಟವಾಗಿರುವುದರಿಂದ ಪ್ರತಿ ಎಕರೆಗೆ 50,000 ಸಾವಿರ ರೂ. ಪರಿಹಾರ ನೀಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಪಟ್ಟಣದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.

    ಪಟ್ಟಣದ ತಹಸಿಲ್ ಕಚೇರಿ ಆವರಣದಲ್ಲಿ ಕಿಸಾನ್ ಆಕ್ರೋಶ ಮೋಚರ್ಾ, ಸಂಭಾಜಿ ಬ್ರಿಗೇಡ್, ಗೋರ ಸೇನಾ, ರಾಜ್ಯ ರೈತ ಸಂಘಟನೆ, ಸುಭಾಶ್ಚಂದ್ರ ಬೋಸ್ ಯುವಕ ಸಂಘ, ಕರವೇ, ಅಖಿಲ ಭಾರತ ಕಿಸಾನ್ ಸಭಾ, ಕೆಆರ್ಎಸ್ ಪಕ್ಷದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಜೈ ಗ್ರೂಪ್ ಸಂಘಟನೆಯ ವ್ಯವಸ್ಥಾಪಕ ಜೈಸಿಂಗ್ ರಾಠೋಡ್, ತಾಲೂಕಿನಲ್ಲಿ ಈ ವರ್ಷ ವಾಡಿಕೆಗಿಂತ ಎರಡು ಪಟ್ಟು ಮಳೆಯಾಗಿದ್ದು, ರೈತರು ಬೆಳೆದ ಬೆಳೆ ಕೆಲವು ಕಡೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಹಲವು ಕಡೆ ಜಮೀನುಗಳಲ್ಲಿ ನೀರು ನಿಂತು ಬೆಳೆ ಸಂಪೂರ್ಣ ಹಾನಿಯಾಗಿದೆ ಎಂದು ತಿಳಿಸಿದರು.

    ರೈತರು ಸಾಲ ಮಾಡಿ ಬೀಜ ಮತ್ತು ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಹುಲುಸಾಗಿ ಬೆಳೆಯುವ ಹೊತ್ತಿನಲ್ಲಿ ಅತಿವೃಷ್ಟಿಯಿಂದ ಕಂಗಾಲಾಗಿದ್ದಾರೆ. ಸತತ ಒಂದೂವರೆ ತಿಂಗಳು ಸುರಿದ ಭಾರಿ ಮಳೆಯಿಂದಾಗಿ ಬಹಳಷ್ಟು ಕಡೆ ಬಡವರ ಮನೆಗಳು ನೆಲಕ್ಕುರುಳಿವೆ ಹಾಗೂ ರೈತರ ಜಾನುವಾರು ಸಾವನ್ನಪ್ಪಿವೆ. ಪಕೃತಿ ವಿಕೋಪದಿಂದಾಗಿ ಜನಸಾಮಾನ್ಯರು, ರೈತರು, ಕೂಲಿ ಕಾಮರ್ಿಕರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಸಕರ್ಾರ ಔರಾದ್, ಕಮಲನಗರ ತಾಲೂಕುಗಳನ್ನು ಅತಿವೃಷ್ಟಿಪೀಡಿತ ಎಂದು ಘೋಷಣೆ ಮಾಡಿ ರೈತರಿಗೆ ಆದ ಬೆಳೆಹಾನಿ ಪರಿಹಾರ ನೀಡುವಂತೆ ಒತ್ತಾಯಿಸಿದರು.

    ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅರುಣಕುಮಾರ ಅವರಿಗೆ ನೀಡಲಾಯಿತು. ಇದಕ್ಕೂ ಮುನ್ನ ವಿವಿಧ ಸಂಘಟನೆಗಳ ಹಾಗೂ ರೈತ ಸಂಘದ ಸಾವಿರಾರು ರೈತರು ಪಟ್ಟಣದ ಕನ್ನಡಾಂಬೆ ವೃತ್ತದಿಂದ ತಾಪಂ, ಕೇಂದ್ರ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಸಾರ್ವಜನಿಕ ಆಸ್ಪತ್ರೆ, ಬಸವನಗಲ್ಲಿ ಮಾರ್ಗವಾಗಿ ತಹಸಿಲ್ ಕಚೇರಿಯವರೆಗೆ ಬೃಹತ್ ಪಾದಯಾತ್ರೆ ನಡೆಸಿದರು.

    ಬಾಳು ರಾಠೋಡ್, ಸಂದೀಪ ವಾಸರೆ, ಮಾಣಿಕ ಚವ್ಹಾಣ್, ಶಿವಾಜಿ ಜಾಧವ್, ಶ್ರೀಮಂತ ಬಿರಾದಾರ್, ಪ್ರಕಾಶ ಬಾವಗೆ, ರತ್ನದೀಪ, ಅಜಯ ಕೋಟೆ, ಅನೀಲ ದೇವಕತ್ತೆ, ದಿನೇಶ ರಾಠೋಡ್, ದಿಲೀಪಕುಮಾರ ವಮರ್ಾ, ಸಂತೋಷ ಗುಡಪಳ್ಳಿ, ಪ್ರಭುಲಿಂಗ ಸ್ವಾಮಿ, ಸಿದ್ದರೆಡ್ಡಿ, ಪ್ರಭುದಾಸ, ಸಂಗಪ್ಪ ಬಂಡೆ ಇತರರಿದ್ದರು. ಔರಾದ್ ಪಿಎಸ್ಐ ಉಪೇಂದ್ರ, ಸಂತಪುರ ಪಿಎಸ್ಐ ಸಿದ್ದಲಿಂಗ ಗಿರಿಗೌಡರ್, ಚಿಂತಾಕಿ ಪಿಎಸ್ಐ ಸಿದ್ದಲಿಂಗ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts