More

    ಎಕರೆಗೆ 20 ಸಾವಿರ ರೂ. ಬರ ಪರಿಹಾರ ನೀಡಿ

    ಶಿವಮೊಗ್ಗ: ರಾಜ್ಯಾದ್ಯಂತ ಬರ ಆವರಿಸಿದ್ದು ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬರ ಪರಿಹಾರವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು. ಪ್ರತಿ ಎಕೆರೆಗೆ ಕನಿಷ್ಠ 20 ಸಾವಿರ ರೂ. ಪರಿಹಾರ ವಿತರಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಕಾರ್ಯಕಾರಣಿ ಕಾರ್ಯದರ್ಶಿ ವೀಣಾ ಸತೀಶ್ ಆಗ್ರಹಿಸಿದರು.

    ಮಳೆದ ಇಲ್ಲದೇ ಮೆಕ್ಕೆಜೋಳ, ಭತ್ತ ಸಹಿತ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಬಿತ್ತನೆ ಮಾಡಿದ ಖರ್ಚು ಸಹಿತ ಸಿಗದಂತೆ ಆಗಿದೆ. ಇಂತಹ ಕಷ್ಟದ ಸಂದರ್ಭದಲ್ಲಿ ರೈತರ ಕೈಹಿಡಿಯಬೇಕಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಲಹರಣ ಮಾಡುತ್ತಿರುವುದು ಸರಿಯಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
    ಈ ನಡುವೆ ರಾಜ್ಯ ಸರ್ಕಾರ ಪ್ರತಿ ಎಕರೆಗೆ ಮಧ್ಯಂತರ 2 ಸಾವಿರ ರೂ. ಪರಿಹಾರ ನೀಡುವುದಾಗಿ ಹೇಳಿರುವುದನ್ನು ಖಂಡಿಸಿದ ಅವರು, ಮೆಕ್ಕೆಜೋಳ ಬೆಳೆಯಲು ಪ್ರತಿ ಎಕೆರೆಗೆ 20 ಸಾವಿರ ರೂ. ವ್ಯಯವಾಗಿದೆ. ಭತ್ತಕ್ಕೆ 30 ಸಾವಿರ ರೂ. ಖರ್ಚು ಬಂದಿದೆ. ತೋಟಗಾರಿಕೆ ಬೆಳೆಗಳಿಗೆ ಲೆಕ್ಕವೇ ಸಿಗದಂತೆ ಆಗಿದೆ. ದೀರ್ಘಾವಧಿ ಬೆಳೆಯಾದ ಅಡಕೆ ಮಳೆ ಇಲ್ಲದೇ ಶೇ.50 ಇಳುವರಿ ಕಡಿಮೆಯಾಗಿದೆ. ಇದೆಲ್ಲದರ ಅರಿವಿದ್ದರೂ ಸಿಎಂ ಸಿದ್ದರಾಮಯ್ಯ 2 ಸಾವಿರ ರೂ. ನೀಡುವುದಾಗಿ ಹೇಳಿವುದು ಅವೈಜ್ಞಾನಿಕ ಎಂದು ಬೇಸರ ವ್ಯಕ್ತಪಡಿಸಿದರು.
    ಹಿಂದಿನ ಬಿಜೆಪಿ ಸರ್ಕಾರ ಅಡಕೆ ಸಂಶೋಧನೆಗೆ 10 ಕೋಟಿ ರೂ. ನೀಡಿದೆ. ಆದರೆ ಪರಿಹಾರ ಘೋಷಿಸಿಲ್ಲ. ಹಾಗಾಗಿ ಅಡಕೆ ಎಲೆಚುಕ್ಕೆ ಬಾಧಿತ ತೋಟಗಳ ಮಾಲೀಕರಿಗೆ ಪರಿಹಾರ ನೀಡಬೇಕು. ಕೂಡಲೇ ಸರ್ಕಾರವು ಬರ ಪರಿಹಾರವಾಗಿ ತೋಟಗಾರಿಕೆ ಬೆಳೆಗಳಿಗೆ ಪ್ರತಿ ಎಕರೆಗೆ 50 ಸಾವಿರ ರೂ., ಮೆಕ್ಕೆಜೋಳಕ್ಕೆ 20 ಸಾವಿರ ರೂ. ಮತ್ತು ಭತ್ತಕ್ಕೆ 30 ಸಾವಿರ ರೂ. ನೀಡಬೇಕು. ಇಲ್ಲದವಾದರೆ ಎಲ್ಲ ತಾಲೂಕುಗಳಲ್ಲೂ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
    ದಕ್ಷಿಣ ಪ್ರಾಂತ ಕಾರ್ಯದರ್ಶಿ ಪ್ರವೀಣ ಪಾಟೀಲ, ದಕ್ಷಿಣ ಪ್ರಾಂತ ಉಪಾಧ್ಯಕ್ಷ ಕೆ.ಸಿ.ಸದಾಶಿವಪ್ಪ, ಸಂಘದ ಜಿಲ್ಲಾಧ್ಯಕ್ಷ ಬಿ.ಚನ್ನಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂದೀಶ್ ಗೊಗ್ಗ, ಸುಧಾ ಪರಮೇಶ್ವರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts