More

    ಎಆರ್‌ಜಿ ಕಾಲೇಜಿನಲ್ಲಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮ

    ದಾವಣಗೆರೆ: ಯುವಪೀಳಿಗೆಯಲ್ಲಿ ಆತ್ಮಸ್ಥೈರ್ಯದ ಕೊರತೆಯಿದೆ. ಹೋರಾಟದ ಮನೋಭಾವನೆ ಬೆಳೆಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಿದೆ ಎಂದ ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ.ಸಿ.ಎಚ್. ಮುರುಗೇಂದ್ರಪ್ಪ ಹೇಳಿದರು.
    ನಗರದ ಎಆರ್‌ಜಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಇಂತಹ ಕಾರ‌್ಯಕ್ರಮಗಳ ಮೂಲಕ ಹೊರಬರಲಿದೆ. ಉತ್ತಮ ಶಿಕ್ಷಣದೊಂದಿಗೆ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.
    ಪ್ರಾಧ್ಯಾಪಕ ಡಾ.ಕೆ.ಬಿ. ರಂಗಪ್ಪ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಿ ಸರ್ವಾಂಗೀಣ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
    ಪ್ರಾಚಾರ್ಯ ಡಾ.ಜಿ.ಬಿ. ಬೋರಯ್ಯ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಸ್.ಬಿ. ನಾಗರಾಜ, ಕಾರ್ಯದರ್ಶಿ ಜಿ.ಒ.ದೇವೇಂದ್ರ, ಪಿಯು ಕಾಲೇಜಿನ ಪ್ರಾಚಾರ್ಯ ಬೊಮ್ಮಣ್ಣ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನಪ್ಪ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಅನಿತಾ ಕುಮಾರಿ, ಸಾಂಸ್ಕೃತಿಕ ಕಾರ್ಯದರ್ಶಿ ಡಾ.ಎಚ್.ಆರ್. ತಿಪ್ಪೇಸ್ವಾಮಿ, ಪ್ರೊ ಆನಂದ, ಪ್ರೊ. ರಮೇಶ ಪೂಜಾರ, ಡಾ. ಚಮನ್‌ಸಾಬ್, ಅಧೀಕ್ಷಕ ಜಿ.ಆರ್. ಕರಿಬಸಪ್ಪ, ಕವಿತಾ ಪಾಟೀಲ, ಬೇಬಿ ಅಮೀನಾ, ಉಮಾ, ರವಿ, ಮಂಜಪ್ಪ ಇದ್ದರು. ವಿದ್ಯಾರ್ಥಿನಿ ಅರುಂಧತಿ ಸ್ವಾಗತಿಸಿದರೆ, ಶ್ವೇತಾ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts