More

    ಉಳವಿ ಚನ್ನಬಸವೇಶ್ವರ ಜಯಂತಿ ಆಚರಣೆ

    ಬೈಲಹೊಂಗಲ, ಬೆಳಗಾವಿ: ಪಟ್ಟಣದ ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ಉಳವಿ ಶ್ರೀ ಚನ್ನಬಸವೇಶ್ವರ ಜಯಂತಿಯನ್ನು ಸಡಗರ, ಸಂಭ್ರಮದಿಂದ ಶನಿವಾರ ಆಚರಿಸಲಾಯಿತು. ಚನ್ನಬಸವೇಶ್ವರ ಮೂರ್ತಿಯ ತೊಟ್ಟಿಲೋತ್ಸವ, ಪೂಜೆ, ಪಲ್ಲಕ್ಕಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

    ಪ್ರಗತಿಪರ ರೈತ ಶಿವಾನಂದ ಬೆಳಗಾವಿ ಒಂದು ಕೆಜಿ ಬೆಳ್ಳಿಯಲ್ಲಿ ಚನ್ನಬಸವೇಶ್ವರ ಮೂರ್ತಿ ಮಾಡಿಸಿ, ಉಳವಿ ಚನ್ನಬಸವೇಶ್ವರ ಜಯಂತಿ ಕಮಿಟಿಗೆ ದೇಣಿಗೆಯಾಗಿ ಅರ್ಪಿಸಿ ಮಾತನಾಡಿ, ಬೈಲಹೊಂಗಲ ನಾಡು ಉಳವಿ ಕ್ಷೇತ್ರದ ಅಪಾರ ಭಕ್ತ ಸಮೂಹವನ್ನು ಹೊಂದಿದೆ. ಉಳವಿ ಜಾತ್ರೆಯನ್ನು ಇಲ್ಲಿ ಹಬ್ಬದಂತೆ ಆಚರಿಸಲಾಗುತ್ತದೆ. ದೇವರ ಸೇವೆಯಿಂದ ನೆಮ್ಮದಿ, ಆಶೀರ್ವಾದ ಫಲ ಲಭಿಸುತ್ತದೆ ಎಂದರು.

    ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ರಾಜು ಕುಡಸೋಮಣ್ಣವರ ಮಾತನಾಡಿ, ಶಿವಾನಂದ ಬೆಳಗಾವಿ ಅವರು, ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ರಂಗಗಳಲ್ಲಿ ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ. ಇಂಚಲ ಮಠಕ್ಕೆ, ಮರಡಿಬಸವೇಶ್ವರ, ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ಬಹಳಷ್ಟು ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ತನು, ಮನ, ಧನದಿಂದ ಸೇವೆ ಸಲ್ಲಿಸುತ್ತಿದ್ದು, ಬೆಳಗಾವಿ ಮನೆತನದ ಕಾರ್ಯ ಶ್ಲಾಘನೀಯವಾಗಿದೆ ಎಂದರು.

    ಹಿರಿಯರಾದ ಮಲ್ಲಿಕಾರ್ಜುನ ಬೋಳಣ್ಣವರ, ಈಶ್ವರ ಕೊಪ್ಪದ, ಮಲ್ಲಿಕಾರ್ಜುನ ಬೆಳಗಾವಿ, ಶ್ರೀಶೈಲ ಭಟ್ಟಿ, ರಾಜು ಸೊಗಲ, ಶಿವಾನಂದ ಬಡ್ಡಿಮನಿ, ವಿನಯ ಬೋಳಣ್ಣವರ, ಅಶೋಕ ಗುಂಡೂರ, ಸುದೀರ ವಾಲಿ, ಮಹಾಂತೇಶ ತೋಟಗಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts