More

    ಉಪಜಾತಿ ಬಳಸಿ ಬ್ರಾಹ್ಮಣತ್ವ ಒಡೆಯಬೇಡಿ, ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಎನ್. ಸಚ್ಚಿದಾನಂದಮೂರ್ತಿ ಮನವಿ

    ನೆಲಮಂಗಲ: ಬ್ರಾಹ್ಮಣರ ಉಪಜಾತಿಯನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಕೆಲವರು ಬ್ರಾಹ್ಮಣತ್ವವನ್ನು ಒಡೆಯುತ್ತಿರುವುದು ನೋವಿನ ಸಂಗತಿ ಎಂದು ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದಮೂರ್ತಿ ಹೇಳಿದರು.

    ನಗರದ ರಾಮಮಂದಿರದಲ್ಲಿ ತಾಲೂಕು ಬ್ರಾಹ್ಮಣ ಸಭಾ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಉಪನಯನ ಮಹೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

    ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಬಿಡದೆ ಸಾಮೂಹಿಕ ಉಪನಯನ ಮಾಡಲಾಗುತ್ತಿದೆ. ಅದರೆ ರಾಜ್ಯದಲ್ಲಿ ಇತ್ತೀಚೆಗೆ ಸಾಮೂಹಿಕ ಉಪನಯನಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಬ್ರಾಹ್ಮಣ ಸಮುದಾಯದ ಎಲ್ಲ ಉಪಜಾತಿ ಅವರನ್ನು ಒಗ್ಗೂಡಿಸಿ ಮೇ 10ರಂದು ವಿಧಾನಸೌಧದಲ್ಲಿ ಶಂಕರಚಾರ್ಯರ ಜಯಂತಿ ಆಚರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಶಂಕರಚಾರ್ಯರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ 17 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ಜೈಲುಶಿಕ್ಷೆಗೆ ಗುರಿಪಡಿಸಲಾಗಿದೆ ಎಂದರು.

    ಬ್ರಾಹ್ಮಣರಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನಗಳಿವೆ. ಅದನ್ನು ಕಾಪಾಡಿಕೊಳ್ಳುವ ಕರ್ತವ್ಯ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

    ಬ್ರಾಹ್ಮಣ ಅಭಿವೃದ್ಧಿ ನಿಗದ ಕಾರ್ಯ: ಪ್ರಧಾನಿ ನರೇಂದ್ರ ಮೋದಿ ಅವರು 2019ರಲ್ಲಿ ಪ್ರಥಮ ಬಾರಿಗೆ ಬ್ರಾಹ್ಮಣರಿಗೆ ಶೇ.10 ಮೀಸಲಾತಿ ನೀಡಿದ್ದಾರೆ. ಅದ್ದರಿಂದ 2021ರ ಜೂನ್ 26ರಂದು ಬ್ರಾಹ್ಮಣರಿಗೆ ಮೊದಲ ಬಾರಿ ಜಾತಿ ಅದಾಯ ಪ್ರಮಾಣಪತ್ರ ಕೊಡಿಸಿದ ಕೀರ್ತಿ ಬ್ರಾಹ್ಮಣ ಅಭಿವೃದ್ಧಿ ನಿಗಮದ್ದಾಗಿದೆ. ಜತೆಗೆ ಸಮುದಾಯದ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲೆಂದು ದೆಹಲಿಯ ಸಂಕಲ್ಪ ವಿಶ್ವವಿದ್ಯಾಲಯದೊಂದಿಗೆ ಹೊಂದಾಣಿಕೆ ಮಾಡಿಕೊಂಡು ತರಬೇತಿ ನೀಡಲಾಗುತ್ತಿದೆ ಎಂದು ಎಚ್.ಎಸ್. ಸಚ್ಚಿದಾನಂದಮೂರ್ತಿ ತಿಳಿಸಿದರು.

    ರಾಜ್ಯದಾದ್ಯಂತ ಎಸ್‌ಎಸ್‌ಎಲ್, ಪಿಯುಸಿ ಹಾಗೂ ಪದವಿಯಲ್ಲಿ ಅತಿಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ನಗದು, ಬೆಳ್ಳಿಯ ಪದಕ, ಕನ್ನಡದ ನಿಘಂಟುಸಹಿತ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಸ್ವಯಂ ಉದ್ಯೋಗ, ಹೈನುಗಾರಿಕೆ, ಸ್ತ್ರೀ ಸಬಲೀಕರಣಕ್ಕಾಗಿ ಸಾಕಷ್ಟು ಸಾಲಸೌಲಭ್ಯ ನಿಡಲಾಗಿದೆ. ನಿತ್ಯ ಬ್ರಾಹ್ಮರಣ ಶ್ರೇಯೋಭಿವೃದ್ಧಿಗೆ ನಿಗಮ ಶ್ರಮಿಸುತ್ತಿದೆ ಎಂದು ತಿಳಿಸಿದರು.

    ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ನಿರ್ದೇಶಕಿ ವತ್ಸಲಾ, ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಎನ್.ಎಸ್. ಜಗನ್ನಾಥ್‌ರಾವ್, ಉಪಾಧ್ಯಕ್ಷ ಕೆ. ರಾಜಣ್ಣ, ಕಾರ್ಯದರ್ಶಿ ಎಂ.ಎಸ್. ರಾಮಕೃಷ್ಣಮೂರ್ತಿ, ಸಹಕಾರ್ಯದರ್ಶಿ ವೆಂಕಟಸುಬ್ಬಣ್ಣ, ಖಜಾಂಚಿ ಎಸ್.ಎ. ಭವಾನಿ, ರಾಘವೇಂದ್ರ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಎಸ್. ವಿಜಯೀಂದ್ರರಾವ್, ಕೆರೆಬಾಗಿಲು ಶ್ರೀರಾಮ ಮಂದಿರ ಅಧ್ಯಕ್ಷ ಎಸ್. ನಾಗಭೂಷಣ್, ಶ್ರೀ ಮಾತಾ ವಿಪ್ರ ಮಹಿಳಾ ಮಂಡಳಿ ಅಧ್ಯಕ್ಷೆ ಉಮಾ, ಮುಖಂಡರಾದ ಕೇಶವ್, ರಕ್ಷಿತ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts