More

    ಉದ್ಯೋಗ ಖಾತ್ರಿ ಯೋಜನೆ ಕೃಷಿ ಅಭಿವೃದ್ಧಿಗೆ ಬಳಸಿಕೊಳ್ಳಿ

    ಹಾವೇರಿ: ಮಹಾತ್ಮ ಗಾಂಧಿ ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆ ಕೇವಲ ಗ್ರಾಮದ ರಸ್ತೆ, ಚರಂಡಿ ನಿರ್ವಣಕ್ಕೆ ಮಾತ್ರ ಸೀಮಿತವಲ್ಲ. ಕೃಷಿ ಚಟುವಟಿಕೆಯ ಸಮಗ್ರ ಅಭಿವೃದ್ಧಿಗೆ ಯೋಜನೆಯನ್ನು ರೈತರು ಬಳಸಿಕೊಳ್ಳಬೇಕು ಎಂದು ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ ತಿಳಿಸಿದರು.

    ರಾಣೆಬೆನ್ನೂರ ತಾಲೂಕು ಕಾಕೋಳ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಪೂಜಾರಿ ಕೆರೆ ಹೂಳೆತ್ತುವ ಕಾಮಗಾರಿಯ ಶ್ರಮದಾನ, ರೋಜಗಾರ್ ದಿನಾಚರಣೆ, ಕೂಲಿ ಕಾರ್ವಿುಕರಿಗೆ ಆರೋಗ್ಯ ತಪಾಸಣೆ, ಮಹಿಳಾ ಕಾಯಕೋತ್ಸವ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಾನಾಡಿದರು.

    ಕೃಷಿಕರು ವೈಯಕ್ತಿಕ ಬದು, ಕೃಷಿ ಹೊಂಡ, ದನದ ಕೊಟ್ಟಿಗೆ, ಎರೆ ಹುಳು ತೊಟ್ಟಿ ನಿರ್ವಣ, ಬಾಳೆ ಬೆಳೆಯ ಗುಂಡಿ ತೋಡುವುದು ಸೇರಿ ರೇಷ್ಮೆ ತೋಟಗಾರಿಕೆ ಚಟುವಟಿಕೆಗಳಿಗೆ ರೈತರು ನೆರವು ಪಡೆಯಬಹುದು. ಉದ್ಯೋಗ ಖಾತ್ರಿ ಯೋಜನೆ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಶ್ರಮದಾನ ಕಾರ್ಯಕ್ರಮ ನಡೆಸಲಾಗವುದು ಎಂದರು.

    ಪ್ರಗತಿಪರ ರೈತ ಚನ್ನಬಸಪ್ಪ ಕೊಂಬಳಿ, ನೋಡಲ್ ಅಧಿಕಾರಿ ಮಹಾಂತೇಶ ಮಾತನಾಡಿದರು. ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ಗ್ರಾಪಂ ಅಧ್ಯಕ್ಷ ಕರಿಯಪ್ಪ ಕುದರಿಹಾಳ, ಹಾವೇರಿ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಜಿಪಂ ಮುಖ್ಯ ಯೋಜನಾಧಿಕಾರಿ ನಿರ್ಮಲಾ ಹಾಗೂ ಜಿಲ್ಲಾ, ತಾಲೂಕುಮಟ್ಟದ ಅಧಿಕಾರಿಗಳಿದ್ದರು. ಕೂಲಿಕಾರ್ವಿುಕರಿಗೆ ಉದ್ಯೋಗ ಖಾತ್ರಿ ಜಾಬ್​ಕಾರ್ಡ್ ವಿತರಿಸಲಾಯಿತು. ಕಾಕೋಳ, ಛತ್ರ ಹಾಗೂ ವೆಂಕಟಾಪುರ ಗ್ರಾಮದ ಕೂಲಿಕಾರ್ವಿುಕರ ಆರೋಗ್ಯ ತಪಾಸಣೆ ನಡೆಸಲಾಯಿತು.

    ನಂತರ ಕೂಲಿಕಾರ್ವಿುಕರೊಂದಿಗೆ ಸಿಇಒ ಮಹಮ್ಮದ್ ರೋಷನ್, ಅಧ್ಯಕ್ಷ ಏಕನಾಥ ಬಾನುವಳ್ಳಿ ಗುದ್ದಲಿ, ಪಿಕಾಸಿಯಿಂದ ಮಣ್ಣು ತೆಗೆದು ಬುಟ್ಟಿಯಲ್ಲಿ ತುಂಬಿ ತಲೆ ಮೇಲೆ ಹೊತ್ತು ಸಾಗಿಸಿ ಶ್ರಮದಾನ ಮಾಡಿದರು.

    ನಿರ್ಮಲ ಹಾವೇರಿ ಜಿಲ್ಲೆಗೆ ಸಂಕಲ್ಪ

    ಮುಂಗಾರು ಮಳೆಗೆ ಮುನ್ನ ಜಿಲ್ಲೆಯ 617 ಸಾಂಪ್ರದಾಯಿಕ ನೀರಿನ ಮೂಲಗಳ ಪುನಶ್ಚೇತನಗೊಳಿಸಲು ಏ. 1ರಿಂದ ಉದ್ಯೋಗ ಖಾತ್ರಿಯಡಿ 22 ಸಾವಿರ ಕೃಷಿ ಪೂರಕ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಜಿಪಂ ಸಿಇಒ ಮಹಮ್ಮದ್ ರೋಷನ್ ಹೇಳಿದರು.

    ಜಿಲ್ಲೆಯು ಕೃಷಿ ಪ್ರಧಾನವಾಗಿದ್ದು, ಸಾಂಪ್ರದಾಯಿಕ ಜಲಮೂಲಗಳನ್ನು ಗುರುತಿಸಿ ಪುನಶ್ಚೇತನಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಗ್ರಾಮಗಳಲ್ಲಿರುವ ಅನೈರ್ಮಲ್ಯ ತೊಡೆದು ಹಾಕಿ ಸ್ವಚ್ಛತೆ ಕಾಪಾಡಲು ಜಿಪಂ ವತಿಯಿಂದ ನಿರ್ಮಲ ಹಾವೇರಿ ಜಿಲ್ಲೆ ಎಂಬ ಹೊಸ ಯೋಜನೆ ರೂಪಿಸಲಾಗಿದೆ. ಸ್ವಚ್ಛ ಭಾರತ ಯೋಜನೆ ಹಾಗೂ ಉದ್ಯೋಗ ಖಾತ್ರಿ ಯೋಜನೆ ಸಮನ್ವಯಗೊಳಿಸಿ ಗ್ರಾಮಗಳ ನೈರ್ಮಲ್ಯಕ್ಕೆ ಆದ್ಯತೆ ನೀಡಲಾಗುವುದು. ಪ್ರತಿ ಗ್ರಾಮದಲ್ಲೂ ಬಚ್ಚಲು ಮನೆಯ ನೀರು, ಕೊಳಚೆ ನೀರು ಚರಂಡಿ ಮೂಲಕವೇ ಹಾದುಹೋಗಬೇಕು. ಎಲ್ಲ ಕೊಳಚೆ ನೀರನ್ನು ಒಂದು ಗುಂಡಿಯಲ್ಲಿ ಸಂಗ್ರಹಿಸಿ ನೈಸರ್ಗಿಕವಾಗಿ ಶುದ್ಧೀಕರಿಸಿ ಕೆರೆಗೆ ಗುಣಮಟ್ಟದ ನೀರು ಹರಿಸಲಾಗುವುದು. ವೈಜ್ಞಾನಿಕ ಮಾದರಿಯಲ್ಲಿ ಗ್ರಾಮದ ಸ್ವಚ್ಛತೆ ನಿರ್ವಹಣೆಗೆ ಈ ಎರಡು ಯೋಜನೆಗಳನ್ನೂ ಸಮನ್ವಯಗೊಳಿಸಿ ಅನುಷ್ಠಾನಗೊಳಿಸಲು ಗ್ರಾಮೀಣಾಡಳಿತ ಮುಂದಾಗಬೇಕು. ಇದಕ್ಕಾಗಿ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳು ಪರಸ್ಪರ ರ್ಚಚಿಸಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts