More

    ಉದ್ಯಾನದಲ್ಲಿ ಮಕ್ಕಳ ಕಲರವ

    ಶಶಿಧರ ಕುಲಕರ್ಣಿ ಮುಂಡಗೋಡ

    ಕರೊನಾ ಹಿನ್ನೆಲೆಯಲ್ಲಿ ಲಾಕ್​ಡೌನ್ ಆದಾಗಿನಿಂದ ಮಕ್ಕಳು ಸ್ವಚ್ಛಂದವಾಗಿ ಹೊರಗೆ ಓಡಾಡುವುದು ಕಷ್ಟಕರವಾಗಿತ್ತು. ಆದರೀಗ, ಪಟ್ಟಣ ಪಂಚಾಯಿತಿಯವರು ಮಕ್ಕಳಿಗೆ ಸಂತೋಷದ ಸುದ್ದಿ ನೀಡಿದ್ದಾರೆ. ಪಟ್ಟಣ ಪಂಚಾಯಿತಿ ಕಚೇರಿ ಎದುರಿನ ಉದ್ಯಾನದಲ್ಲಿ ಆಟಿಕೆ ಸಾಮಾನು ಮತ್ತು ವ್ಯಾಯಾಮ ಪರಿಕರ ಅಳವಡಿಸಿ ಮಕ್ಕಳು ಆಟವಾಡಲು ಅನುವು ಮಾಡಿಕೊಟ್ಟಿದ್ದಾರೆ.

    ಪಟ್ಟಣ ಪಂಚಾಯಿತಿ ವತಿಯಿಂದ 2017-18ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ಸಾಮಾನ್ಯ ಕಾರ್ಯನಿರ್ವಹಣೆ ಅನುದಾನ 3 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನದ ಒಂದು ಬದಿಯಲ್ಲಿ ವಿಶೇಷ ಆಟಿಕೆ ಸಾಮಾನುಗಳು ಮತ್ತು ಇನ್ನೊಂದು ಬದಿಯಲ್ಲಿ ವ್ಯಾಯಾಮ ಯಂತ್ರಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಜೋಕಾಲಿ (ಸ್ವಿಂಗ್ 2 ಸೀಟರ್), ಸೀಸಾ, ಜಾರು ಬಂಡಿ (ವೇವ್ ಸ್ಲೈಡ್) ಆಟಿಕೆ ಸಾಮಾನುಗಳು. ಚೆಸ್ಟ್ ಪ್ರೆಸ್ಸಿಂಗ್ ಮಷಿನ್, ಸ್ಟಾ್ಯಂಡಿಂಗ್ ಟ್ವಿಸ್ಟರ್, ಥೈಚಿ ಸ್ಪಿನ್ನರ್ ಮತ್ತು ಏರ್ ವಾಕರ್ ವ್ಯಾಯಾಮ ಯಂತ್ರಗಳನ್ನು ಅಳವಡಿಸಲಾಗಿದೆ.

    ನಿತ್ಯ ಬೆಳಗ್ಗೆ ಮತ್ತು ಸಂಜೆ ಪಾಲಕರು ಮಕ್ಕಳನ್ನು ಉದ್ಯಾನಕ್ಕೆ ಕರೆದುಕೊಂಡು ಬಂದು ಆಟ ಆಡಿಸುತ್ತಾರೆ. ಮಕ್ಕಳು ಆಟ ಆಡಿ ಖುಶಿ ಪಡುತ್ತಿದ್ದಾರೆ. ದಿನದಿಂದ ದಿನಕ್ಕೆ ಉದ್ಯಾನದಲ್ಲಿ ಆಡಲು ಬರುವ ಮಕ್ಕಳ ಮತ್ತು ಪಾಲಕರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ.

    ಉದ್ಯಾನದಲ್ಲಿ ಪಟ್ಟಣ ಪಂಚಾಯಿತಿಯು ಆಟಿಕೆ ಸಾಮಾನು ಅಳವಡಿಸಿದ ನಂತರ ನಮ್ಮ ಮಗಳನ್ನು ನಿತ್ಯ ಬೆಳಗ್ಗೆ ಮತ್ತು ಸಂಜೆ ಆಟವಾಡಲು ಕರೆದುಕೊಂಡು ಬರುತ್ತಿದ್ದೇವೆ. ಇದರಿಂದ ಅವಳಿಗೆ ಮತ್ತು ನಮಗೂ ಸಂತಸವಾಗಿದೆ.
    | ಯಾಸ್ಮಿನ್​ಬಾನು ಮೆಹಬೂಬಸಾಬ್ ಮುಗಳಿಕಟ್ಟಿ ಪಾಲಕರು

    ಪ.ಪಂ. ಎದುರಿನ ಉದ್ಯಾನದಲ್ಲಿ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ವ್ಯಾಯಾಮ ಪರಿಕರ ಮತ್ತು ಆಟಿಕೆ ಸಾಮಾನುಗಳನ್ನು ಅಳವಡಿಸಲಾಗಿದೆ. ಇವುಗಳಿಗೆ ಯಾರೂ ಹಾನಿ ಮಾಡದೇ ಅವುಗಳ ಸದುಪಯೋಗ ಪಡೆಯಬೇಕು. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಅನುದಾನ ನೀಡಿ ಅಭಿವೃದ್ಧಿಪಡಿಸಲಾಗುವುದು.
    | ಶಂಕರ ದಂಡಿನ ಪ.ಪಂ. ಕಿರಿಯ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts