More

    ಉತ್ತರ ಕನ್ನಡ ಈಗ ಕರೊನಾ ಮುಕ್ತ

    ಕಾರವಾರ: ಇಲ್ಲಿನ ಅರಗಾ ನೌಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರೊನಾ ರೋಗಿ ಸಂಪೂರ್ಣ ಗುಣಮುಖರಾಗಿ ಗುರುವಾರ ಬಿಡುಗಡೆಯಾಗಿದ್ದು, ಈ ಮೂಲಕ ಉತ್ತರ ಕನ್ನಡ ಜಿಲ್ಲೆ ಕರೊನಾ ಮುಕ್ತವಾಗಿದೆ.

    ಜಿಲ್ಲೆಯ ವ್ಯಾಪ್ತಿಯಲ್ಲಿ ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ ಎಲ್ಲ ರೋಗಿಗಳ ಗಂಟಲಿನ ದ್ರವದ ಮಾದರಿಯೂ ನೆಗೆಟಿವ್ ಬಂದಿದೆ. ಹೊರಗಿನಿಂದ ಯಾರೂ ರೋಗ ಹರಡಿಸದಿದ್ದಲ್ಲಿ ಉತ್ತರ ಕನ್ನಡ ಸೇಫ್ ಆಗಲಿದೆ.

    ಉತ್ತರ ಕನ್ನಡದಲ್ಲಿ ಮಾರ್ಚ್ 22ರಂದು ಮೊದಲ ಕರೊನಾ ಪ್ರಕರಣ ಕಾಣಿಸಿಕೊಂಡಿತ್ತು. ನಂತರ ಏ. 14ರವರೆಗೂ ಭಟ್ಕಳ ಮೂಲದ 11 ಜನರಲ್ಲಿ ಕರೊನಾ ಸೋಂಕು ಇರುವುದು ಖಚಿತವಾಗಿತ್ತು. ಐವರು ದುಬೈನಿಂದ ಆಗಮಿಸಿದವರಲ್ಲಿ ಸೋಂಕು ಕಾಣಿಸಿಕೊಂಡರೆ, ಅವರ ಸಂಪರ್ಕಕ್ಕೆ ಬಂದ 6 ಜನರು ರೋಗದಿಂದ ಬಳಲಬೇಕಾಯಿತು.

    ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಜಿಪಂ ಸಿಇಒ ಎಂ.ರೋಶನ್,ಭಟ್ಕಳ ಉಪವಿಭಾಗಾಧಿಕಾರಿ ಭರತ್, ಡಿಎಚ್​ಒ ಡಾ.ಜಿ.ಎನ್.ಅಶೋಕ ಕುಮಾರ್, ನೋಡಲ್ ಅಧಿಕಾರಿ ಡಾ.ಶರದ್ ನಾಯಕ ನೇತೃತ್ವದಲ್ಲಿ ತಂಡ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಪರಿಣಾಮ ಉತ್ತರ ಕನ್ನಡ ಈಗ ಕರೊನಾ ಮುಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts