More

    ಕುರುಬ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕಾ ಅಂದ್ರೆ, ಸಾಮಾಜಿಕ ನ್ಯಾಯಕ್ಕೆ ಬದ್ಧ ನಾನು ಅಂದ್ರ ಸಿದ್ದರಾಮಯ್ಯ

    ಬೆಂಗಳೂರು: ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಚಾರದಲ್ಲಿ ರಾಜಕೀಯ ನಾಯಕರ ನಡುವೆ ಕಿತ್ತಾಟ ಶುರುವಾಗಿದೆ.
    ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಇತ್ತೀಚೆಗೆ ಈಶ್ವರಪ್ಪ ಮನೆಯಲ್ಲಿ ಸಭೆ ಮಾಡಿದ್ದರು. ನಾನು ಎಲ್ಲಿಗೂ ಹೋಗಿಲ್ಲ. ನಾನು ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುವವನು. ನನ್ನನ್ನು ಅವರು ಕರೆದೇ ಇಲ್ಲ. ಸ್ವಾಮೀಜಿಗಳು ಭಾಗವಹಿಸಿರಬಹುದು ಎಂದರು.

    ಯಾದಗಿರಿ, ಬೀದರ್, ಕಲಬುರಗಿಯಲ್ಲಿ ಗೊಂದಲವಿದೆ. ಗೊಂಡ, ರಾಜಗೊಂಡ ಎಸ್ಟಿಗೆ ಸೇರಿಸುವ ಗೊಂದಲವಿದೆ. ಎಸ್‌ಟಿಗೆ ಸೇರಿಸುವಂತೆ ನಾವು ಕೇಳಿದ್ದೇವೆ. ಈಶ್ವರಪ್ಪ ಅದನ್ನು ಮೊದಲು ಮಾಡಿಸಲಿ. ಕೋಳಿ ಸಮಾಜಕ್ಕೂ ನಾವು ಶಿಫಾರಸು ಮಾಡಿದ್ದೆವು, ಈಶ್ವರಪ್ಪ ಅದನ್ನೂ ಮೊದಲು ಮಾಡಿಸಲಿ ಎಂದ ಸವಾಲು ಹಾಕಿದರು.

    ಈಶ್ವರಪ್ಪ ಮತ್ತು ನಾನು ವೈಯುಕ್ತಿಕ ಉತ್ತಮ ಸ್ನೇಹಿತರು, ಆದರೆ ರಾಜಕೀಯ ಸಿದ್ಧಾಂತವೇ ಬೇರೆ ಎಂದೂ ಸಹ ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts