More

    ಈರುಳ್ಳಿ, ಮೆಣಸಿನಕಾಯಿ ಬೆಳೆವಿಮೆ ಮಂಜೂರು ಮಾಡುವಂತೆ ಮನವಿ

    ಗದಗ: ಜಿಲ್ಲೆಯ ರೋಣ ತಾಲೂಕಿನ ರೈತರಿಗೆ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಗಳ ವಿಮೆ ಹಣವನ್ನು ಮಂಜೂರು ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂ ಜಿಲ್ಲಾ ಟಕದ ರೈರತು ಶುಕ್ರವಾರ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್​ ಅವರಿಗೆ ಮನವಿ ಸಲ್ಲಿಸಿದರು.
    ಮನವಿ ಸಲ್ಲಿಸಿದ ಮಾತನಾಡಿದ ಅಧ್ಯಕ್ಷ ಮುತ್ತನಗೌಡ ಚೌಡರಡ್ಡಿಯವರು ಅತಿವೃಷ್ಟಿಯಿಂದ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಗಳು ಸಂಪೂರ್ಣ ನಾಶವಾಗಿರುವ ವಿಷಯ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದೆ. ಈ ಬೆಳೆಗಳನ್ನು ನಂಬಿ ನಮ್ಮ ಕೃಷಿ ಚಟುವಟಿಕೆಗಳು ಸಾಗುತ್ತಿದ್ದವು. ಆದರೆ, ಬೆಳೆಗಳು ಚೆನ್ನಾಗಿ ಬೆಳೆದು ಕೈ ಸೇರುವ ವೇಳೆಗೆ ಅತಿವೃಷ್ಠಿಯಿಂದ ಸಂಪೂರ್ಣ ಬೆಳೆ ನಾಶವಾಗಿದೆ. ಆದ್ದರಿಂದ ರೈತರಿಗೆ ತುಂಬಲಾರದ ನಷ್ಟವಾಗಿದ್ದು ಸದರಿ ಬೆಳೆವಿಮೆ ಮೊತ್ತವನ್ನು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.
    ರೋಣ ತಹಸೀಲ್ದಾರರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಕೆಲವೊಂದು ಹಳ್ಳಿಗಳಿಗೆ ಗ್ರಾಮ ಲೆಕ್ಕಾಧಿಕಾರಿಗಳು ಇರುವುದಿಲ್ಲ. ಹಾಗಾಗಿ ರೈತರಿಗೂ ಮಾಹಿತಿ ಸಿಗುತ್ತಿಲ್ಲ. ಒಂದು ವಾರದೊಳಗೆ ರೈತರ ಬ್ಯಾಂಕ್​ ಖಾತೆಗೆ ಬೆಳೆವಿಮೆ ಹಣವನ್ನು ಜಮಾ ಮಾಡಬೇಕು ಎಂದು ಆಗ್ರಹಿಸಿದರು.
    ಈ ಸಂದರ್ಭದಲ್ಲಿ ಮೇರಾಜ ಭಾವಿ, ಸಂಗಮೇಶ ಪರಡ್ಡಿ, ಸಂಗನಗೌಡ ಪೊಲೀಸ ಪಾಟೀಲ, ಬಸವರಾಜ ಗದಗೇರಿ, ಮುತ್ತಣ್ಣ ಚೌಗರಡ್ಡಿ, ಬಸವರಾಜ ಭೂಸರಡ್ಡಿ, ಶಂಭು ಮಸಲವಾಡ, ಸೋಮನಗೌಡ ಮೂಗನೂರ, ಶಿವಾನಂದ ಗದಗೇರಿ, ಶಿವು ಗಣಾಚಾರಿ, ಜಯಾನಂದ ಗದಗೇರಿ, ಗಂಗಾಧರ ಅಗ್ಗಿಮಠ, ರಾಮನಗೌಡ ಮೂಗನೂರ ಸೇರಿದಂತೆ ಇತರರು ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts